Advertisement

BJP; ಸಿಂಧಿಯಾ ಅವರಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಲಿರುವ ಸಚಿವ ಕುರಿಯನ್

09:48 AM Aug 21, 2024 | Team Udayavani |

ಭೋಪಾಲ್: ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಗೆ ಆಯ್ಕೆಯಾದ ನಂತರ ತೆರವಾದ ಮಧ್ಯಪ್ರದೇಶದ (Madhya Pradesh) ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ (BJP) ಮಂಗಳವಾರ ಕೇಂದ್ರ ರಾಜ್ಯ ಖಾತೆಯ ಸಚಿವ, ಕೇರಳದ ಜಾರ್ಜ್ ಕುರಿಯನ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

Advertisement

ರಾಜಸ್ಥಾನದಿಂದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ಹರಿಯಾಣ ಸಚಿವ ಕಿರಣ್ ಚೌಧರಿ, ಒಡಿಶಾದಿಂದ ಮಮತಾ ಮೊಹಾಂತಾ, ತ್ರಿಪುರದಿಂದ ರಾಜೀವ್ ಭಟ್ಟಾಚಾರ್ಯ, ಮಹಾರಾಷ್ಟ್ರದಿಂದ ಧೈರ್ಯಶೀಲ್ ಪಾಟೀಲ್, ಬಿಹಾರದಿಂದ ಮನನ್ ಕುಮಾರ್ ಮಿಶ್ರಾ, ಅಸ್ಸಾಂನಿಂದ ಮಿಷನ್ ರಂಜನ್ ದಾಸ್ ಮತ್ತು ರಾಮೇಶ್ವರ ತೇಲಿ ಇದ್ದಾರೆ. ತೆಲಂಗಾಣ ಮತ್ತು ಒಡಿಶಾದ ಎರಡು ಸ್ಥಾನಗಳಿಗೂ ಉಪಚುನಾವಣೆ ನಡೆಯುತ್ತಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಗುನಾ ಕ್ಷೇತ್ರದಿಂದ ಆಯ್ಕೆಯಾದ ನಂತರ ಕೇಂದ್ರ ಸಚಿವ(Union Minister) ಸಿಂಧಿಯಾ ಅವರು ತಮ್ಮ ರಾಜ್ಯಸಭಾ ಸ್ಥಾನವನ್ನು ತೆರವು ಮಾಡಿದ್ದರು. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸರ್ಬಾನಂದ ಸೋನವಾಲ್ ಅವರು ಲೋಕಸಭೆಗೆ ಆಯ್ಕೆಯಾದ ಬಳಿಕ ರಾಜ್ಯಸಭಾ ಸ್ಥಾನಗಳು ತೆರವಾಗಿದ್ದವು.

9 ರಾಜ್ಯಗಳಲ್ಲಿ ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದ 11 ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಮತ್ತು ಏಳು ಆಡಳಿತಾರೂಢ ಬಿಜೆಪಿ ಕೈಯಲ್ಲಿ ಇವೆ.

ಕೇರಳದ ನಾಯಕ, ಅಲ್ಪಸಂಖ್ಯಾಕ ವ್ಯವಹಾರ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಯ ರಾಜ್ಯ ಖಾತೆ ಸಚಿವರಾಗಿರುವ ಕುರಿಯನ್, ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯ ಸಂಪೂರ್ಣ ಬಲವನ್ನು ನೀಡಿದರೆ ಸುಲಭವಾಗಿ ಗೆಲ್ಲಬಹುದಾಗಿದೆ.

Advertisement

230 ಸದಸ್ಯ ಬಲದ ಸದನದಲ್ಲಿ ಬಿಜೆಪಿ 163, ಕಾಂಗ್ರೆಸ್ 64 ಮತ್ತು ಭಾರತ್ ಆದಿವಾಸಿ ಪಕ್ಷ (ಬಿಎಪಿ) ಒಬ್ಬ ಶಾಸಕರನ್ನು ಹೊಂದಿದೆ. ಸದ್ಯ ಎರಡು ಸ್ಥಾನಗಳು ಖಾಲಿ ಇವೆ.

Advertisement

Udayavani is now on Telegram. Click here to join our channel and stay updated with the latest news.

Next