ಹುಬ್ಬಳ್ಳಿ: ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿದ್ದು, ನ್ಯಾನೋ ಯೂರಿಯಾ ಬಳಕೆ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ರಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನಗಳ ಖಾತೆ ಸಹಾಯಕ ಸಚಿವ ಭಗವಂತ ಖೂಬಾ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3.40 ಲಕ್ಷ ಟನ್ ರಸಗೊಬ್ಬರ ಉತ್ಪಾದನೆಯಾಗಿದ್ದು, ರಾಜ್ಯದಲ್ಲಿ ಐದು ಹಳೇ ಫ್ಯಾಕ್ಟರಿಗಳನ್ನು ಪುನರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ನ್ಯಾನೋ ಯುರಿಯಾ ಕ್ರಾಂತಿಕಾರಕ ಉತ್ಪನ್ನವಾಗಿದೆ. ಬೆಂಗಳೂರಿನಲ್ಲಿ ಇದು ಉತ್ಪಾದನೆ ಆಗುತ್ತಿದೆ. ಹರಳು ಯೂರಿಯಾ ಗಿಂತಲೂ ಜನನ ಕಡಿಮೆ ದರಕ್ಕೆ ದೊರೆಯುತ್ತದೆ ಎಂದರು.
ಇದನ್ನೂ ಓದಿ:ಭಾರಿ ಚಳಿಯ ನಡುವೆಯೂ ಜಮ್ಮುವಿನಲ್ಲಿ ಭಾರತ್ ಜೋಡೋ ಯಾತ್ರೆ ; ಸಂಜಯ್ ರಾವತ್ ಭಾಗಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಮಗ್ರಿಗಳ ದರ ಹೆಚ್ಚಳದಿಂದ ರಸಗೊಬ್ಬರ ದರ ಹೆಚ್ಚಳವಾಗಿದೆ, ಆದರೆ, ಕೇಂದ್ರ ಸರಕಾರ ರೈತರಿಗೆ ಹಳೇ ದರಕ್ಕೆ ನೀಡುತ್ತಿದೆ ಕಳೆದ ವರ್ಷ ರಸಗೊಬ್ಬರ ಮೇಲೆ 1.40 ಲಕ್ಷ ಕೋಟಿ ರೂ. ಸಬ್ಬಿಡಿ ನೀಡಿದ್ದರೆ, ಈ ವರ್ಷ 2.50ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ ಎಂದರು.
Related Articles
ಯಾದಗಿರಿ ಜಿಲ್ಲೆಯಲ್ಲಿ ಫಾರ್ಮಸಿ ಪಾರ್ಕ್ ಸ್ಥಾಪನೆಗೆ ಅನುಮೋದನೆ ದೊರೆತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 10 ಲಕ್ಷ ಯುವಕರಿಗೆ ಉದ್ಯೋಗ ನೀಡಲು ಮುಂದಾಗಿದ್ದು, ಅಕ್ಟೋಬರ್ ನಲ್ಲಿ ದೇಶದಲ್ಲಿ 75 ಸಾವಿರ, ನವೆಂಬರ್ ನಲ್ಲಿ 72 ಸಾವಿರ ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಶುಕ್ರವಾರ ದೇಶಾದ್ಯಂತ 71 ಸಾವಿರ ಜನರಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 206 ಜನರಿಗೆ ನೇಮಕಾತಿ ಪತ್ರ ನೀಡಲಾಯಿತು ಎಂದರು.