Advertisement

COVID-19; ಮನ್ಸುಖ್ ಮಾಂಡವಿಯಾ ಮಹತ್ವದ ಸಭೆ; ರಾಜ್ಯಗಳಲ್ಲಿ ಸಕಲ ಸಿದ್ಧತೆಗೆ ಕರೆ

03:33 PM Apr 07, 2023 | Team Udayavani |

ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಶುಕ್ರವಾರ ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಹತ್ವದ ಸಂವಾದ ನಡೆಸಿದರು.

Advertisement

ಕೋವಿಡ್-19 ನಿರ್ವಹಣೆಗಾಗಿ ರಾಜ್ಯಗಳು ಜಾಗರೂಕರಾಗಿರಲು ಮತ್ತು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವರು ಸಲಹೆ ನೀಡಿದರು.

2023 ರ ಏಪ್ರಿಲ್ 10 ಮತ್ತು 11 ರಂದು ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣಕು ಡ್ರಿಲ್‌ಗಳನ್ನು ನಡೆಸಬೇಕು ಮತ್ತು 2023 ರ ಏಪ್ರಿಲ್ 8 ಮತ್ತು 9 ರಂದು ಜಿಲ್ಲಾಡಳಿತಗಳು ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸುವಂತೆ ಅವರು ರಾಜ್ಯ ಆರೋಗ್ಯ ಮಂತ್ರಿಗಳನ್ನು ಒತ್ತಾಯಿಸಿದರು.

ಭಾರತ ಗುರುವಾರ 5,335 ಹೊಸ ಕೋವಿಡ್ 19 ಪ್ರಕರಣಗಳನ್ನು ವರದಿ ಮಾಡಿದೆ, ಇದು 6 ತಿಂಗಳಿಗಿಂತ ಹೆಚ್ಚಿನ ಜಿಗಿತವಾಗಿದೆ. ಸಕ್ರಿಯ ಪ್ರಕರಣಗಳು 25,587 ಆಗಿದ್ದು, ದೇಶದಲ್ಲಿ ಇದುವರೆಗಿನ ಸಾವಿನ ಸಂಖ್ಯೆ 5,30,929 ಆಗಿದೆ. ಹೊಸ ರೂಪಾಂತರ XBB.1.16 ಇತ್ತೀಚಿನ ಉಲ್ಬಣಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ನಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next