ನವದೆಹಲಿ: ಕೋವಿಡ್ ನ ಆರ್ಥಿಕ ಸಂಕಷ್ಟದ ನಡುವೆಯೂ ಸುಮಾರು 30 ಲಕ್ಷ ಕೇಂದ್ರ ಸರ್ಕಾರದ ಉದ್ಯೋಗಿಗಳು 2019-2020ನೇ ಸಾಲಿನ ಬೋನಸ್ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಬುಧವಾರ(ಅಕ್ಟೋಬರ್ 21, 2020) ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದ ಸಂಪುಟ ಸಭೆ ನಡೆದಿದ್ದು, 2019-2020ನೇ ಸಾಲಿನ ಬೋನಸ್ ನೀಡಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಉತ್ಪಾದಕತೆ ಸಂಬಂಧಿತ ಬೋನಸ್ ಮತ್ತು ಉತ್ಪಾದಕೇತರ ಬೋನಸ್ ಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿದ್ದು, ಇದಕ್ಕಾಗಿ ಒಟ್ಟು 3,737 ಕೋಟಿ ರೂಪಾಯಿ ಸರ್ಕಾರ ವ್ಯಯಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಕೋವಿಡ್ ಎಫೆಕ್ಟ್:ಆಂಧ್ರಪ್ರದೇಶದಲ್ಲಿ 27 ವಿದ್ಯಾರ್ಥಿಗಳಿಗೆ ಸೋಂಕು ದೃಢ, 4 ಶಾಲೆ ಮತ್ತೆ ಬಂದ್
ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ದಸರಾಗಿಂತ ಮೊದಲು ಘೋಷಿಸಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ವಿಳಂಬವಾಗಿರುವುದಾಗಿ ವರದಿ ಹೇಳಿದೆ. ಈ ಬೋನಸ್ ಹಣವನ್ನು ವಿಜಯ ದಶಮಿ ಮುನ್ನ ಒಂದೇ ಕಂತಿನಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರೈಲ್ವೆ, ಅಂಚೆ ಇಲಾಖೆ, ರಕ್ಷಣಾ ಇಲಾಖೆ, ಇಪಿಎಫ್ ಒ, ಇಎಸ್ ಇಸಿನಂತಹ ಗಜೆಟೆಡ್ ರಹಿತ ಸಂಸ್ಥೆಗಳ ಸುಮಾರು 16.97 ಲಕ್ಷ ಉದ್ಯೋಗಿಗಳು ಬೋನಸ್ ಪಡೆಯಲಿದ್ದಾರೆ. ಅಲ್ಲದೇ 13 ಲಕ್ಷ ಸರ್ಕಾರಿ ಉದ್ಯೋಗಿಗಳು ಬೋನಸ್ ಪಡೆಯಲಿದ್ದಾರೆ ಎಂದು ವರದಿ ಹೇಳಿದೆ.