Advertisement

ಆ.9ರ ಭಾರತ್‌ ಬಂದ್‌ಗೆ ಮುನ್ನ SC/ST ಮಸೂದೆಗೆ ಕೇಂದ್ರ ಸಂಪುಟ ಅಸ್ತು

07:23 PM Aug 01, 2018 | udayavani editorial |

ಹೊಸದಿಲ್ಲಿ : ಎಸ್‌ಸಿ/ಎಸ್‌ಟಿ ಕಾಯಿದೆಯ ಅನೇಕ ಅಂಶಗಳನ್ನು ಸುಪ್ರೀಂ ಕೋರ್ಟ್‌ ಸಡಿಲುಗೊಳಿಸಿದೆ ಎಂದು ಆರೋಪಿಸಿ ಹಲವಾರು ದಲಿತ ಸಂಘಟನೆಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಕೆಲ ದಿನಗಳ ತರುವಾಯ ಕೇಂದ್ರ ಸಚಿವ ಸಂಪುಟ ಇಂದು ಬುಧವಾರ, ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ಅದರ ಮೂಲ ರೂಪದಲ್ಲಿ ಪುನರ್‌ ಸ್ಥಾಪಿಸುವ ಉದ್ದೇಶದೊಂದಿಗೆ ಮಸೂದೆಯನ್ನು ಸಂಸತ್ತಿನಲ್ಲಿ ಪುನಃ ಮಂಡಿಸಲು ಒಪ್ಪಿಕೊಂಡಿತು. ಎಸ್‌ಸಿ/ಎಸ್‌ಟಿ ಸಂಘಟನೆಗಳು ಇದೇ ಆಗಸ್ಟ್‌ 9ರಂದು ಭಾರತ್‌ ಬಂದ್‌ ಗೆ ಕರೆ ನೀಡಿದ್ದವು. 

Advertisement

ಸಂಸತ್ತಿನ ಹಾಲಿ ಮುಂಗಾರು ಅಧಿವೇಶನದಲ್ಲೇ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಮಸೂದೆಯನ್ನು ಮಂಡಿಸಲಾಗುವುದೆಂದು ಮೂಲಗಳನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ. 

ಸರ್ವೋಚ್ಚ ನ್ಯಾಯಾಲಯ ಎಸ್‌ಸಿ/ಎಸ್‌ಟಿ ಕಾಯಿದೆಯ ಕಾಠಿನ್ಯವನ್ನು ಮೆದುಗೊಳಿಸಿರುವುದರ ವಿರುದ್ಧ ದೇಶ ವ್ಯಾಪಿ ಬಂದ್‌ಗೆ ಅನೇಕ ದಲಿತ ಸಂಘಟನೆಗಳು ಕರೆ ನೀಡಿರುವ ದಿನಗಳ ತರುವಾಯ ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ಮಸೂದೆಯನ್ನು ಪುನರ್‌ ಮಂಡಿಸುವ ನಿರ್ಧಾರವನ್ನು ತೆಗೆದುಕೊಂಡಿತು. 

ಸುಪ್ರೀಂ ಕೋರ್ಟ್‌ ಈ ವರ್ಷ ಮಾಚ್‌ನಲ್ಲಿ ನೀಡಿದ ತನ್ನ ತೀರ್ಪಿನಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆಯಲ್ಲಿ ಪರಿಚಯಿಸಿರುವ ಸುರಕ್ಷಾ ಅಂಶಗಳನ್ನು ಕಟುವಾಗಿ ಟೀಕಿಸಿರುವ ದಲಿತ ಸಂಘಟನೆಗಳು, ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದಾಗಿ ಎಸ್‌ಸಿ/ಎಸ್‌ಟಿ ಕಾಯಿದೆ ಬಲಹೀನವಾಗಿದೆ ಎಂದು ಆರೋಪಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next