Advertisement
ದೆಹಲಿ ಮೂಲದ ವಕೀಲ ಎಂಎಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ, ಅಲ್ಲದೇ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಘೋಷಣೆ ಮತದಾರನ ಮೇಲೆ ಪ್ರಭಾವ ಬೀರುತ್ತೆ ಎಂಬ ವ್ಯಾಖ್ಯಾನ ಅರ್ಥಹೀನ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
Related Articles
2012ರಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ ಅನ್ನು ಯುಪಿಎ ಸರ್ಕಾರ ಮಂಡಿಸಬಾರದೆಂದು ಬಿಜೆಪಿ ಅಕ್ಷೇಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆಗ ಯುಪಿಎ ಸರ್ಕಾರ ಕೇಂದ್ರ ಬಜೆಟ್ ಅನ್ನು ಫೆ.28ರ ಬದಲು ಮಾರ್ಚ್ 16ಕ್ಕೆ ಮಂಡಿಸಿತ್ತು. ವಿಪರ್ಯಾಸ ಅಂದರೆ ಆಗ ವಿಪಕ್ಷದಲ್ಲಿದ್ದು ವಿರೋಧಿಸಿದ್ದ ಬಿಜೆಪಿ ಈಗ ಆಡಳತ ಪಕ್ಷದಲ್ಲಿದೆ, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿದೆ, ಕೋರ್ಟ್ ಆದೇಶ ವಿಪಕ್ಷದ ವಿರುದ್ಧವಾಗಿ ಬಂದಿದೆ!
Advertisement