Advertisement
9 ಅಂಶಗಳ ವಿಕಸಿತ ಭಾರತ ಗುರಿದೇಶದ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್‌ನಲ್ಲಿ 9 ಆದ್ಯತಾ ಅಂಶಗಳನ್ನು ಗುರ್ತಿಸಲಾಗಿದೆ. ಅವು ಹೀಗಿವೆ…
-ಕೃಷಿಯಲ್ಲಿ ಉತ್ಪಾದಕತೆ, ಕ್ಷಮತೆ , ಉದ್ಯೋಗ ಮತ್ತು ಕೌಶಲ್ಯ ,ಎಲ್ಲರನ್ನೊಳಗೊಂಡ ಮಾನವ ಸಂಪನ್ಮೂಲ ಅಭಿವೃದ್ಧಿ-ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ
-ಮೂಲ ಭೂತ ಸೌಕರ್ಯ , ನವಶೋಧ, ಸಂಶೋಧನೆ ಮತ್ತು ಅಭಿವೃದ್ಧಿ, ಮುಂದಿನ ತಲೆಮಾರಿನ ಸುಧಾರಣೆ
ಯುವಕರನ್ನು ಆಧರಿಸಿ ಹಲವು ಯೋಜನೆ , 1 ಕೋಟಿ ವಿದ್ಯಾರ್ಥಿಗಳಿಗೆ ಮಾಸಿಕ 5000 ಸ್ಟೈಪೆಂಡ್ , 5 ವರ್ಷ ಇಂಟರ್ನ್ಶಿಪ್, 500 ಕಂಪನಿಗಳು ಬಳಕೆ, ಉದ್ಯೋಗ ಹೆಚ್ಚಿಸಲು 5 ಯೋಜನೆಗಳು , ಇದಕ್ಕೆ 2 ಲಕ್ಷ ಕೋಟಿ ರೂ. ಮೀಸಲು, ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ , ನಿವೃತ್ತಿ ನಿಧಿಯಡಿ (ಇಪಿಎಫ್ಒ) ಉದ್ಯೋಗ ಹೆಚ್ಚಿಸಲು ಪ್ರೋತ್ಸಾಹ , ಮೊದಲ ಬಾರಿ ಇಪಿಎಫ್ಓದಲ್ಲಿ ನೋಂದಾಯಿತ ನೂತನ ಉದ್ಯೋಗಿಗಳಿಗೆ 1 ತಿಂಗಳ ವೇತನ 3 ಕಂತುಗಳಲ್ಲಿ ಪಾವತಿ . ರೈತರು, ಕೃಷಿ ಕ್ಷೇತ್ರಕ್ಕೆ ಬಂಗಾರ
ರೈತರಿಗೆ ಪ್ರತಿಕೂಲ ಹವಾಮಾನಕ್ಕೆ ಸಡ್ಡು ಹೊಡೆದು ಗರಿಷ್ಠ ಇಳುವರಿ ನೀಡಬಲ್ಲ 109 ತಳಿ , 32 ಮುಖ್ಯ ತಳಿಗಳ ಮೂಲಕ 109 ತಳಿ ಅಭಿವೃದ್ಧಿ ,ಯೋಜನೆಗೆ 1.52 ಲಕ್ಷ ಕೋಟಿ ರೂ. ಮೀಸಲು ,ಮುಂದಿನ 2 ವರ್ಷದಲ್ಲಿ 1 ಕೋಟಿ ಸಾವಯವ ರೈತರ ತಯಾರಿ,ಸಾವಯವ ಕೃಷಿ ಅಳವಡಿಸಿಕೊಳ್ಳಲು ಯೋಜನೆ ಸಿದ್ಧ, ದೇಶದ 400 ಜಿಲ್ಲೆಗಳಲ್ಲಿ ಈ ವರ್ಷ ಡಿಜಿಟಲ್ ಮಾದರಿಯಲ್ಲಿ ಬೆಳೆ ಸಮೀಕ್ಷೆ , 6 ಕೋಟಿ ರೈತರ ಜಮೀನಿನ ಮಾಹಿತಿ ಕೃಷಿ-ಭೂ ನೋಂದಣಿಗೆ ಸೇರ್ಪಡೆ
Related Articles
ಉದ್ಯಮ ವಲಯಕ್ಕೆ ಗರಿಷ್ಠ ಅನುದಾನ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ 47559 ಕೋಟಿ ರೂ.,ಕಳೆದ ವರ್ಷದ 48169 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ ನೀಡಿದ್ದು ತುಸು ಕಡಿಮೆ ,ಎಂಎಸ್‌ಎಂಇಗಳಿಗೆ ಅಡಮಾನ ಅಥವಾ 3ನೇ ವ್ಯಕ್ತಿ ಗ್ಯಾರಂಟಿ ಅಗತ್ಯವಿಲ್ಲದೇ ಸಾಲ, ಮುದ್ರಾ ಯೋಜನೆ ಸಾಲ 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಳ,ದೇಶಾದ್ಯಂತ 12 ಕೈಗಾರಿಕಾ ಉದ್ಯಾನಗಳ ನಿರ್ಮಾಣಕ್ಕೆ ಆದ್ಯತೆ
Advertisement
ಮಹಿಳೆಯರಿಗೆ ಕಂಚುಮಹಿಳೆಯರು, ಯುವತಿಯರ ಕಲ್ಯಾಣಕ್ಕೆ 3 ಲಕ್ಷ ಕೋಟಿ ರೂ. ಮೊತ್ತ,ಉದ್ಯೋಗ ವಲಯದಲ್ಲಿ ಮಹಿಳೆಯರ ಹೆಚ್ಚಳಕ್ಕೆ ಗಮನ , ಹಾಸ್ಟೆಲ್ ನಿರ್ಮಾಣ, ಕೌಶಲ್ಯಾಭಿವೃದ್ಧಿಗೆ ಒತ್ತು,ಮಹಿಳಾ ಸ್ವಸಹಾಯ ಗುಂಪುಗಳಿಗೆ ಮಾರುಕಟ್ಟೆ ಬಿಹಾರ, ಆಂಧ್ರಪ್ರದೇಶ
ಬಜೆಟ್ ಚಾಂಪಿಯನ್ಸ್
ಎನ್‌ಡಿಎ ಸರ್ಕಾರದ ಆಧಾರಸ್ತಂಭಗಳಾದ ಬಿಹಾರ, ಆಂಧ್ರಕ್ಕೆ ಗರಿಷ್ಠ ಅನುದಾನ, ಬಿಹಾರದಲ್ಲಿ ಹೆದ್ದಾರಿ ನಿರ್ಮಾಣಕ್ಕೆ 26000 ಕೋಟಿ ರೂ.,ಪಾಟ್ನಾ-ಪುರ್ನಿಯ, ಬಕ್ಸರ್- ಭಾಗಲ್ಪುರ, ಬುದ್ಧಗಯಾ- ರಾಜಗೀರ್- ವೈಶಾಲಿ- ದರ್ಭಾಂಗ ಎಕ್ಸ್‌ಪ್ರೆಸ್ ವೇ,ಗಯಾದಲ್ಲಿ 21400 ಕೋಟಿ ರೂ. ವೆಚ್ಚ, 2400 ಮೆಗಾವ್ಯಾಟ್‌ನ ವಿದ್ಯುತ್ ಸ್ಥಾವರ , ಆಂಧ್ರ ಮರುವಿಂಗಡಣೆ ಕಾಯ್ದೆಯಡಿ ಆಂಧ್ರಕ್ಕೆ 15000 ಕೋಟಿ ರೂ.,ಸಿಎಂ ಚಂದ್ರಬಾಬು ಕನಸಿನ ಅಮರಾವತಿ ನಿರ್ಮಾಣಕ್ಕೆ ದೊಡ್ಡ ಮೊತ್ತ , ಪೋಲಾವರಂ ಆಣೆಕಟ್ಟು ನಿರ್ಮಾಣಕ್ಕೂ ಹಣ ಸಿಗಲಿದೆ., ಆಂಧ್ರಕ್ಕೆ ಎರಡು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಹಣ ರಾಜ್ಯಗಳಿಗೆ 50 ವರ್ಷದ ಶಕ್ತಿ ಪೇಯ
ರಾಜ್ಯಗಳ ಅಭಿವೃದ್ಧಿಯಾಗದೇ ದೇಶದ ಅಭಿವೃದ್ಧಿಯಿಲ್ಲ ,ಈ ಸಿದ್ಧಾಂತದಡಿ ರಾಜ್ಯಗಳಿಗೆ 50 ವರ್ಷದ ಬಡ್ಡಿರಹಿತ ಸಾಲ,ಗುಣಮಟ್ಟದ ಒಕ್ಕೂಟ ವ್ಯವಸ್ಥೆ, ರಾಜ್ಯಗಳ ಪ್ರೋತ್ಸಾಹಕ್ಕೆ ಗಮನ,ಸುಧಾರಣೆ ಯೋಜನೆಗಳ
ತ್ವರಿತ ಗತಿಯ ಜಾರಿಗೆ ರಾಜ್ಯಗಳಿಗೆ ಸಾಲ ನೀಡಿ ಉತ್ತೇಜನ ಸ್ಟಾರ್ಟಪ್‌ಗಳಿಗೆ “ಏಂಜೆಲ್ ಟ್ಯಾಕ್ಸ್’ ಜಯ
ಸ್ಟಾರ್ಟಪ್ ಗಳ ಪ್ರೋತ್ಸಾಹಕ್ಕೆ ಕೇಂದ್ರ ನಿರ್ಧಾರ , ಸ್ಟಾರ್ಟಪ್ ಗಳು ಪಡೆಯುತ್ತಿದ್ದ ಹೂಡಿಕೆ ಮೇಲೆ ತೆರಿಗೆ ಸಂಪೂರ್ಣ ರದ್ದು, ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಹೂಡಿಕೆ ವೇಳೆ ಏಂಜೆಲ್ ಟ್ಯಾಕ್ಸ್ ಹೇರಿಕೆ , 2012ರಲ್ಲಿ ಅಕ್ರಮ ಹೂಡಿಕೆ ತಡೆಗೆ ಜಾರಿಯಾಗಿದ್ದು ಏಂಜೆಲ್ ಟ್ಯಾಕ್ಸ್,ಇದೀಗ ಆ ತೆರಿಗೆ ರದ್ದು, ಸ್ಟಾರ್ಟಪ್ ಗಳಲ್ಲಿ ಹೂಡಿಕೆಗೆ ಉತ್ತೇಜನ ಪ್ಲಾಸ್ಟಿಕ್ ಸೀಮಾ ಸುಂಕ ಹೆಚ್ಚಳ, ಉತ್ಪನ್ನ ದುಬಾರಿ
ಪ್ಲಾಸ್ಟಿಕ್ ಉತ್ಪನ್ನಗಳಿಗೆ ಸೀಮಾಸುಂಕ ಹೆಚ್ಚಳ, ದೂರ ಸಂಪರ್ಕ ಉತ್ಪನ್ನಗಳಿಗೆ ಸೀಮಾಸುಂಕ ಶೇ.10ರಿಂದ 15ಕ್ಕೇರಿಕೆ,ಹೊರಾವರಣಗಳಲ್ಲಿ, ಪಾರ್ಕ್‌ಗಳಲ್ಲಿ ನಿಲ್ಲಿಸುವ ಬೃಹತ್ ಛತ್ರಿಗಳಿಗೆ ಏರಿಕೆ , ಪ್ರಯೋಗಾಲ ಯಗಳಲ್ಲಿ ಬಳಸುವ ,ರಾಸಾಯನಿಕಗಳಿಗೆ ಏರಿಕೆ ಜ್ಯೋತಿ ಬೆಳಗಿದ ಪೂರ್ವೋದಯ
ಪೂರ್ವ ಭಾಗದ 5 ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಆದ್ಯತೆ, ಬಿಹಾರ, ಜಾರ್ಖಂಡ್, ಪ.ಬಂಗಾಳ, ಆಂಧ್ರ, ಒಡಿಶಾ ಅಭಿವೃದ್ಧಿಗೆ ಪೂರ್ವೋದಯ ಯೋಜನೆ ,ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯ ಅಭಿವೃದ್ಧಿ , ಹಲವು ತಲೆಮಾರುಗಳ ಆರ್ಥಿಕ ಅಭಿವೃದ್ಧಿಗೆ ಕ್ರಮ ಹಿಮಾಲಯ ತಪ್ಪಲಿನ
4 ರಾಜ್ಯಕ್ಕೆ ವಿಶೇಷ ಪದಕ
ಪ್ರವಾಹಪೀಡಿತ ಹಿಮಾಲಯ ರಾಜ್ಯಗಳಿಗೆ ವಿಶೇಷ ನೆರವು , ಹಿಮಾಚಲ, ಸಿಕ್ಕಿಮ್, ಉತ್ತ ರಾಖಂಡ, ಅಸ್ಸಾಮ್‌ಗಳಲ್ಲಿ ಪ್ರವಾಹ ನಿಯಂತ್ರ ಣಕ್ಕೆ ಯೋಜನೆ, 11500 ಕೋಟಿ ರೂಪಾಯಿ ಅನುದಾನ ಪದಕ ಪಟ್ಟಿಯಲ್ಲಿ ಕರ್ನಾಟಕಕ್ಕೂ ಸ್ಥಾನ, ಆದರೆ ಪದಕವಿಲ್ಲ!
ಕರ್ನಾಟಕಕ್ಕೆ ಯಾವುದೇ ಯೋಜನೆಗಳಿಲ್ಲ,ಆಂಧ್ರದ ಹೈದ್ರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯಲ್ಲೇ ಒಂದು ಸ್ಥಾನ, ಪದಕ ಪಟ್ಟಿಯಲ್ಲಿ ರಾಜ್ಯಕ್ಕೆ ಜಾಗವಿದ್ದರೂ ಪದಕವೇ ಇಲ್ಲದ ಸ್ಥಿತಿ! ಹೊಸ ಯೋಜನೆಗಳು ಅಖಾಡಕ್ಕೆ
1 ಕೋಟಿ ಮಂದಿ ಸಾವಯವ ಕೃಷಿಗೆ ಹೊರಳಲು 1000 ಜೈವಿಕ ಮಾಹಿತಿ ಕೇಂದ್ರ, ಯುವಕರಿಗೆ ಉದ್ಯೋಗ ನೀಡಲು ಪ್ರಧಾನ ಮಂತ್ರಿ ಪ್ಯಾಕೇಜ್. 4.1 ಕೋಟಿ ಯುವಕರಿಗೆ ಉದ್ಯೋಗ,5 ಪೂರ್ವ ರಾಜ್ಯಗಳಿಗೆ ಪೂರ್ವೋದಯ,ಬುಡಕಟ್ಟು ಜನರಿಗೆ ಪ್ರಧಾನಮಂತ್ರಿ ಜನಜಾತೀಯ ಉನ್ನತ್ ಗ್ರಾಮ ಅಭಿಯಾನ, ಮುಂದಿನ 5 ವರ್ಷಗಳಲ್ಲಿ ಬೀದಿಬದಿಯ 100 ಆಹಾರ ವಲಯಗಳ ನಿರ್ಮಾಣ,ಗ್ರಾಮೀಣ ಭಾಗದ ಭೂಮಿಗೆ ವಿಶೇಷ ಸಂಖ್ಯೆ ನೀಡಲು ಭೂ ಆಧಾರ್ , ಮಕ್ಕಳಿಗೂ ಪಿಂಚಣಿ ನೀಡಲು ಎನ್‌ಪಿಎಸ್ ವಾತ್ಸಲ್ಯ ಮೂಲಸೌಕರ್ಯ ಅನುದಾನ ಸಾರ್ವಕಾಲಿಕ ದಾಖಲೆ
ಎಂದಿನಂತೆ ಮೂಲಸೌಕರ್ಯಕ್ಕೆ ಗರಿಷ್ಠ ಆದ್ಯತೆ ,ರಾಷ್ಟ್ರೀಯ ಸೌಕರ್ಯಗಳಿಗಾಗಿ 11.11 ಲಕ್ಷ ಕೋಟಿ ರೂ. ನಿಗದಿ , ಇದು ದೇಶದ ಜಿಡಿಪಿಗೆ ಹೋಲಿಸಿದರೆ ಶೇ.3.4ರಷ್ಟು ಹಣ,ರೈಲ್ವೇಗೆ 2.65 ಲಕ್ಷ ಕೋಟಿ ರೂ. ರಸ್ತೆಸಾರಿಗೆ, ಹೆದ್ದಾರಿಗಳಿಗೆ 2.78 ಲಕ್ಷ ಕೋಟಿ ರೂ.,ಬಂದರುಗಳು, ಹಡಗು ಸಾಗಣೆ, ಜಲಮಾರ್ಗಗಳಿಗೆ 2,377 ಕೋಟಿ ರೂ. , ಯಾವುದೇ ಹೊಸ ರೈಲ್ವೆ ಮಾರ್ಗ, ಹೆದ್ದಾರಿ ಘೋಷಣೆಯಿಲ್ಲ, ಹಳೆಯ ಯೋಜನೆ ಮುಗಿಸಲು ಆದ್ಯತೆ , ರಾಜ್ಯಗಳಿಗೆ ಬಡ್ಡಿರಹಿತ 1.5 ಲಕ್ಷ ಕೋಟಿ ರೂ. ದೀರ್ಘಾವಧಿ ಸಾಲ, 100 ನಗರಗಳಲ್ಲಿ ಚರಂಡಿ ನೀರು ಶುದ್ಧೀಕರಣ, ಘನತ್ಯಾಜ್ಯ ನಿರ್ವಹಣೆಗೆ ಹಣ ,ಗ್ರಾಮೀಣ ಭಾಗದ ಜಮೀನುಗಳಿಗೆ ಭೂ ಆಧಾರ್ ಸಂಖ್ಯೆ ನಿಗದಿ ಆದಾಯ ತೆರಿಗೆದಾರರಿಗೆ
ಸಮಾಧಾನಕರ ಬಹುಮಾನ
ಆದಾಯ ತೆರಿಗೆ ಹಳೆಯ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆಯಿಲ್ಲ, ಹೊಸ ಸ್ಲ್ಯಾಬ್ ಗಳಲ್ಲಿ ತುಸು ಬದಲಾವಣೆ, ತೆರಿಗೆದಾರರಿಗೆ ತುಸು ಸಮಾಧಾನ,ಹೊಸ ತೆರಿಗೆ ಪದ್ಧತಿಯಲ್ಲಿ 3 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ,3 ಲಕ್ಷ ರೂ.ನಿಂದ 7 ಲಕ್ಷ ರೂ.ವರೆಗೆ ಶೇ.5ರಷ್ಟು ತೆರಿಗೆ (ಹಿಂದೆ 6 ಲಕ್ಷ ರೂ.ವರೆಗೆ ಶೇ.5 ತೆರಿಗೆ) , 7 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಆದಾಯಕ್ಕೆ ಶೇ.10 ತೆರಿಗೆ, 10 ಲಕ್ಷ ರೂ.ನಿಂದ 12 ಲಕ್ಷ ರೂ.ವರೆಗೆ ಶೇ.15ರಷ್ಟು ತೆರಿಗೆ , 12 ಲಕ್ಷ ರೂ. ಮತ್ತು 15 ಲಕ್ಷ ರೂ. ಮೀರಿದ ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ.15 ಲಕ್ಷ ರೂ.ನಿಂದ ನಂತರದ ಆದಾಯಕ್ಕೆ ಶೇ.30 ತೆರಿಗೆ. ಚಿನ್ನ, ಬೆಳ್ಳಿ, ಪ್ಲಾಟಿನಮ್ ಸೀಮಾಸುಂಕ ಇಳಿಕೆ
ಚಿನ್ನ, ಬೆಳ್ಳಿ ಬಾರ್‌ಗಳ ಸೀಮಾಸುಂಕ ಶೇ.15ರಿಂದ ಶೇ.6ಕ್ಕೆ ಇಳಿಕೆ,ಪ್ಲಾಟಿನಮ್, ಪಲ್ಲಾಡಿಯಂ, ರುಥೇನಿಯಂ ಮತ್ತು ಇರಿಡಿಯಂ ಸುಂಕ ಶೇ.15.4ರಿಂದ ಶೇ.6.4ಕ್ಕೆ ,ಮೊಬೈಲ್, ಚಾರ್ಜರ್‌ಗಳ ಸುಂಕ ಶೇ.15ಕ್ಕಿಳಿಕೆ, ಮೂರು ಕ್ಯಾನ್ಸರ್ ಚಿಕಿತ್ಸೆಗಳ ಔಷಧಗಳಿಗೆ ಮೂಲ ಸೀಮಾಸುಂಕದಿಂದ ವಿನಾಯ್ತಿ,25 ಪ್ರಮುಖ ಖನಿಜಗಳಿಗೆ ಸುಂಕ ವಿನಾಯ್ತಿ ,ವೈದ್ಯಕೀಯ ಉಪಕರಣಗಳಾದ ಎಕ್ಸ್-ರೇ, ಶಸ್ತ್ರಚಿಕಿತ್ಸೆ, ದಂತ ಮತ್ತು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಸಾಧನಗಳಿಗೂ ಸುಂಕ ಇಳಿಕೆ ಜನರ ವಿಶ್ವಾಸಕ್ಕೆ ಆಭಾರಿ
ನಮ್ಮ ಯೋಜನೆಗಳ ಮೇಲೆ ಜನರು ಭರವಸೆ, ವಿಶ್ವಾಸ ಇಟ್ಟು, ಬೆಂಬಲ ನೀಡಿರುವುದು ಸಂತಸದ ಸಂಗತಿ. ಎಲ್ಲ ಭಾರತೀಯರ ಜೀವನೋದ್ದೇಶ, ಆಶೋತ್ತರ ಈಡೇರಿಸಲು ಸರ್ಕಾರ ಬದ್ಧವಾಗಿದೆ.
-ನಿರ್ಮಲಾ ಸೀತಾರಾಮನ್, ವಿತ್ತ ಸಚಿವೆ ಎಲ್ಲ ವರ್ಗಕ್ಕೂ ಶ್ರೇಯ
ಭಾರತವನ್ನು ಸಮೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ಹಾಗೂ ಸಮಾಜದ ಎಲ್ಲ ವರ್ಗದವರನ್ನು ಬಲಪಡಿಸುವ ಬಜೆಟ್ ಇದು. ನವ ಮಧ್ಯಮ ವರ್ಗ, ಬಡವರು, ಗ್ರಾಮಗಳು, ರೈತರು ಇದರಿಂದ ಸಬಲರಾಗುತ್ತಾರೆ.
-ನರೇಂದ್ರ ಮೋದಿ, ಪ್ರಧಾನಿ