Advertisement
ಆದರೆ ಜಿಲ್ಲೆಯ ಬಹುದಿನಗಳ ಕನಸಾಗಿರುವ ನದಿ ಜೋಡಣೆ ಸೇರಿದಂತೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಆಮೆಗತಿಯಲ್ಲಿ ಸಾಗಿರುವ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಅನುದಾನ ಸಿಗದಿರುವುದು, ಜಿಲ್ಲೆಯಲ್ಲಿ ನೆನಗುದಿಗೆ ಬಿದ್ಧಿರುವ ರೈಲ್ವೆ ಯೋಜನೆಗಳಿಗೆ ಕಾಯಕಲ್ಪ ದೊರೆಯದಿರುವುದು, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ಸಿಗದಿರುವುದು ಬರಡು ಜಿಲ್ಲೆಯ ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ.
Related Articles
Advertisement
ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್‌ನ್ನು ಹಣಕಾಸು ಸಚಿವರು ಮಂಡಿಸಿದ್ದಾರೆ. ವಿಶೇಷವಾಗಿ ಗ್ರಾಮೀಣಾಭಿವೃದ್ಧಿಗೆ, ಕೃಷಿಗೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ಹೆಚ್ಚಾಗಿ ಮೀಸಲಿಟಿದ್ದು, ತೆರಿಗೆ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಬಡವರಿಗೆ, ಮಧ್ಯಮ ವರ್ಗದ ಜನರ ಅಭಿವೃದ್ಧಿಗೆ ಈ ಬಜೆಟ್ ಪೂರಕವಾಗಿದೆ. -ಬಿ.ಎನ್.ಬಚ್ಚೇಗೌಡ, ಸಂಸದ ನವ ಭಾರತದ ನಿರ್ಮಾಣದ ಕನಸು ಹಾಗೂ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಮಂಡನೆ ಆಗಿದೆ. ದೇಶದ ಇತಿಹಾಸದಲ್ಲಿ ಎಂದೂ ಕೃಷಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಉತ್ತೇಜನ ಸಿಕ್ಕಿಲ್ಲ. ವಿಶೇಷವಾಗಿ ಸಣ್ಣ ಉದ್ಧಿಮೆದಾರರಿಗೆ ಸಾಕಷ್ಟು ರಿಯಾಯಿತಿಗಳನ್ನು ಕೊಟ್ಟು ಶಕ್ತಿ ತುಂಬಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
-ಡಾ.ಕೆ.ಸುಧಾಕರ್, ಶಾಸಕ, ಚಿಕ್ಕಬಳ್ಳಾಪುರ ಕೇಂದ್ರ ಬಜೆಟ್‌ನಲ್ಲಿ ಕೇವಲ ಸೂತ್ರಗಳನ್ನು ಹೇಳಿದ್ದಾರೆ ಅಷ್ಟೆ. ಇದುವರೆಗೂ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ 346 ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲಿ ಕೇವಲ 15, 20 ಯೋಜನೆಗಳು ಮಾತ್ರ ಜನರಿಗೆ ತಲುಪಿವೆ. ಡಿಜಿಟಲ್ ಇಂಡಿಯಾ, ಕೌಶಲ್ಯ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗಿಲ್ಲ. ಬಜೆಟ್ ತೀವ್ರ ನಿರಾಶೆ ಮೂಡಿಸಿದೆ.
-ಎನ್.ಹೆಚ್.ಶಿವಶಂಕರರೆಡ್ಡಿ, ಮಾಜಿ ಸಚಿವ, ಗೌರಿಬಿದನೂರು ಬರಪೀಡಿತ ಜಿಲ್ಲೆಗಳು ಕೇಂದ್ರ ಬಜೆಟ್‌ನಲ್ಲಿ ನಿರೀಕ್ಷಿಸಿದ್ದು ನೀರಾವರಿ ಯೋಜನೆಗಳು, ಆದರೆ ಜಿಲ್ಲೆಯ ಅಂತರ್ಜಲ ಅಭಿವೃದ್ಧಿ ಶಾಶ್ವತವಾದ ಕಾರ್ಯಕ್ರಮಗಳು ರೂಪಿಸಿಲ್ಲ. 20 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳನ್ನೇ ಘೋಷಿಸಲಾಗಿದೆ. ಇದರಿಂದ ಜಿಲ್ಲೆಗೆ ಯಾವುದೇ ಲಾಭ ಇಲ್ಲ.
-ಆರ್.ಆಂಜನೇಯರೆಡ್ಡಿ, ಜಿಲ್ಲಾಧ್ಯಕ್ಷ, ನೀರಾವರಿ ಹೋರಾಟ ಸಮಿತಿ ಕಳೆದ ಬಾರಿ ಬಜೆಟ್ ಮಂಡಿಸಿದಾಗಲೂ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹಣಕಾಸು ಸಚಿವರು ಹೇಳಿದ್ದರು. ಈ ವರ್ಷವೂ ಅದನ್ನೇ ಹೇಳಿದ್ದಾರೆ. ರೈತರ ಪಾಲಿಗೆ ಈ ಬಜೆಟ್ ತೀವ್ರ ನಿರಾಶೆ ಮೂಡಿಸಿದೆ. ನದಿ ಜೋಡಣೆ ಬಗ್ಗೆ ಚಕಾರ ಎತ್ತಿಲ್ಲ. ಬರಪೀಡಿತ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವ ಯಾವ ಭರವಸೆಯೂ ಇಲ್ಲ.
-ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ ಉದ್ಯೋಗ ಸೃಷ್ಟಿ, ಕೃಷಿ ಉಳಿಸಲಿಕ್ಕೆ ಏನು ಕ್ರಮ ಕೈಗೊಂಡಿಲ್ಲ. ಜನರು ಖರೀದಿ ಮಾಡುವ ಶಕ್ತಿಯನ್ನೆ ಕಳೆದುಕೊಂಡಿದ್ದಾರೆ. ಜನರ ಮೇಲೆ ತೆರಿಗೆ ಭಾರ ಹೊರೆಸಿರುವುದು ಬಿಟ್ಟರೆ ಬಜೆಟ್‌ನಲ್ಲಿ ಏನು ಇಲ್ಲ. ಕಾರ್ಪೊರೆಟ್ ಕಂಪನಿಗಳ ಪರವಾಗಿ ಮೋದಿ ಸರ್ಕಾರ ಬಜೆಟ್ ಮಂಡಿಸಿದೆ. ಕೇಂದ್ರ ಬಜೆಟ್ ಜನ ವಿರೋಧಿ ನೀತಿಗಳಿಂದ ಕೂಡಿದೆ.
-ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ಮಾಜಿ ಶಾಸಕ ಪೆಟ್ರೋಲ್ ಡೀಸೆಲ್ ಬೆಲೆ ಕಡಿತ ಮಾಡಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಕೇಂದ್ರ ಬಜೆಟ್ ಜನ ಸಾಮಾನ್ಯರ ಕಣ್ಣೀರು ಹೊರೆಸುವ ಕೆಲಸ ಮಾಡಿಲ್ಲ. ರೈತರಿಗೆ, ಬಡವರಿಗೆ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ಈ ಭಾಗದ ನೀರಾವರಿ ಸಮಸ್ಯೆ ಬಗ್ಗೆಯು ಪ್ರಸ್ತಾಪ ಮಾಡಿಲ್ಲ. ಕೇಂದ್ರ ಬಜೆಟ್ ನಿರಾಶೆ ಮೂಡಿಸಿದೆ.
-ಕೆ.ಪಿ.ಬಚ್ಚೇಗೌಡ, ಮಾಜಿ ಶಾಸಕ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎನ್ನುವುದು ಬರೀ ನಾಟಕ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಸ್ವಾಮಿನಾಥನ್ ವರದಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಕೃಷಿರಂಗ ಸಂಪೂರ್ಣ ದಿವಾಳಿಯಾಗುವ ಹಂತಕ್ಕೆ ಬಂದರೂ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಮುಂದುವರಿದಿರುವುದು ಬಜೆಟ್‌ನಲ್ಲಿ ಸ್ಪಷ್ಟವಾಗಿದೆ.
-ಬಿ.ಎನ್.ಮುನಿಕೃಷ್ಣಪ್ಪ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೇಂದ್ರ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಜನರಿಗೆ, ರೈತರಿಗೆ ಟೋಪಿ ಹಾಕಿದ್ದಾರೆ. ಫಸಲ್ ಬಿಮಾ ಯೋಜನೆ ಮಾಡಿದ್ದಾರೆ. ಉಳಿದಂತೆ ಹಳೆ ಯೋಜನೆಯನ್ನು ಮತ್ತೆ ಪ್ರಕಟಿಸಿದ್ದಾರೆ. ಎತ್ತಿನಹೊಳೆಗೆ ಅನುದಾನ ಹೆಚ್ಚಿಸಬೇಕೆಂದು ಕ್ಷೇತ್ರದ ಸಂಸದರು ಪತ್ರ ಕೊಟ್ಟರೂ ಪರಿಗಣಿಸಿಲ್ಲ. ಸರಕು ಸಾಗಾಣಿಕೆಗೆ ಉಡಾನ್ ವಿಮಾನ, ರೈಲು ಮೊದಲಿನಿಂದಲೂ ಇದೆ.
-ಯಲುವಹಳ್ಳಿ ರಮೇಶ್, ಕಾಂಗ್ರೆಸ್ ಹಿರಿಯ ಮುಖಂಡ ಜನ ಸಾಮಾನ್ಯರಿಗೆ, ರೈತರ ಆರ್ಥಿಕ ಪುನಚ್ಚೇತನಕ್ಕಾಗಿ ಕೇಂದ್ರ ಸರ್ಕಾರ ಉತ್ತಮ ಬಜೆಟ್ ಮಂಡಿಸಿದೆ. 5 ಲಕ್ಷ ರೂ.ವರೆಗೂ ತೆರಿಗೆ ವಿನಾಯಿತಿ ಕೊಟ್ಟಿರುವುದು, ರೈತರ ಆದಾಯ ದ್ವಿಗುಣಕ್ಕೆ ಒತ್ತು ಕೊಟ್ಟಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗಲಿದ್ದು, ವಿಶೇಷವಾಗಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಕಡೆಗೂ ಕೇಂದ್ರ ಸರ್ಕಾರ ಗಮನ ಹರಿಸಿ ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದೆ.
-ರಾಮಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಸ್ವಾತಂತ್ರ ನಂತರ ಬಹುಶಃ ನಂಬಿಕೆ ಮತ್ತು ಭರವಸೆ ಮೂಡಿಸದ ಬಜೆಟ್ ಇದಾಗಿದೆ. ದೇಶದ 65% ಜನಸಂಖ್ಯ ಇರುವ ಅನ್ನದಾತರಿಗೆ ನೀಡಿರುವ ಹಣ ಬಜೆಟ್ ಗಾತ್ರ ಕ್ಕೆ ಹೋಲಿಸಿದರೆ 1ಲಕ್ಷ 63 ಸಾವಿರ ಕೋಟಿ ಏನೇನೂ ಸಾಲದಾಗಿದೆ.
-ಎಂ.ಪಿ.ಮುನಿವೆಂಕಟಪ್ಪ. ರಾಜ್ಯ ಸಮಿತಿ ಸದಸ್ಯ, ಕೃಷಿ ಕೂಲಿಕಾರರ ಸಂಘ * ಕಾಗತಿ ನಾಗರಾಜಪ್ಪ