Advertisement

Budget 2024; ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಮೊತ್ತ ಹೆಚ್ಚಿಸಿದ ಕೇಂದ್ರ ಸರ್ಕಾರ

08:44 PM Jul 23, 2024 | Team Udayavani |

ನವದೆಹಲಿ: ಮೂಲಸೌಕರ್ಯ ಮತ್ತು ಸುಧಾರಣಾ ಕ್ರಮ ಹೆಚ್ಚಿಸಲು ರಾಜ್ಯಗಳಿಗೆ 50 ವರ್ಷ ಅವಧಿಗೆ ನೀಡುವ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಸಾಲದ ಮೊತ್ತವನ್ನು 2024-25ನೇ ಸಾಲಿನಲ್ಲಿ 1.5 ಟ್ರಿಲಿಯನ್‌ ರೂ. ಆಗಿರಲಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

Advertisement

ಕೋವಿಡ್‌ ಪಿಡುಗಿನ ಬಳಿಕ 2021ರಲ್ಲಿ ರಾಜ್ಯಗಳಿಗೆ ಬಡ್ಡಿ ರಹಿತವಾಗಿ 50 ವರ್ಷಗಳಿಗೆ ಸಾಲ ನೀಡುವ ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಗೃಹ, ನಗರ ಯೋಜನೆ, ನಗರ ಆರ್ಥಿಕ ಯೋಜನೆ, ಹಳೇ ವಾಹನ, ಆ್ಯಂಬುಲೆನ್ಸ್‌ ಬದಲು ಹೊಸ ವಾಹನಗಳ ಖರೀದಿ, ಪೊಲೀಸರಿಗೆ ಮನೆ, ಪಂಚಾಯಿತಿ ವಲಯದಲ್ಲಿ ಯುವಕರು, ಮಕ್ಕಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಈ ಸಾಲ ಒದಗಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next