ಕೋಲಾರ: ಬರಪೀಡಿತ, ಶಾಶ್ವತ ನದಿ ನಾಲೆಗಳಿ ಲ್ಲದ ಕೋಲಾರ ಜಿಲ್ಲೆಯನ್ನು ಕೇಂದ್ರ ಸರ್ಕಾರವು ಹಿಂದಿನ ಬಹುತೇಕ ಬಜೆಟ್ ಗಳಲ್ಲಿ ಕಡೆಗಣಿ ಸಿದೆ. ಹಿಂದಿನ ಐದು ವರ್ಷಗಳ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೋಲಾರವನ್ನು ಪರಿಗಣಿಸಿ ದ್ದಾಗಲಿ ವಿಶೇಷ ಯೋಜನೆಗಳನ್ನು ಪ್ರಕಟಿಸಿ ದ್ದಾಗಲಿ ಇಲ್ಲ. ವಿವಿಧ ಇಲಾಖೆಗಳಡಿ ಘೋಷಿ ಸಿದ್ದ ಬಹುತೇಕ ಯೋಜನೆಗಳು ಕೋಲಾರ ಕೈಗೆ ಟುಕಿಲ್ಲ. ಕಳೆದ 10 ವರ್ಷಗಳ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕೋಲಾರ ಜಿಲ್ಲೆಗೆ ವಿಶೇಷ ಎನಿ ಸುವ ಬರ ಪರಿಹಾರ ಪ್ಯಾಕೇಜ್ ಗಳಾಗಲಿ, ರೈಲ್ವೆ ಘೋಷಿತ ಯೋಜನೆಗಳಾಗಲಿ ಈಡೇರಲಿಲ್ಲ.
Advertisement
2024 ಬಜೆಟ್ ನಿರೀಕ್ಷೆ?: ಕೋಲಾರ ಮೊದಲ ಬಾ ರಿಗೆ ಬಿಜೆಪಿ ಸಂಸದರನ್ನು ಗೆಲ್ಲಿಸಿದರೂ ಕೇಂದ್ರ ಬಜೆಟ್‌ನಲ್ಲಿ ಯಾವುದೇ ದೊಡ್ಡ ಯೋಜನೆಗಳು ಕೋಲಾರಕ್ಕೆ ಮಂಜೂರಾಗಲಿಲ್ಲ. ಹಿಂದೆ ಮಂಜೂರಾಗಿದ್ದ ಯೋಜನೆಗಳು ನನೆಗುದಿಗೆ ಬಿ ದ್ದಿದ್ದವು. ಕೋಲಾರ ಜಿಲ್ಲೆಗೆ ಯುಪಿಎ ಸರ್ಕಾರದಲ್ಲಿ ಪ್ರಕಟವಾಗಿದ್ದ ರೈಲ್ವೆ ಯೋಜನೆಗಳು ಇಂದಿಗೂ ಅನುಷ್ಠಾನವಾಗಲಿಲ್ಲ. ಪ್ರತಿ ಜಿಲ್ಲಾ ಕೇಂದ್ರವನ್ನು ರಫ್ತು ಕೇಂದ್ರವನ್ನಾಗಿ ಮಾರ್ಪಡಿಸಲಾಗುವುದು ಎಂಬ ಘೋಷಣೆಯೂ ಅನುಷ್ಠಾನವಾಗಲಿಲ್ಲ. ಕೇಂದ್ರ ಸರ್ಕಾರ ಚು ನಾವಣಾ ಹೊತ್ತಿನಲ್ಲಿ ಮಂಡಿಸುತ್ತಿರುವ ಕೊನೇ ಬಜೆಟ್ ನಲ್ಲಿ ಹೆಚ್ಚಿನ ನಿರೀಕ್ಷೆಗಳಿಲ್ಲ.
ದನಪಲ್ಲಿ ಸಂಪರ್ಕ ಯೋಜನೆ, ಕುಪ್ಪು-ಮಾರಿ ಕುಪ್ಪಂ ಸಂಪರ್ಕ ಇತ್ಯಾದಿ ಯೋಜನೆಗಳು ಅ ನುಷ್ಠಾನವಾಗಬೇಕು. ಇದೇ ಅವಧಿಯಲ್ಲಿ ಸರ್ಕಾರ 2020ರ ಬಜೆಟ್ ನಲ್ಲಿ ಘೋಷಿಸಿದ್ದ ರೈಲ್ವೆ ವರ್ಕ್ ಶಾಪ್ ಆರಂಭಿಸಿ ಕೋಲಾರದ ಸ್ಥ ಳೀಯರಿಗೆ ಉದ್ಯೋಗಾವಕಾಶ ಸಿಗುವಂತೆ ಮಾ ಡಬೇಕು. ಗಂಗಾ-ಕಾವೇರಿ ನದಿ ಜೋಡಣೆ, ಭದ್ರ ಮೇ ಲ್ದಂಡೆ ಯೋಜನೆ ಮೂಲಕ ಕೋಲಾರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತಾಗ ಬೇಕು. ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣು, ತರಕಾರಿ ಆಹಾರ ಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಬೃಹತ್ ಘಟಕಗಳನ್ನು ಆರಂಭಿಸಬೇಕು, ಶಾಶ್ವತ ಬರಪೀಡಿತ ಕೋಲಾರ ಜಿಲ್ಲೆಗೆ ಸ ಮಗ್ರ ವಿಶೇಷ ಪ್ಯಾಕೇಜ್ ನೀಡಬೇಕು, ಇತ್ಯಾದಿ ಬೇಡಿಕೆಗಳು ಯಥಾಪ್ರಕಾರ ಹಾಗೆಯೇ ಉಳಿದುಕೊಂಡಿವೆ. 2024ರ ಬಜೆಟ್ ಕೋಲಾರದ ಸ ಮಸ್ಯೆಗಳು, ಬೇಡಿಕೆಗಳಿಗೆ ಹೇಗೆ ಸ್ಪಂದಿಸುದೋ ಕಾದು ನೋಡಬೇಕಿದೆ.
Related Articles
ಐದು ವರ್ಷಗಳ ಹಿಂದೆ ಯುಪಿಎ ಸರ್ಕಾರ ತನ್ನ ಕೊನೆಯ ರೈಲ್ವೆ ಬಜೆಟ್ ನಲ್ಲಿ ಕೋಲಾರಕ್ಕೆ ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ಘೋಷಿಸಿತ್ತು. ರೈಲ್ವೆ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದರಾಗಿದ್ದ ಮುನಿಯಪ್ಪ ಕೋಲಾರ ಜಿಲ್ಲೆ ರೈಲ್ವೆ ಕೋಚ್ ಫ್ಯಾಕ್ಟರಿಗೆ 2014ರ ಲೋಕಸಭಾ ಚುನಾವಣೆ ಘೋಷಣೆ ಕೆಲವೇ ಕ್ಷಣಗಳ ಮುಂಚೆ ಶಂಕು ಸ್ಥಾಪನೆ ನೆರ ವೇರಿಸಿದ್ದರು.
Advertisement
ಆದರೆ, ಆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೈಲ್ವೆ ಕೋಚ್ ಫ್ಯಾಕ್ಟರಿ ಕಡತವನ್ನು ಮೂಲೆ ಗುಂಪು ಮಾಡಿತು. 2014 ರಿಂದ 2019 ರ ನಡುವೆ ಮಂಡಿಸಿದ ಯಾವುದೇ ಬಜೆಟ್ ನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಕುರಿತು ಚಕಾರವೆತ್ತಲಿಲ್ಲ. 2019ರ ಬಜೆಟ್ ನಲ್ಲಿ ನರೇಗಾ 60 ಸಾವಿರ ಕೋಟಿ, ಗೋಕುಲ ಆಯೋಗ ಸ್ಥಾಪನೆ, ಪರಿಶಿಷ್ಟ ಜಾತಿ ವರ್ಗಕ್ಕೆ 76 ಸಾವಿರ ಕೋಟಿ ರೂ. ಗಳನ್ನು ಮೀಸಲಿಡಲಾಗಿತ್ತು. ಆದರೆ, ಈ ಯೋಜನೆಗಳ ಫಲ ಕೋಲಾರಕ್ಕೆ ಸಿಗಲಿಲ್ಲ.
2020ರ ಬಜೆಟ್ಕೋಲಾರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಎಸ್. ಮುನಿಸ್ವಾಮಿ ಗೆದ್ದಿದ್ದರಿಂದ ಸಾಕಷ್ಟು ನಿ ರೀಕ್ಷೆಗಳಿದ್ದವು. ಕೋಲಾರ ಜಿಲ್ಲೆಗೆ ಯುಪಿಎ ಸರ್ಕಾರ ಘೋಷಿಸಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಬದಲು ರೈಲ್ವೆ ವರ್ಕ್ ಶಾಪ್ ಘೋಷಿಸಲಾಗಿತ್ತು. ಇದುವರೆವಿಗೂ ಅನುಷ್ಠಾನವಾಗಲಿಲ್ಲ. 2023ಕ್ಕೆ ಪೂರ್ಣಗೊಳ್ಳುವಂತೆ ಚೆನ್ನೈ-ಬೆಂಗಳೂರು ಎಕ್ಸ್ ಪ್ರಸ್ ಕಾರಿಡಾರ್ ಪೂರ್ಣಗೊಳಿಸಲಾಗು ವುದು ಎಂದು ಹೇಳಲಾಗಿತ್ತು. 2024 ಚುನಾವಣೆ ಸಮೀಪಿಸಿದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಇನ್ನೂ ಪ್ರಗತಿ ಹಂತದಲ್ಲಿದೆ. ಕಾಮಗಾರಿಗೆ ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರ ಬಾಕಿ ಉಳಿದುಕೊಂಡಿದೆ. ದೇಶಾ ದ್ಯಂತ 100 ವಿಮಾನ ನಿಲ್ದಾಣಗಳನ್ನು ಘೋಷಿ ಸಲಾಗಿತ್ತು. ಕೋಲಾರದಲ್ಲಿ ವಿಮಾನ ನಿಲ್ದಾಣ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು
ಆಗಲೇ ಇಲ್ಲ. ಪರಿಶಿಷ್ಟ ಜಾತಿ ವರ್ಗದ ಕಲ್ಯಾಣ ಯೋಜನೆಗಳಿಗೆ 85 ಸಾವಿರ ಕೋಟಿ ಮೀಸಲಿಡಲಾಗಿತ್ತು. ಕೋಲಾರ ಜಿಲ್ಲೆಗೆ ಗ ಮನಾರ್ಹ ಪ್ರಯೋಜನವಾಗಿಲ್ಲ. 2021ರ ಬಜೆಟ್
ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ರೈಲ್ವೆ ವರ್ಕ್ ಶಾಪ್ ಬೇಡಿಕೆ ಈಡೇರಿಕೆಗೆ ಯಾವುದೇ ಪ್ರಯತ್ನ ನಡೆಯಲಿಲ್ಲ. ಅನುದಾನ ಮೀಸಲಿಡಲಿಲ್ಲ. ಜ ಲ ಜೀವನ್ ಮಿಷನ್ ಯೋಜನೆಯನ್ನು ಘೋ ಷಿಸಲಾಯಿತು. ಲೋಕಸಭಾ ಚುನಾವಣೆ ಸ ಮೀಪಿಸುತ್ತಿರುವ ಹೊತ್ತಿನಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯು ಪ್ರಗತಿಗೆ ತರಲಾಗುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಲಾಯಿತು. ಇಂದಿಗೂ ಕೋಲಾರ ಜಿಲ್ಲೆಯ ರೈತರ ಆದಾಯ ಖೋತಾದಲ್ಲಿದೆ. ಹಾಕಿದ್ದ ಬಂಡವಾಳವೂ ವಾಪಸ್ ಸಿಗುತ್ತಿಲ್ಲ. ಸೌರ ವಿದ್ಯುತ್ ಯೋಜನೆಗಳಿಗಾಗಿ 1000 ಕೋಟಿ ಮೀಸಲಿಡಲಗಿತ್ತು. ಕೋಲಾರ ದಂತ ಬಿಸಿಲು ಜಿ ಲ್ಲೆಯಲ್ಲಿ ಯಾವುದೇ ಸೌರ ವಿದ್ಯುತ್ ಘಟಕಗಳು ಸ್ಥಾಪನೆಯಾಗಲಿಲ್ಲ. 2022ರ ಬಜೆಟ್
ರೈಲ್ವೆ ವರ್ಕ್ ಶಾಪ್ ಅನುಷ್ಠಾನವಾಗಲಿಲ್ಲ. ವ ರ್ಕ್ ಶಾಪ್‌ಗೆ ಯಾವುದೇ ಅನುದಾನ, ಜಾಗ ಮೀಸಲಿಡಲಿಲ್ಲ. ಮ್ಯಾಂಗೋ ಎಕ್ಸ್ ಪ್ರಸ್ ರೈಲ್ವೆ ಚಾಲನೆ ಮಾಡಲಾಗುವುದು ಎಂದು ಘೋಷಿಸ ಲಾಗಿತ್ತು.ಕೇವಲ ಒಂದು ಬಾರಿ ಮಾತ್ರ ಕೋ ಲಾರದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ದೇ ಶದ ಉತ್ತರ ಭಾಗಕ್ಕೆ ಸಾಗಿಸಲಾಯಿತು. ಆ ನಂತರ ಈ ಯೋಜನೆ ಸ್ಥಗಿ ತಗೊಂಡಿತ್ತು. ರೈಲ್ವೆ ನಿಲ್ದಾಣಗಳಿಗೆ ಎಸ್ಕಲೇಟರ್ ಅಳವಡಿಸಲಾಗು ವುದು ಎಂದು ಘೋಷಿಸಲಾಗಿತ್ತು. ಬಂಗಾರ ಪೇಟೆ ರೈಲ್ವೆ ನಿಲ್ದಾಣಕ್ಕೆ ಏಳೆಂಟು ತಿಂಗಳ ಹಿಂದೆಯೇ ಎಸ್ಕಲೇಟರ್ ಅಳವಡಿಸಲಾಗಿತ್ತು. ಗಂಗಾ-ಕಾವೇರಿ ನದಿ ಜೋಡಣೆ ಬಗ್ಗೆ ಪ್ರಸ್ತಾಪಿ ಸಲಾಗಿತ್ತು. ಆದರೆ, ಯಾವುದೇ ಪ್ರಕ್ರಿಯೆ ಶುರುವಾಗಲೇ ಇಲ್ಲ. ಬಿಜಿಎಂಎಲ್ ಚಿನ್ನದ ಗಣಿ ಪುನಶ್ಚೇತನ ಕುರಿತು ಯಾವುದೇ ಸ್ಪಷ್ಟ ಯೋಜನೆ
ಘೋಷಣೆಯಾಗಲಿಲ್ಲ. ಬೆಮೆಲ್ ಕೈಗಾರಿಕೆ ಖಾಸಗೀಕರಣದ ತೂಗುಗತ್ತಿ ಹಾಗೆಯೇ ಇದೆ. ಬೆಮೆಲ್ ನಲ್ಲಿ ಕನ್ನಡಿಗರಿಗೆ ಕೆಲಸ ಸಿಗದ ಸಮ ಸ್ಯೆಗೆ ಸಂಸದರು ಯಾ ವುದೇ ರೀತಿ ಸ್ಪಂದಿ ಸ ಲಿಲ್ಲ. 2023ರ ಬಜೆಟ್
ಹಿಂದಿನಂತೆ ರೈಲ್ವೆ ವರ್ಕ್ ಶಾಪ್ ಅನುಷ್ಠಾ ನವಾಗಲಿಲ್ಲ. ರೈತರಿಗೆ ಪ್ರಯೋಜನಕಾರಿ ಯೋಜನೆಗಳು ಪ್ರಕಟವಾಗಲಿಲ್ಲ. ಕೋಲಾರದ ರೈಲ್ವೆ ಬೇಡಿಕೆಗಳನ್ನು ಬಜೆಟ್ ಪ್ರಸ್ತಾಪಿಸಲಿಲ್ಲ. ಭ ದ್ರಾಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಿಸಲಾಗಿತ್ತು. ಆದರೆ, ಭದ್ರ ಮೇಲ್ದಂಡೆ ವ್ಯಾಪ್ತಿಗೆ ಬರುವ ಕೋಲಾರ ಜಿಲ್ಲೆಗೆ ಯಾವುದೇ ಮೂಲದಿಂದ ನೀರು ಹರಿಯಲಿಲ್ಲ. ರೈತರ ಏಳಿಗೆಗಾಗಿ 2.40 ಲಕ್ಷ ಕೋಟಿ ರೂ . ಅನುದಾನಇಡಲಾಗಿತ್ತು. ಆದರೆ ಕೋಲಾರ ರೈತ ರಿಗೆ ಇದರಿಂದ ಯಾವುದೇ ನೆರವಾಗಲಿಲ್ಲ. ಕೋ ಲಾರ ಎಪಿಎಂಸಿ ಇಂದಿಗೂ ಜಾಗದ ಸಮಸ್ಯೆ ಯಿಂದ ನರಳುತ್ತಿದೆ. ಎಪಿಎಂಸಿಗೆ ನಿಗದಿಪಡಿಸಿರುವ ಜಾಗಕ್ಕೆ ಅರಣ್ಯ ಇಲಾಖೆ ಎನ್ ಓಸಿ ನೀಡಲಿಲ್ಲ. ಯಥಾ ಪ್ರಕಾರ ಕೇಂದ್ರ ಬಜೆಟ್ ನಿಂದ ಕೋಲಾರಕ್ಕೆ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. ಕೆ. ಎಸ್. ಗಣೇಶ್