Advertisement

ಬಜೆಟ್ 2021: ಸೆನ್ಸೆಕ್ಸ್ ಸುಮಾರು 2,300 ಪಾಯಿಂಟ್, NSE ನಿಫ್ಟಿ 13,900 ಮಟ್ಟದಲ್ಲಿ ಏರಿಕೆ

03:16 PM Feb 01, 2021 | Team Udayavani |

ನವ ದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ(ಫೆ.1) ತಮ್ಮ ಕೇಂದ್ರ ಬಜೆಟ್ 2021 ರ ಭಾಷಣದಲ್ಲಿ ಘೋಷಿಸಿದ ದೊಡ್ಡ ಮೂಲಸೌಕರ್ಯ ಯೋಜನೆಗಳು, ಹೂಡಿಕೆ ಮತ್ತು ಇತರ ಹೂಡಿಕೆ ಸಂಬಂಧಿತ ಉಪಕ್ರಮಗಳನ್ನು ಷೇರು ಮಾರುಕಟ್ಟೆ ನಿರಂತರವಾಗಿ ಉತ್ತೇಜಿಸುತ್ತಿದೆ.

Advertisement

ಓದಿ : Budget 2021: ಹಿರಿಯ ನಾಗರಿಕರಿಗೆ ತೆರಿಗೆ ರಿಲೀಫ್: ಅಗ್ಗದ ಸಾಲ ನೀಡಲು ಕೇಂದ್ರದ ಒತ್ತು

ಬಿ ಎಸ್‌ ಇ ಸೆನ್ಸೆಕ್ಸ್ ಸುಮಾರು 1900 ರಷ್ಟು ಏರಿಕೆಯಾಗಿದ್ದು 47,188 ಮಟ್ಟವನ್ನು ಮುಟ್ಟಿದರೆ, ಎನ್‌ಎಸ್‌ಇ ನಿಫ್ಟಿ 13,866 ಲಾಗಿಂಗ್ ಮಾಡಿ 251 ಪಾಯಿಂಟ್‌ಗಳ ಅಂತರವನ್ನು ಗಳಿಸಿದೆ. ಯೂನಿಯನ್ ಬಜೆಟ್ ಪ್ರಸ್ತುತಿಗಿಂತ ಮುಂಚಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 443 ಪಾಯಿಂಟ್‌ ಗಳ ಏರಿಕೆ ಕಂಡು 46,728.83 ಕ್ಕೆ ತಲುಪಿದ್ದರೆ, ನಿಫ್ಟಿ 114.85 ಪಾಯಿಂಟ್‌ಗಳಲ್ಲಿ 13,749.45 ಕ್ಕೆ ವಹಿವಾಟು ನಡೆಸಿದೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಭಾಷಣವನ್ನು ಸಂಸತ್ತಿನಲ್ಲಿ ಪ್ರಾರಂಭಿಸುತ್ತಿದ್ದಂತೆ ಸೋಮವಾರ ಮುಂಜಾನೆ ಈಕ್ವಿಟಿ ಮಾನದಂಡದ ಸೂಚ್ಯಂಕಗಳು ವಾಲಟೈಲ್ ಟ್ರೇಡ್  ಹೆಚ್ಚಿನ ಮಟ್ಟದಲ್ಲಿತ್ತು.

ಓದಿ :  ಈ ಬಜೆಟ್ ನಲ್ಲಿ ರೈಲ್ವೆಗೆ ಸಿಕ್ಕಿದೆಷ್ಟು? ಬೆಂಗಳೂರು ಮೆಟ್ರೋಗೆ 14 ಸಾವಿರ ಕೋಟಿ ರೂ.

Advertisement

ಬೆಳಿಗ್ಗೆ 10: 15 ರ ಸುಮಾರಿಗೆ ಬಿ ಎಸ್‌ ಇ ಎಸ್ ಆ್ಯಂಡ್ ಪಿ ಸೆನ್ಸೆಕ್ಸ್ 484 ಪಾಯಿಂಟ್ ಅಥವಾ 1.05 ರಷ್ಟು ಏರಿಕೆ ಕಂಡು 46,770 ಕ್ಕೆ ತಲುಪಿದ್ದರೆ, ನಿಫ್ಟಿ 50 117 ಪಾಯಿಂಟ್ ಅಥವಾ 0.86 ರಷ್ಟು ಏರಿಕೆ ಕಂಡು 13,751 ಕ್ಕೆ ತಲುಪಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಹೆಚ್ಚಿನ ವಲಯ ಸೂಚ್ಯಂಕಗಳು ಹಸಿರು ಬಣ್ಣದ್ದಾಗಿದ್ದು, ನಿಫ್ಟಿ ಹಣಕಾಸು ಸೇವೆ ಶೇಕಡಾ 1.3 ರಷ್ಟು, ಖಾಸಗಿ ಬ್ಯಾಂಕ್ 1.5 ಶೇಕಡಾ ಮತ್ತು ರಿಯಾಲ್ಟಿ 1.1 ರಷ್ಟು ಹೆಚ್ಚಾಗಿದೆ. ಆದರೆ ನಿಫ್ಟಿ ಫಾರ್ಮಾ ಶೇಕಡಾ 1.2, ಐಟಿ ಶೇ 0.8 ಮತ್ತು ಎಫ್‌ ಎಂ ಸಿ ಜಿ ಶೇ 0.1 ರಷ್ಟು ಕುಸಿದಿದೆ. ಷೇರುಗಳಲ್ಲಿ ಇಂಡಸ್‌ ಇಂಡ್ ಬ್ಯಾಂಕ್ ಶೇ 7.6 ರಷ್ಟು ಏರಿಕೆ ಕಂಡು ಪ್ರತಿ ಷೇರಿಗೆ 910.95 ರೂ., ಐಸಿಐಸಿಐ ಬ್ಯಾಂಕ್ ಶೇ 5.2 ಮತ್ತು ಎಚ್‌ ಡಿ ಎಫ್‌ ಸಿ ಬ್ಯಾಂಕ್ ಶೇ 2 ರಷ್ಟು ಏರಿಕೆ ಕಂಡಿದೆ.

ಓದಿ : ‘ಮನ್ ಕಿ ಬಾತ್’ ನಂತರ “ನಾರಿ ಶಕ್ತಿ”ಯ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಕರೀನಾ, ದೀಪಿಕಾ 

 

Advertisement

Udayavani is now on Telegram. Click here to join our channel and stay updated with the latest news.

Next