Advertisement

ಯಾರ ಮೇಲೆ ನಿರ್ಮಲಾ ಕರುಣೆ?

10:08 AM Feb 02, 2020 | mahesh |

ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್‌, ತಮ್ಮ ಎರಡನೇ ಬಜೆಟ್‌ ಮಂಡನೆಗೆ ಸಿದ್ಧರಾಗಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ “ನಿರ್ಮಲಾ ಲೆಕ್ಕಾಚಾರ’ ಬಹಿರಂಗವಾಗಲಿದೆ.

Advertisement

ಇಂದು ಬೆಳಗ್ಗೆ 11 ಗಂಟೆಗೆ ನಿರ್ಮಲಾ ಬಜೆಟ್‌
2ನೇ ಮುಂಗಡ ಪತ್ರ ಮಂಡಿಸಲಿರುವ ವಿತ್ತ ಸಚಿವೆ

ನಿರ್ಮಲಾ ಲೆಕ್ಕಾಚಾರವೇನು?
ಜಿಡಿಪಿ ಸವಾಲು
2018-19ರಲ್ಲಿ ಶೇ.6.8ರಷ್ಟಿದ್ದ ಭಾರತದ ಜಿಡಿಪಿ ದರವು 2019-20ಕ್ಕೆ ನೇರವಾಗಿ ಶೇ.5ಕ್ಕೆ ಇಳಿಕೆಯಾಗಿದೆ. ಮತ್ತೆ ಆರ್ಥಿಕತೆ ಹಳಿಗೆ ತರಲು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲವಿದೆ.

ಆದಾಯ ತೆರಿಗೆ
ಬಜೆಟ್‌ ಎಂದರೆ ಎಲ್ಲರ ಕಣ್ಣು ಆದಾಯ ತೆರಿಗೆ ಮಿತಿ ಮೇಲೆ. ಇದರ ಸ್ಲಾéಬ್‌ಗಳ ಬದಲಾವಣೆಯಾಗಬಹುದು ಎಂಬ ನಿರೀಕ್ಷೆ ಉಂಟು. ಈಗಿರುವ 2.5 ಲಕ್ಷ ರೂ. ಮಿತಿಯನ್ನು ಏರಿಕೆ ಮಾಡಲಿ ಎಂಬ ಬೇಡಿಕೆಯೂ ಇದೆ.

ಹಣದುಬ್ಬರ ಕಡಿತ
ಡಿಸೆಂಬರ್‌ ತಿಂಗಳಿನ ಈರುಳ್ಳಿ ಶಾಕ್‌ ಮತ್ತು ಇರಾನ್‌ನಲ್ಲಿನ ಸಂಘರ್ಷದಿಂದಾಗಿ ಗ್ರಾಹಕ ಹಣದುಬ್ಬರದಲ್ಲಿ ಕೊಂಚ ಏರಿಕೆಯಾಗಿತ್ತು. ಹಣದುಬ್ಬರ ಸ್ಥಿರವಾಗಿಸಲು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಜನರ ಕಣ್ಣಿದೆ.

Advertisement

ವಸತಿ ಯೋಜನೆಗಳಿಗೆ ತೆರಿಗೆ ವಿನಾಯಿತಿ
ಸದ್ಯ 45 ಲಕ್ಷಕ್ಕಿಂತ ಕಡಿಮೆ ದರದ ಮನೆ ಖರೀದಿ ಮಾಡಿದರೆ 1.5 ಲಕ್ಷ ರೂ. ತೆರಿಗೆ ವಿನಾಯಿತಿ ಉಂಟು. ಈ ವಿನಾಯಿತಿಯನ್ನು 75 ಲಕ್ಷ ರೂ. ಮೌಲ್ಯದ ಮನೆ ಖರೀದಿಗೂ ವಿಸ್ತರಣೆ ಮಾಡಿ ಎಂಬ ಬೇಡಿಕೆ ಇದೆ.

ಪ್ರಗತಿದರ ಏರಿಕೆ ನಿರೀಕ್ಷೆ
ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್‌ ತಂಡ ರೂಪಿಸಿದ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಇದರಂತೆ 2020-21ರಲ್ಲಿ ದೇಶದ ಪ್ರಗತಿ ದರ ಶೇ. 6ರಿಂದ ಶೇ.6.5ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಮುಖಾಂಶಗಳು
1. ಚೀನ ಮಾದರಿ ಅನುಸರಿಸಿ ವರ್ಷಕ್ಕೆ 4 ಕೋಟಿ ಉದ್ಯೋಗ ಸೃಷ್ಟಿ
2. ಜಾಗತಿಕ ವ್ಯಾಪಾರ ಸಂಘರ್ಷಗಳಿಂದಾಗಿ ದೇಶದ ಆರ್ಥಿಕತೆಗೆ ಪೆಟ್ಟು
3. ಅಮೆರಿಕ-ಇರಾನ್‌ ಸಂಘರ್ಷದಿಂದಾಗಿ ಎಫ್ಡಿಐ ಹರಿವು ಕಡಿಮೆ
4. ಸಾರ್ವಜನಿಕ ಉದ್ದಿಮೆಗಳಿಂದ ಪರಿಣಾಮಕಾರಿಯಾಗಿ ಬಂಡವಾಳ ವಾಪಸಾತಿ
5. 2020-2025ರ ವರೆಗೆ ಮೂಲಸೌಕರ್ಯಕ್ಕಾಗಿ 102 ಕೋಟಿ ರೂ. ಹೂಡಿಕೆ
6. 2025ರ ವೇಳೆಗೆ 5 ಟ್ರಿಲಿಯಲ್‌ ಆರ್ಥಿಕತೆ ಮಾಡುವ ಬಗ್ಗೆ ಪುನರುಚ್ಚಾರ, ಇದಕ್ಕಾಗಿ ಮೂಲಸೌಕರ್ಯಕ್ಕಾಗಿ 1.4 ಟ್ರಲಿಯನ್‌ ಹಣ ಬಳಕೆ ಮಾಡುವ ಅನಿವಾರ್ಯತೆ

Advertisement

Udayavani is now on Telegram. Click here to join our channel and stay updated with the latest news.

Next