Advertisement

2020-21ರ ಕೇಂದ್ರ ಬಜೆಟ್‌ಗೆ ಜನರ ಸಲಹೆ ಕೋರಿದ ಪ್ರಧಾನಿ

10:28 AM Jan 09, 2020 | Team Udayavani |

ನವದೆಹಲಿ: 2020-21ರ ಕೇಂದ್ರ ಬಜೆಟ್‌ಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. “ಬಜೆಟ್‌ ಎನ್ನುವುದು ದೇಶದ 130 ಕೋಟಿ ಜನರ ಆಶೋತ್ತರಗಳ ಪ್ರತೀಕ. ಈ ಬಾರಿಯ ಬಜೆಟ್‌ಗೆ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

Advertisement

ಸಲಹೆ ಸಲ್ಲಿಸುವುದು ಹೇಗೆ?: ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ನೇರ ಸಂಪರ್ಕಕ್ಕಾಗಿ ಆರಂಭಿಸಲಾಗಿರುವ “mygovindia’ನ ಅಧಿಕೃತ ಟ್ವಿಟರ್‌ ಖಾತೆಗೆ ಸಾರ್ವಜನಿಕರು ಟ್ವೀಟರ್‌ನಲ್ಲಿ @mygovindia ಖಾತೆಗೆ ನೇರವಾಗಿ ತಮ್ಮ ಸಲಹೆ ಸಲ್ಲಿಸಬಹುದು. ಜೊತೆಗೆ, ಸಲಹೆಯು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಇದಕ್ಕಾಗಿ, #IncomeTax #Finance #Farmers #Agriculture #Health #Education #Environment #WaterConservation #GST #Employment #Entrepreneurship #Railways #Infrastructure #Others ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಪ್ರಕಟಿಸಲಾಗಿದೆ. ಸಲಹೆಗೆ ಸೂಕ್ತವಾದ ಹ್ಯಾಶ್‌ಟ್ಯಾಗ್‌ ಹಾಕಿ ಆನಂತರ ಸಲಹೆಗಳನ್ನು ಉಲ್ಲೇಖೀಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next