ನವದೆಹಲಿ:ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಸಂಸದೆ, ಹಣಕಾಸು ಸಚಿವರು ಆಗಿರುವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ 2019-20ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ಈ ಬಾರಿ ಹಲವು ಕೊಡುಗೆ ಘೋಷಿಸಿದ್ದಾರೆ.
ವಿದ್ಯುತ್ ವಾಹನಗಳ ಖರೀದಿಗೆ ಪ್ರೋತ್ಸಾಹ ರೈಲ್ವೆಯಲ್ಲಿ ಖಾಸಗಿ, ಸರ್ಕಾರಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿದೆ. 3ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಶನ್. ಕರ್ಮಯೋಗಿ ಮಾನ್, ಸಮ್ಮಾನ್ ಯೋಜನೆಗೆ ಚಾಲನೆ.
ವಿದ್ಯುತ್ ಪೂರೈಕೆಗೆ “ಒಂದು ದೇಶ, ಒಂದು ಗ್ರಿಡ್” ಯೋಜನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೊಚ್ಚಲ ಬಜೆಟ್ ನಲ್ಲಿ ಘೋಷಿಸಿದ್ದು, ಬಜೆಟ್ ನ ಹೈಲೈಟ್ಸ್, ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…