Advertisement

ಬಂಡವಾಳ, ನವೋದ್ಯಮಕ್ಕೆ ನಮೋತ್ಸಾಹ

01:03 AM Jul 06, 2019 | Team Udayavani |

ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ರತ್ನಗಂಬಳಿ ಸ್ವಾಗತ ಕೋರಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ನವೋದ್ಯಮಕ್ಕೆ ‘ನಮೋತ್ಸಾಹ’ ನೀಡಿದ್ದಾರೆ.

Advertisement

ನವೋದ್ಯಮದ ಬೇರುಗಳು ಗಟ್ಟಿಗೊಳ್ಳಲು ಮತ್ತು ಅವುಗಳ ನಿರಂತರ ಬೆಳವಣಿಗೆಗೆ ಉತ್ತೇಜನ ನೀಡಲಾಗುವುದು. ನವೋದ್ಯಮಿಗಳ ಬಂಡವಾಳ, ತೆರಿಗೆ ಮತ್ತಿತರರ ಹಣಕಾಸಿನ ವಿಷಯಗಳ ಪರಿಶೀಲನೆಗೆ ‘ಈ-ವೆರಿಫಿಕೇಷನ್‌’ ಪದ್ಧತಿ ತರಲಾಗುವುದು. ಇದರಿಂದ ನವೋದ್ಯಮಿ ಗಳು ಸಂಗ್ರಹಿಸುವ ಹಣಕ್ಕೆ ಆದಾಯ ತೆರಿಗೆ ಇಲಾಖೆ ಪರಿಶೀಲನೆಯ ಅವಶ್ಯಕತೆ ಇರುವುದಿಲ್ಲ. ನವೋದ್ಯಮಿಗಳ ಮೌಲ್ಯಮಾಪನಗಳು ಮತ್ತು ಅವರ ಕುಂದುಕೊರತೆಗಳ ನಿವಾರಣೆಗೆ ಕೇಂದ್ರ ನೇರ ತೆರಿಗೆಗಳ ಮಂಡಳಿಯಿಂದ (ಸಿಬಿಡಿಟಿ) ವಿಶೇಷ ಆಡಳಿತಾತ್ಮಕ ವ್ಯವಸ್ಥೆ ರೂಪಿಸಲಾಗು ವುದು. ನಷ್ಟ ಅನುಭವಿಸುವ ನವೋದ್ಯಮಗಳನ್ನು ಪುನಶ್ಚೇತನಗೊಳಿಸಲು ಅನುಕೂಲವಾಗುವಂತೆ ನಿಯಮಗಳಲ್ಲಿ ಕೆಲವೊಂದು ವಿನಾಯ್ತಿ ನೀಡಲಾ ಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ವಿಮೆ ಕ್ಷೇತ್ರದಲ್ಲಿ ಶೇ.100 ಎಫ್ಡಿಐ: ಜಾಗತಿಕ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕೆಲವೊಂದು ಏರಿಳಿತಗಳು ಕಂಡ ಬಂದಿದ್ದರೂ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಹರಿವು ಉತ್ತೇಜನಕಾರಿಯಾಗಿದೆ. 2018-19ರಲ್ಲಿ ಇದು ಶೇ.6ರಷ್ಟು ಹೆಚ್ಚಳ ಕಂಡಿದೆ ಎಂದು ಪ್ರತಿಪಾದಿಸಿರುವ ನಿರ್ಮಲಾ ಸೀತಾರಾಮನ್‌, ಭಾರತವನ್ನು ಇನ್ನಷ್ಟು ಎಫ್ಡಿಐ ಆಕರ್ಷಣೆಯ ತಾಣವನ್ನಾಗಿ ಮಾಡುವ ಗುರಿ ಹೊಂದಿದ್ದಾರೆ. ಇದಕ್ಕಾಗಿ ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಜತೆಗೆ ವಿಮಾನಯಾನ, ಮೀಡಿಯಾ (ಆ್ಯನಿಮೇಷನ್‌, ವಿಷ್ಯುವಲ್ ಎಫೆಕ್ಟ್, ಕಾಮಿಕ್‌) ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಸಲಹೆಗಳನ್ನು ಪರಿಶೀಲಿಸಲಾಗುವುದು. ‘ಸಿಂಗಲ್ ಬ್ರಾಂಡ್‌ ರೀಟೆಲ್ ಸೆಕ್ಟರ್‌’ನಲ್ಲಿ ಎಫ್ಡಿಐಗೆ ನಿಯಮ ಗಳನ್ನು ಸರಳೀಕರಿಸುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next