Advertisement

ಶೂನ್ಯ ಕೃಷಿ ಮಾಡಿದ್ದು ನಾವೇ ಮೊದಲು

12:59 AM Jul 06, 2019 | mahesh |

ಇಡೀ ದೇಶ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದೇ ಈ ‘ಶೂನ್ಯ ಬಂಡವಾಳ ಕೃಷಿ’. 2002ರಲ್ಲಿ ಶೂನ್ಯ ಬಂಡವಾಳ ಕೃಷಿ ವಿಚಾರದಲ್ಲಿ ಕರ್ನಾಟಕದಲ್ಲಿ ದೊಡ್ಡ ಆಂದೋಲನ ನಡೆಯಿತು. ಆನಂತರ ಇದು ಆಂಧ್ರ, ತಮಿಳುನಾಡು, ಕೇರಳ…ಹೀಗೆ ಎಲ್ಲ ಕಡೆ ವಿಸ್ತಾರವಾಯಿತು.

Advertisement

‘ದುಡ್ಡು ಹಾಕದೇ ಕೃಷಿಯಲ್ಲಿ ದುಡ್ಡು ತೆಗೆಯುವುದು ಹೇಗೆ? ಅನ್ನೋ ಆಶ್ಚರ್ಯ ಹೊತ್ತು ಬಂದ ಲಕ್ಷಾಂತರ ಮಂದಿಗೆ ನಾನು ಟ್ರೈನಿಂಗ್‌ ಕೊಟ್ಟಿದ್ದೇನೆ. ಸ್ವತ: ನಾನೇ ಶೂನ್ಯ ಬಂಡವಾಳ ಕೃಷಿಯಲ್ಲಿ ಕಬ್ಬು ಬೆಳೆದು ತೋರಿಸಿದ್ದೇನೆ’.

ಶೂನ್ಯ ಬಂಡವಾಳ ಕೃಷಿ ಎಂದರೆ, ನಮ್ಮದೇ ಬೀಜ, ನಮ್ಮದೇ ಗೊಬ್ಬರ, ನಮ್ಮದೇ ನೀರು ಎಲ್ಲವೂ. ಹೊರಗಿನಿಂದ ಏನನ್ನೂ ತಂದು ಹಾಕದೇ, ರೈತ ತನ್ನ ಶ್ರಮದಲ್ಲಿ ಬೆಳೆಯುವುದೇ ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ. ನನ್ನ ಪ್ರಕಾರ ಹೈನುಗಾರಿಕೆ ಮಾಡುತ್ತಿದ್ದರೆ, 30 ಎಕರೆಯಲ್ಲಿ ಕೃಷಿ ಮಾಡಬಹುದು. ಬೀಜಾಮೃತ, ಜೀವಾಮೃತ, ಮುಚ್ಚಿಗೆ, ಆರ್ದತೆ ಈ ನಾಲ್ಕು ಅಂಶಗಳು ಶೂನ್ಯ ಕೃಷಿಯ ಅಡಿಪಾಯ.

ಜೀವಾಮೃತ ಎಂದರೆ ಬೆಳೆಗೆ ಬೇಕಾದ ಔಷಧ, ಬೆಳೆಯ ಬೇಕಾದ ಬೀಜ ಸಂಸ್ಕರಣೆ ಬೀಜಾಮೃತ, ಮುಚ್ಚಿಗೆ, ಬೆಳಗಳ ರಕ್ಷಣೆಗೆ, ಆರ್ದತೆ ಎಂದರೆ ಮಣ್ಣಿನ ಸತ್ವ ಹೆಚ್ಚು ಮಾಡುವ ಕ್ರಿಯೆ. ಎಲ್ಲವೂ ಸೇರಿದರೆ ‘ಶೂನ್ಯ ಬಂಡಾವಳ ಕೃಷಿ’.

ಒಂದು ಪಕ್ಷ ಮುಖ್ಯ ಬೆಳೆಗೆ ಪೂರಕವಾಗಿ ಅಂತರ ಬೆಳೆ ತೆಗೆದು, ಮುಖ್ಯ ಬೆಳೆಯ ಹೂಡಿಕೆಯನ್ನು ವಾಪಸ್ಸು ಪಡೆಯುವ ಪ್ರಕ್ರಿಯೆಯೂ ಶೂನ್ಯ ಕೃಷಿಯ ಒಂದು ಭಾಗ. ರೈತರ ಆದಾಯ ಹೆಚ್ಚಿಸುವುದು ಎಂದರೆ, ಕೃಷಿಯ ಮೇಲಿನ ಹೂಡಿಕೆ ಕಡಿಮೆ ಮಾಡಿಕೊಳ್ಳುವುದು ಅಂತಲೇ ಅರ್ಥ.

Advertisement

ಈಗಿನ ರೈತರಿಗೆ ಶೂನ್ಯ ಬಂಡವಾಳ ಕೃಷಿ ಬಹುಮುಖ್ಯ. ಅವರಿಗೆ ಹೊಸದಾಗಿ ಏನೂ ಹೇಳಿಕೊಡುವ ಅಗತ್ಯ ಇಲ್ಲ. ಆದರೆ, ಈ ರೀತಿಯ ಮಾದರಿಗಳು ಅಂದರೆ ಇಂತಿಂಥವರು ಶೂನ್ಯ ಬಂಡವಾಳ ಕೃಷಿ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಸರ್ಕಾರ ರೈತರಿಗೆ ಕೊಟ್ಟರೆ ಬಹಳ ಉಪಯೋಗವಾಗುತ್ತದೆ.

ಚಂದ್ರಶೇಖರ ಕಾಡಾದಿ ನೈಸರ್ಗಿಕ ಕೃಷಿತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next