Advertisement
ಅಲ್ಲದೆ ಗೃಹ ಸಾಲಕ್ಕೂ ತೆರಿಗೆ ವಿನಾಯ್ತಿ ಘೋಷಿಸಿದ್ದು, 3.5 ಲಕ್ಷ ರೂ. ವರೆಗೆ ಬಡ್ಡಿ ವಿನಾಯ್ತಿಪಡೆಯಬಹುದಾಗಿದೆ. 2020 ಮಾ.31ರ ಅವಧಿಯೊಳಗೆ ಪಡೆದುಕೊಂಡ ಸಾಲಕ್ಕೆ ಗರಿಷ್ಠ 3.5 ಲಕ್ಷ ರೂ. ಬಡ್ಡಿ ವಿನಾಯ್ತಿ ನೀಡಲಾಗುತ್ತದೆ (ಗರಿಷ್ಠ 45 ಲಕ್ಷ ರೂ.ವರೆಗಿನ ಮನೆ ಖರೀದಿಗೆ). ಒಂದು ವೇಳೆ ಮಧ್ಯಮವರ್ಗದ ವ್ಯಕ್ತಿಗಳು ಪಡೆಯುವ ಸಾಲದ ಅವಧಿ 15 ವರ್ಷಗಳದ್ದಾದರೆ, ಫಲಾನುಭವಿಗಳಿಗೆ 7 ಲಕ್ಷ ರೂ.ಗಳವರೆಗೆ ಬಡ್ಡಿ ವಿನಾಯಿತಿ ದೊರೆಯಲಿದೆ.
ಮನೆ ಬಾಡಿಗೆ ನೀತಿ ಸಂಬಂಧಿಸಿದಂತೆ ಹಳೆಯ ನಿಯಮಗಳಿಗೆ ಮಹತ್ವದ ಸುಧಾರಣೆ ತರಲಾಗಿದೆ. ಸದ್ಯ ಇರುವ ನಿಯಮಾವಳಿ ಬಹಳಷ್ಟು ಹಳೆಯದಾಗಿದ್ದು,ಮನೆ ಮಾಲಿಕ ಮತ್ತು ಬಾಡಿಗೆದಾರ ನಡುವಿನ ವ್ಯವಹಾರಕ್ಕೆ ಹೆಚ್ಚು ಸೂಕ್ತವಾಗಿಲ್ಲ.ಹೀಗಾಗಿ ಮಾದರಿ ಮನೆ ಬಾಡಿಗೆ ನೀತಿ ರೂಪಿಸಲಾಗಿದೆ. ಬೇರೆ ರಾಜ್ಯಗಳಿಗೂ ಸುತ್ತೋಲೆ ಕಳುಹಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.