Advertisement

ಕೇಂದ್ರ ಬಜೆಟ್‌ 2019- 20

01:15 PM Apr 09, 2020 | |

ಬಹಿರ್ದೆಸೆ ಮುಕ್ತ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ಜನ್ಮ ದಿನದ ಅಂಗವಾಗಿ 2019ರಲ್ಲಿ ಎನ್‌ಡಿಎ ಸರ್ಕಾರವು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಜಗತ್ತಿನ ಅತಿ ದೊಡ್ಡ ‘ವರ್ತನೆ ಬದಲಾವಣೆ ಆಂದೋಲನ’ವನ್ನು ಹಮ್ಮಿಕೊಂಡಿತ್ತು. ಈ ಐದು ವರ್ಷಗಳ ಅವಧಿಯಲ್ಲಿ ಗ್ರಾಮೀಣ ನೈರ್ಮಲ್ಯ ವಿಷಯದಲ್ಲಿ ಭಾರತವು ಶೇ.98ರಷ್ಟು ಗುರಿ ಸಾಧಿಸಿದೆ. ಹಾಗೇ, 5.45 ಲಕ್ಷ ಹಳ್ಳಿಗಳನ್ನು ‘ಬಹಿರ್ದೆಸೆ ಮುಕ್ತ ಗ್ರಾಮ’ಗಳೆಂದು ಘೋಷಿಸಲಾಗಿದೆ. ಇದೊಂದು ಐತಿಹಾಸಿಕ ಆಂದೋಲನವಾಗಿದ್ದು, ದೇಶದ ನಾಗರಿಕರ ಮನಸ್ಥಿತಿಯನ್ನು ಬದಲಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಾರ್ವಜನಿಕರು, ಇದನ್ನು ಸರ್ಕಾರಿ ಕಾರ್ಯ ಕ್ರಮದಿಂದ ರಾಷ್ಟ್ರೀಯ ಆಂದೋಲನವಾಗಿ ಮಾರ್ಪಡಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಯಶಸ್ಸಿನಲ್ಲಿ ದೇಶದ 130 ಕೋಟಿ ಜನರೂ ಪಾಲುದಾರರಾಗಿದ್ದಾರೆ.

Advertisement

ಕೊರತೆ, ಉಬ್ಬರ ಇಳಿಕೆ
2011-12 ಹಾಗೂ 2012-13ರ ವಿತ್ತೀಯ ವರ್ಷಗಳಲ್ಲಿ ಕ್ರಮವಾಗಿ ಶೇ. 5.8 ಹಾಗೂ ಶೇ. 4.9ರಷ್ಟಿದ್ದ ವಿತ್ತೀಯ ಕೊರತೆಯನ್ನು 2018-19ರ ಹಣಕಾಸು ವರ್ಷದಲ್ಲಿ ಶೇ. 3.4ಕ್ಕೆ ಇಳಿಸಲಾಗಿದೆ. ಇನ್ನು, 2000-2014ರ ನಡುವೆ ಇದ್ದ ಶೇ. 10.1ರಷ್ಟಿದ್ದ ಸರಾಸರಿ ಆರ್ಥಿಕ ಹಣದುಬ್ಬರವನ್ನು ಶೇ. 4.6ಕ್ಕೆ ಇಳಿಸಲಾಗಿದೆ. 2018ರ ಡಿಸೆಂಬರ್‌ನ ತಿಂಗಳಲ್ಲಿ ಹಣದುಬ್ಬರ ಶೇ. 2.5ರಷ್ಟು ಮಾತ್ರವಿತ್ತು. ಪ್ರಸಕ್ತ ಹಣಕಾಸು ವರ್ಷದ ಜಿಡಿಪಿಯ ಚಾಲ್ತಿ ವಿತ್ತೀಯ ಕೊರತೆಯು (ಸಿಎಡಿ) ಶೇ. 2.5 ಇರಲಿದೆ.

ಎಫ್ಡಿಐ ಹೆಚ್ಚಳ
ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಹಿಂದೆಂದಿಗಿಂತಲೂ ಹೆಚ್ಚು ಉತ್ತೇಜನ ನೀಡಲಾಗಿದ್ದು, ಕಳೆದೈದು ವರ್ಷಗಳಲ್ಲಿ ಭಾರತಕ್ಕೆ 17 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹರಿದುಬಂದಿದೆ. ಇದರ ಜತೆಗೆ, ಏಕರೂಪ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಂಥ ಕ್ರಾಂತಿಕಾರಕ ತೆರಿಗೆ ಪದ್ಧತಿಯು ದೇಶದ ಆರ್ಥಿಕತೆಯ ಬೆಳವಣಿಗೆಗೆ ಇಂಬು ನೀಡಿವೆ.

ಬ್ಯಾಂಕುಗಳ ಚೇತರಿಕೆ
ಮರು ಸಂದಾಯವಾಗದ ಸಾಲಗಳಿಂದ ತತ್ತರಿಸಿದ್ದ ಬ್ಯಾಂಕುಗಳ ಪುನಶ್ಚೇತನಕ್ಕಾಗಿ ‘ಬ್ಯಾಂಕುಗಳ ದಿವಾಳಿ ಕಾಯ್ದೆ’ಯನ್ನು ಜಾರಿಗೊಳಿಸಲಾಗಿದ್ದು, ಇದರ ಫ‌ಲವಾಗಿ 3 ಲಕ್ಷ ಕೋಟಿ ರೂ.ಗಳ ಸಾಲವನ್ನು ವಸೂಲಿ ಮಾಡಲಾಗಿದೆ. 2014ರಲ್ಲಿ 5.4 ಲಕ್ಷ ಕೋಟಿ ರೂ.ಗಳಷ್ಟಿದ್ದ ಅನುಪಯುಕ್ತ ಆಸ್ತಿಗಳ (ಎನ್‌ಪಿಎ) ತಪಾಸಣೆ ಹಾಗೂ ಮೌಲ್ಯ ಮಾಪನಗಳನ್ನು ಕೈಗೊಳ್ಳಲಾಗಿದ್ದು, ಈ ಮೂಲಕ, ಸಾರ್ವಜನಿಕ ವಲಯಗಳ ಬ್ಯಾಂಕುಗಳಿಗೆ ತಮ್ಮ ದುಸ್ಥಿತಿಯಿಂದ ಮೇಲೇಳುವ ಅವಕಾಶ ಕಲ್ಪಿಸಲಾಗಿದೆ.

ಭ್ರಷ್ಟಾಚಾರ ನಿರ್ಮೂಲನೆ
2016 ರಿಯಲ್‌ ಎಸ್ಟೇಟ್ ರೆಗ್ಯುಲೇಷನ್‌ ಕಾಯ್ದೆ (ರೆರಾ), ಬೇನಾಮಿ ವ್ಯವಹಾರ ನಿಗ್ರಹ ಕಾಯ್ದೆ, 2018ರಲ್ಲಿ ದೇಶ ತೊರೆದ ವಿತ್ತೀಯ ಅಪರಾಧಿಗಳ ಕಾಯ್ದೆ ಈ ಮೂಲಕ ಕಪ್ಪು ಹಣವು ರಿಯಲ್‌ ಎಸ್ಟೇಟ್ ಕ್ಷೇತ್ರದಲ್ಲಿ ಗುಪ್ತವಾಗಿ ತೊಡಗುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ಜತೆಗೆ, ಗುರುತರ ಆರ್ಥಿಕ ಅಪರಾಧಗಳನ್ನು ಮಾಡಿ ದೇಶ ಬಿಟ್ಟು ಓಡಿ ಹೋಗುವವರಿಗೆ ಕಡಿವಾಣ ಹಾಕಲಾಗಿದೆ. ಕಲ್ಲಿದ್ದಲು ಹಾಗೂ ದೂರಸಂಪರ್ಕ ಸೆಕ್ಟ್ರಂಗಳ ಹರಾಜು ಪಾರದರ್ಶಕವಾಗಿ ನಡೆದಿವೆ.

Advertisement

ಶೇ. 10ರಷ್ಟು ಮೀಸಲಾತಿ
ಸಾಮಾನ್ಯ ವರ್ಗದ ಬಡವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಮೂಲಕ, ಸದೃಢ ಭಾರತದ ನಿರ್ಮಾಣದಲ್ಲಿ ಎಲ್ಲಾ ಸೌಲಭ್ಯಗಳು ಎಲ್ಲಾ ವರ್ಗದ ಜನರಿಗೂ ಕಲ್ಪಿಸುವ ಕನಸೊಂದನ್ನು ಈಡೇರಿಸಲಾಗಿದೆ. ನವ ಭಾರತ ನಿರ್ಮಾಣಕ್ಕೆ ಇದೊಂದು ಮಹತ್ವದ ಹೆಜ್ಜೆ.

Advertisement

Udayavani is now on Telegram. Click here to join our channel and stay updated with the latest news.

Next