Advertisement

ಮತ್ಸ್ಯ ಸಂಪದ ಜಾರಿ, ಮೀನು ಅಭಿವೃದ್ಧಿಗೆ ರಹದಾರಿ

01:11 AM Jul 06, 2019 | mahesh |

ಮತ್ಸ್ಯೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನು ಗಾರಿಕೆ ಸಚಿವಾಲಯಕ್ಕೆ 3,737 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಪೈಕಿ, ಪಶು ಸಂಗೋಪನೆ ಮತ್ತು ಹೈನುಗಾರಿಕೆಗೆ 2,932.25 ಕೋಟಿ, ಮೀನುಗಾರಿಕಾ ವಿಭಾಗಕ್ಕೆ 804.75 ಕೋಟಿ ರೂ. ಮಿಸಲಿಡಲಾಗಿದೆ.

Advertisement

ಲೋಕಸಭೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಬಜೆಟ್ ಮಂಡಿಸಿದ ನಿರ್ಮಲಾ ಸೀತಾ ರಾಮನ್‌, ಮತ್ಸ್ಯೋದ್ಯಮ ಹಾಗೂ ಮೀನುಗಾರರ ಸಮುದಾಯ ಕೃಷಿಯೊಡನೆ ಅವಿನಾಭಾವ ಸಂಬಂಧ ಹೊಂದಿದ್ದು, ಗ್ರಾಮೀಣ ಭಾಗದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಮತ್ಸ್ಯೋದ್ಯಮದ ಆಡಳಿತ ನಿರ್ವಹಣಾ ಜಾಲದ ಅಭಿವೃದ್ಧಿಗೆ ಅನುವಾಗಲು ಮೀನುಗಾರಿಕಾ ಇಲಾಖೆಯಡಿ ನೂತನ ಮಹತ್ವಾಕಾಂಕ್ಷಿ ಯೋಜನೆ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ’ (ಪಿಎಂಎಂಎಸ್‌ವೈ) ಜಾರಿಗೊಳಿಸಲಾಗಿದೆ. ಇದು ಮೂಲಭೂತ ಸೌಕರ್ಯ ಅಭಿವೃದ್ಧಿ, ಉದ್ಯಮದ ಆಧುನೀಕರಣ, ಉತ್ಪಾದನೆ, ಉತ್ಪಾದನಾ ಸಾಮರ್ಥ್ಯ, ಗುಣಮಟ್ಟ ನಿಯಂತ್ರಣ, ಸಂಸ್ಕರಣೆ, ಮಾರುಕಟ್ಟೆ ಅಭಿವೃದ್ಧಿ ಸೇರಿದಂತೆ ಮೀನುಗಾರರು ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಕಾರ್ಯಗಳ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

•3,737 ಕೋಟಿ ರೂ.: ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕಾ ಕ್ಷೇತ್ರಕ್ಕೆ ಮೀಸಲಿಟ್ಟ ಒಟ್ಟು ಅನುದಾನ.

•2,932.25 ಕೋಟಿ ರೂ.: ಪಶು ಸಂಗೋಪನೆ ಮತ್ತು ಹೈನುಗಾರಿಕಾ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ.

Advertisement

Udayavani is now on Telegram. Click here to join our channel and stay updated with the latest news.

Next