Advertisement

ಫೆ.1ರಂದೇ ಮುಂದಿನ ಬಜೆಟ್‌

06:50 AM Nov 11, 2017 | Team Udayavani |

ನವದೆಹಲಿ: ಈ ವರ್ಷದಿಂದ ಆರಂಭವಾದ “ಫೆ.1ರಂದು ಬಜೆಟ್‌ ಮಂಡನೆ’ ಎಂಬ ಪದ್ಧತಿ ಮುಂದಿನ ವರ್ಷವೂ ಮುಂದುವರಿಯಲಿದೆ. 2018-19ನೇ ಸಾಲಿನ ಬಜೆಟ್‌ ಫೆ.1ರಂದೇ ಮಂಡಿಸಲಾಗುತ್ತದೆ. 

Advertisement

2019ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಹಾಲಿ ಸರ್ಕಾರದಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಡಿಸಲಿರುವ ಐದು ಮತ್ತು ಕೊನೆಯ ಮುಂಗಡ ಪತ್ರವೂ ಅದೇ ಆಗಿರಲಿದೆ. ಜತೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕದ ಮೊದಲ ಬಜೆಟ್‌ ಇದಾಗಿರಲಿದೆ. 

ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಸತ್‌ನ ಚಳಿಗಾಲದ ಅಧಿವೇಶನ ಅಲ್ಪಾವಧಿಯದ್ದಾಗಿರಲಿದೆ. ಹೀಗಾಗಿ ಬಜೆಟ್‌ ಅನ್ನು ಹಿಂದೂಡುವ ಪ್ರಶ್ನೆಯೇ ಇಲ್ಲ. ಆದರೆ ಕಳೆದ ವರ್ಷದಂತೆಯೇ ಹಾಲಿ ವರ್ಷವೂ ಫೆ.1ರಂದೇ ಬಜೆಟ್‌ ಮಂಡನೆಯಾಗಿರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಹಿಂದುಸ್ತಾನ್‌ ಟೈಮ್ಸ್‌’ಗೆ ತಿಳಿಸಿದ್ದಾರೆ.

ಏ.1ರಿಂದಲೇ ಯೋಜನೆಗಳು ಅನುಷ್ಠಾನಗೊಳಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಅದೇ ದಿನದಿಂದ ಬಜೆಟ್‌ ತಯಾರಿಕೆಯ ಕಾರ್ಯವನ್ನೂ ಶುರು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next