ನವದೆಹಲಿ:2017ನೇ ಸಾಲಿನ ಬಹನಿರೀಕ್ಷಿತ ಬಜೆಟ್ ಮಂಡನೆಯಾಗಲಿದೆ. ಹೌದು ಬಜೆಟ್ ನಲ್ಲಿ ಹಾಗಿರಬೇಕಿತ್ತು, ಇದಕ್ಕೆ ಒತ್ತುಕೊಡಬೇಕಾಗಿತ್ತು ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಿಮಗೆ ಬಂದಲ್ಲಿ..ನೀವು ನೇರವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಪ್ರಶ್ನೆ ಕೇಳಬಹುದು…ಅದಕ್ಕೆ ಅವರೇ ಉತ್ತರ ಕೊಡುವುದಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಹೌದು ಇದೊಂದು ಹೊಸ ಸಂಪ್ರದಾಯ…ಬಜೆಟ್ ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ವಿತ್ತ ಸಚಿವರು, ನಾನು ಬುಧವಾರ 2017&18ನೇ ಸಾಲಿನ ಬಜೆಟ್ ಅನ್ನು ಮಂಡಿಸುತ್ತಿದ್ದೇನೆ. ಅದೇ ರೀತಿ ನೀವು ನನಗೆ ಸಂಜೆ 6ಗಂಟೆಗೆ ನೇರವಾಗಿ ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಉತ್ತರ ಕೊಡಲು ನನಗೆ ತುಂಬಾ ಸಂತಸದ ವಿಷಯವಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಬಜೆಟ್ ನಂತರ ನಿಮ್ಮ ಪ್ರಶ್ನೆಯನ್ನು ಟ್ವೀಟರ್ ಮೂಲಕ ಕೇಳಬಹುದು, ನೀವು ಹ್ಯಾಶ್ ಟ್ಯಾಗ್ #MyQuestionToFM ಅಂತ ನಮೂದಿಸಬೇಕು.