Advertisement

ಮಹದಾಯಿ ಹೋರಾಟಗಾರರಿಗೆ ಇನ್ನು ಸಮವಸ್ತ್ರ

02:36 PM Jul 15, 2019 | Suhan S |

ನರಗುಂದ: ಜೀವ ಜಲಕ್ಕಾಗಿ ಸುದೀರ್ಘ‌ 4 ವರ್ಷಗಳ ಹೋರಾಟ ಕಂಡಿರುವ ಮಹದಾಯಿ ಹೋರಾಟಗಾರರು ಇನ್ನು ಎಲ್ಲಿಯೇ ಹೋರಾಟ ಮಾಡಿದರೂ ಹೊಸದೊಂದು ಸಂಚಲನ ಮೂಡಿಸಲಿದ್ದಾರೆ. ಕಾರಣ ಎಲ್ಲ ಮಹದಾಯಿ ಹೋರಾಟಗಾರರಿಗೆ ಸಮವಸ್ತ್ರ ವ್ಯವಸ್ಥೆ ಮಾಡಲಾಗಿದೆ.

Advertisement

ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳುವ ಎಲ್ಲ ಹೋರಾಟಗಾರರಲ್ಲಿ ಮಹಿಳೆಯರು ಹೋರಾಟದ ಚಿಹ್ನೆಯಿರುವ ಸೀರೆಯುಟ್ಟು, ಪುರುಷರು ಹೋರಾಟ ಚಿಹ್ನೆಯಿರುವ ಹಸಿರು ಟವೆಲ್ ಧರಿಸಲಿದ್ದಾರೆ. ಶನಿವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟದ 1459ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ನೂತನ ಸಮವಸ್ತ್ರಗಳನ್ನು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೋರಾಟಗಾರರಿಗೆ ವಿತರಿಸಿದ್ದು ಗಮನ ಸೆಳೆಯಿತು. ಮಹದಾಯಿ ಹೋರಾಟದ ರೂವಾರಿ ರೈತ ಸೇನಾ ಕರ್ನಾಟಕ ಸಂಘಟನೆ ಚಿಹ್ನೆಯಿರುವ ಸೀರೆಗಳನ್ನು ಸೂರತ್‌ನಲ್ಲಿ ತಯಾರಿಸಲಾಗಿದೆ. ಪ್ರತಿ ಸೀರೆಗೆ 200 ರೂ. ವ್ಯಯಿಸಿದ್ದು, ಮಹಿಳಾ ಹೋರಾಟಗಾರರು 100 ರೂ. ಭರಿಸಿ ಸೀರೆ ಪಡೆದುಕೊಳ್ಳಬಹುದಾಗಿದೆ. ಉಳಿದ 100 ರೂ. ದಾನಿಗಳಿಂದ ಭರಿಸಲಾಗಿದೆ ಎಂದು ಸೊಬರದಮಠ ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next