ತ್ತಿರುವುದನ್ನು ಮನಗಂಡಿರುವ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಶಿಸ್ತನ್ನು ತುಂಬಲು ಏಕರೂಪದ ಪ್ರಮಾಣಿಕೃತ ಕಾರ್ಯವಿಧಾನ ರೂಪಿಸಲು ಮುಂದಾಗಿದೆ.
Advertisement
ವಿ.ವಿ. ಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲರೇ ಘಟಿಕೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿರುತ್ತಾರೆ. ಉನ್ನತ ಶಿಕ್ಷಣ ಸಚಿವರು, ಮುಖ್ಯ ಅತಿಥಿ, ಗೌರವ ಡಾಕ್ಟರೇಟ್ ಪುರಸ್ಕೃತರು ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ. ಇದೆಲ್ಲದರ ಜತೆಗೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸ್ವಷ್ಟ ಸ್ವರೂಪವೊಂದು ಇದ್ದು ಅದರಂತೆ ನಡೆಸಬೇಕೇ ಹೊರತು ಯಾವುದೋ ಸಮಾವೇಶದಂತೆ ನಡೆಸುವಂತಿಲ್ಲ.
Related Articles
Advertisement
ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿರುವ ಡಾ| ಎಂ.ಸಿ.ಸುಧಾಕರ್, ಘಟಿಕೋತ್ಸವ ಕಾರ್ಯಕ್ರಮಕ್ಕೆ ಸ್ವಷ್ಟ ರೂಪುರೇಷೆ ರಚಿಸಿ ಅದರ ಕಡ್ಡಾಯ ಪಾಲನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೀಗ ಉನ್ನತ ಶಿಕ್ಷಣ ಇಲಾ ಖೆಯು ರಾಜ್ಯಪಾಲರ ಕಚೇರಿಯ ಜತೆ ಸಮಾಲೋಚನೆ ನಡೆಸಿ ಘಟಿಕೋತ್ಸವ ಕಾರ್ಯಕ್ರಮಗಳಿಗೆ ಏಕರೂಪದ ಪ್ರಮಾಣಿಕೃತ ಕಾರ್ಯವಿಧಾನವೊಂದನ್ನು ರಚಿಸುವ ಪ್ರಕ್ರಿಯೆ ಆರಂಭಿಸುವ ಹಂತದಲ್ಲಿದೆ.
ಘಟಿಕೋತ್ಸವ ನಿರ್ವಹಣೆಗೆ ಇದೆ ಬ್ಲ್ಯೂಬುಕ್ವಿಶ್ರಾಂತ ಕುಲಪತಿಯೊಬ್ಬರ ಪ್ರಕಾರ, ವಿ.ವಿ.ಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಏಕರೂಪತೆ ತರುವುದು ಸ್ವಾಗತಾರ್ಹ. ಆದರೆ, ಈಗಾಗಲೇ ಘಟಿಕೋತ್ಸವ ಕಾರ್ಯಕ್ರಮ ಹೇಗೆ ನಡೆಸಬೇಕು ಎಂಬ ಸಮಗ್ರ ಮಾಹಿತಿ, ಸೂಚನೆಯುಳ್ಳ ಬ್ಲ್ಯೂ ಬುಕ್ ಪ್ರತಿ ವಿ.ವಿ.ಗಳಲ್ಲಿಯೂ ಇದೆ. ವಿ.ವಿ.ಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವಿಗೆ ಈ ಬ್ಲೂé ಬುಕ್‌ನ ಅರಿವು ಇಲ್ಲದಿರುವುದರಿಂದ ಎಡವಟ್ಟುಗಳು ಜರಗುತ್ತಿವೆ. ಬ್ಲ್ಯೂ ಬುಕ್‌ನ ಪಾಲನೆ ಮಾಡಿದರೆ ಗೊಂದಲಗಳಿಗೆ ಆಸ್ಪದವಿರುವುದಿಲ್ಲ. ಘಟಿಕೋತ್ಸವ ಶಿಸ್ತುಬದ್ಧವಾಗಿ ನಡೆಯಲು ಅಗತ್ಯವಿದ್ದರೆ ಕಾನೂನು ತಿದ್ದುಪಡಿ ಮಾಡಲು ಸರಕಾರ ಮುಂದಾಗಬೇಕು. ಮನಸ್ಸಿಗೆ ತೋಜಿದಂತೆ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸಿದರೆ ಘಟಿಕೋತ್ಸವದ ಘನತೆಗೆ ಚ್ಯುತಿ ಬರುತ್ತದೆ ಎಂದು ಹೇಳುತ್ತಾರೆ. ಹಲವು ಘಟಿಕೋತ್ಸವಗಳು ಗೊಂದಲದಲ್ಲಿ ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಬಗ್ಗೆ ರಾಜ್ಯಪಾಲರ ಜತೆ ಚರ್ಚೆ ನಡೆಸಿದ್ದು ಘಟಿಕೋತ್ಸವ ಕಾರ್ಯಕ್ರಮಗಳಿಗೆ ಏಕರೂಪತೆ ತರುವ ಚಿಂತನೆಯಲ್ಲಿದ್ದೇವೆ. ನಾವು ಈ ಬಗ್ಗೆ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿ ಎಲ್ಲ ವಿ.ವಿ.ಗಳಿಗೂ ಕಳುಹಿಸಿ, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಿದ್ದೇವೆ.
-ಡಾ| ಎಂ. ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ – ರಾಕೇಶ್ ಎನ್.ಎಸ್.