Advertisement

ಕೇಂದ್ರದಿಂದ ಏಕರೂಪ ನಾಗರಿಕ ಸಂಹಿತೆ ಎಂಬ ಮಕ್ಮಲ್‌ ಟೋಪಿ: ನಿವೃತ್ತ ನ್ಯಾ| ಗೋಪಾಲ ಗೌಡ

12:32 AM Oct 08, 2023 | Team Udayavani |

ಬೆಂಗಳೂರು: ಬಿಜೆಪಿ ಸರಕಾರ 2024ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಎಂಬ ಮಕ್ಮಲ್‌ ಟೋಪಿ ಹಾಕಲು ಹೊರಟಿದೆ. ಇಂತಹ ಸಂಹಿತೆಯೊಂದನ್ನು ಜಾರಿಗೊಳಿಸಿದರೆ ಜನ ದಂಗೆ ಏಳುತ್ತಾರೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ| ಗೋಪಾಲ ಗೌಡ ಎಚ್ಚರಿಕೆ ನೀಡಿದ್ದಾರೆ.

Advertisement

ಕೆಎಎಸ್‌ ಆಫೀಸರ್ ಒಕ್ಕೂಟದ ಸಭಾಂಗಣದಲ್ಲಿ ಫೋರಂ ಫಾರ್‌ ಡೆಮಾಕ್ರಸಿ ಮತ್ತು ಕಮ್ಯುನಲ್‌ ಅಮಿಟಿಯ ಕರ್ನಾಟಕ ಚಾಪ್ಟರ್‌ ಆಯೋಜಿಸಿದ್ದ “ಏಕರೂಪ ನಾಗರಿಕ ಸಂಹಿತೆ’ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ಯುಸಿಸಿಯನ್ನು ವೈಭವೀಕರಿಸಿ ದೇಶದ ಜ್ವಲಂತ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ತಿರುಗಿಸುವ ಹುನ್ನಾರವನ್ನು ಕೇಂದ್ರ ಸರಕಾರ ನಡೆಸಿದೆ. ಜನ ಕಲ್ಯಾಣದ ಯೋಜನೆಗಳನ್ನು ಜಾರಿಗೊಳಿಸುವುದನ್ನು ಬಿಟ್ಟು ವಿಷಯವಲ್ಲದ ವಿಷಯವನ್ನು ವಿಷಯವನ್ನಾಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ನಾವು ಎಚ್ಚರವಾಗಿರಬೇಕು ಎಂದು ನ್ಯಾ. ಗೋಪಾಲ ಗೌಡ ಹೇಳಿದರು. ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾ| ನಾಗಮೋಹನ್‌ ದಾಸ್‌ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next