Advertisement

ಎಲ್ಲ ವಿವಿಗಳಿಗೆ “ಏಕರೂಪ ಕಾಯ್ದೆ’ಮಸೂದೆ: ಮರುಪರಿಶೀಲನೆಗೆ ಸಮಿತಿ

12:55 AM Apr 16, 2020 | Sriram |

ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳಿಗೂ ಏಕರೂಪದ ಕಾಯ್ದೆ ಜಾರಿಗೊಳಿಸುವ ಸಂಬಂಧ ರೂಪಿಸಲಾಗಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ – 2017 ಅನ್ನು ಪರಿಷ್ಕರಿಸಲು ತೀರ್ಮಾನಿಸಿರುವ ರಾಜ್ಯ ಸರಕಾರ, ಈ ನಿಟ್ಟಿನಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ.

Advertisement

ಉನ್ನತ ಶಿಕ್ಷಣ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರ ನಿರ್ದೇಶನದಂತೆ ಸಮಿತಿ ರಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಡಾ| ವಾಸುದೇವ ಅತ್ರೆ ಅವರು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವ ಹಿಸಲಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ| ಬಿ. ತಿಮ್ಮೇಗೌಡ, ಐಐಐಟಿ ಬೆಂಗಳೂರಿನ ನಿರ್ದೇಶಕ ಪ್ರೊ| ಸಡಗೋಪನ್‌, ಸೃಷ್ಟಿ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಟ್‌ ಅಂಡ್‌ ಡಿಸೈನ್‌ ಟೆಕ್ನಾಲಜಿಯ ಗೀತಾ ನಾರಾಯನ್‌ ಸೃಷ್ಟಿ, ಸೆಂಟರ್‌ ಫಾರ್‌ ಎಜುಕೇಶನಲ್‌ ಆ್ಯಂಡ್‌ ಸೋಶಿಯಲ್‌ ಸ್ಟಡೀಸ್‌ನ ಅಧ್ಯಕ್ಷ ಡಾ| ಎಂ.ಕೆ. ಶ್ರೀಧರ್‌ ಸಮಿತಿಯ ಸದಸ್ಯರಾಗಿದ್ದು, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಸ್‌.ಎಂ. ಕೋರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ವರದಿ ಸಲ್ಲಿಸಲು ಸಮಿತಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.

ಈ ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ರಾಜ್ಯಪಾಲರು ಇದನ್ನು ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದರು. ಮಸೂದೆಯನ್ನು ಪರಾಮರ್ಶೆ ನಡೆಸಿದ ಕೇಂದ್ರ ಗೃಹ ಸಚಿವಾಲಯ ಅದರಲ್ಲಿರುವ 9 ಅಂಶಗಳ ಬಗ್ಗೆ ರಾಜ್ಯ ಸರಕಾರದಿಂದ ಸ್ಪಷ್ಟೀಕರಣ ಕೋರಿತ್ತು. ಅಲ್ಲದೆ ಮಸೂದೆಗೆ ಇನ್ನೂ ಕೆಲವು ಅಂಶಗಳನ್ನು ಸೇರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next