ಮುಂಬೈ: ಹೇರ್‌ಕಟ್ ವಿಷಯವಾಗಿ ಕುಪಿತಗೊಂಡ 13 ವರ್ಷದ ಬಾಲಕ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಕೆಳಗ್ಗೆ ಬಿದ್ದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಬಾಯಂದರ್‌ನಲ್ಲಿ ಗುರುವಾರ ನಡೆದಿದೆ.
ಪೋಷಕರು ಹೇರ್ ಸಲೂನ್‌ಗೆ ಬಾಲಕನನ್ನು ಕರೆದುಕೊಂಡು ಹೋಗಿ ಹೇರ್ ಕಟ್ಟಿಂಗ್ ಮಾಡಿಸಿದ್ದರು. ಆದರೆ ಈ ಹೇರ್ ಸ್ಟೈಲ್ ಹುಡುಗನಿಗೆ ಇಷ್ಟವಾಗಲಿಲ್ಲ. ಇದರಿಂದ ಕೋಪಗೊಂಡ ಬಾಲಕ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಲ್ಲಿದ್ದ ತನ್ನ ಮನೆಯ ಶೌಚಗೃಹದ ಕಿಟಕಿಯಿಂದ ಕೆಳಕ್ಕೆ ಹಾರಿದ್ದಾನೆ.
ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದರಿಂದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೆಲ ಹೊತ್ತು ಆಘಾತಕ್ಕೆ ಒಳಗಾಗಿದ್ದರು. ಘಟನೆ ಸಂಬಂಧ ನವ್‌ಗರ್ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಕಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.