Advertisement
ಬಂಟ್ವಾಳ ಪೇಟೆ ಯಲ್ಲಿ ರೇಡಿಯೊ ವೀಕ್ಷಕ ವಿವರಣೆ :
Related Articles
Advertisement
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವಿದ್ದೇವೆ. ಅಂದಿನ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹಳ್ಳಿ ಹಳ್ಳಿಯ ಯುವಜನರನ್ನು ಕ್ರಾಂತಿಕಾರಿ ಹೆಜ್ಜೆ ಇರಿಸಲು ಪ್ರೇರೇಪಿಸಿತ್ತು. ಅದರ ಫಲವಾಗಿ ನಾವಿಂದು ಸ್ವತಂತ್ರರು.
1942ರ ಕ್ವಿಟ್ ಇಂಡಿಯಾ ಚಳುವಳಿಯಿಂದ ಪ್ರೇರೇಪಿತಗೊಂಡು ಹೋರಾಟಕ್ಕೆ ಧುಮುಕಿದವರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಭೋಜರಾಜ ಹೆಗ್ಡೆ. ಅವರಿಗೀಗ 98 ವರ್ಷ.
ನೇರ ನಡೆ-ನುಡಿ, ಅಪ್ಪಟ ಗಾಂಧೀವಾದಿ, ಖಾದಿ ವಸ್ತ್ರಧಾರಿ, ಸರಳ ಜೀವನ, ಉನ್ನತ ಚಿಂತನ, ನಿತ್ಯಜೀವನದಲ್ಲಿ ಧರ್ಮದ ಅನುಷ್ಠಾನ, ಸದಾ ಪರರ ಹಿತಕ್ಕಾಗಿ ಶ್ರಮಿಸುವ ಅವರು 1923ರ ಫೆ. 13ರಂದು ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ದಂಪತಿಯ ಪುತ್ರನಾಗಿ ಜನಿಸಿದರು. ಬೆಳ್ತಂಗಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ಶಿಕ್ಷಣ ಪಡೆದರು. ಆ ಕಾಲದಲ್ಲಿ ಮುಂದಿನ ಶಿಕ್ಷಣಕ್ಕೆ ಪುತ್ತೂರು ಅಥವಾ ಮಂಗಳೂರಿಗೆ ಹೋಗಬೇಕಿತ್ತು. ಹಾಗಾಗಿ ಶಿಕ್ಷಣಕ್ಕೆ ಪೂರ್ಣವಿರಾಮ ಬಿತ್ತು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ 1942ರಲ್ಲಿ ನಡೆದ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸಕ್ರಿಯರಾದರು. ಮಂಗಳೂರಿನ ಗಾಂಧಿಪಾರ್ಕ್‌ನಲ್ಲಿ ನಡೆದ ಚಳುವಳಿಯಲ್ಲಿ ಭಾಗ ವಹಿಸಲು ಭೋಜರಾಜ ಹೆಗ್ಡೆಯವರು ಪಡಂಗಡಿ ಯಿಂದ ತಮ್ಮ ಶಿಕ್ಷಕ ಕುಂಞಣ್ಣ ರೈ ಅವರ ಸೈಕಲ್‌ನಲ್ಲಿ ತೆರಳಿದ್ದರು. ಧರಣಿ ಕುಳಿತವರ ಮೇಲೆ ಪೊಲೀಸರು ಲಾಠಿ ಬೀಸಿದರೂ ಅಂಜದೆ ಬ್ರಿಟಿಷರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಘರ್ಷಣೆಯಲ್ಲಿ ಧೋತಿ ಹರಿದಾಗ ಖಾದಿಯನ್ನು ಉಟ್ಟ ಹೆಗ್ಡೆಯವರು ಇಂದಿಗೂ ಖಾದಿಯನ್ನೇ ಬಳಸುತ್ತಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ದಿನ ನನ್ನ ಜೀವನದಲ್ಲಿ ಅವಿಸ್ಮರಣೀಯ. ಸ್ವಾತಂತ್ರಾéನಂತರ ರಾಷ್ಟ್ರೀಯ ಸೇವಾ ದಳದಲ್ಲಿ ತರಬೇತುದಾರನಾಗಿ ಸೇರಿಕೊಂಡೆ. ದೇಶಾದ್ಯಂತ ಅನೇಕ ಮಕ್ಕಳಿಗೆ ತರಬೇತಿ ನೀಡಿದೆ. ಬ್ರಿಟಿಷ್ ಹೈಕಮಿಷನರ್ ಮತ್ತು ಮೊರಾರ್ಜಿ ದೇಸಾಯಿ ಅವರು ಹೆಗ್ಡೆಯ ವರಿಗೆ ಜಂಟಿಯಾಗಿ ನವೋದ್ಧಾರಕ ಪ್ರಶಸ್ತಿ ಪ್ರದಾನ ಮಾಡಿದ್ದರು. ಆಗ ಈ ಪ್ರಶಸ್ತಿ ಪಡೆದವರು 10 ಮಂದಿ ಮಾತ್ರ.
ಆಚಾರ್ಯ ವಿನೋಬಾ ಭಾವೆ ಅವರು ಭೂದಾನ ಚಳವಳಿ ಸಂದರ್ಭ ಗಾಂಧೀಜಿಯವರು ದೇಣಿಗೆ ಸಂಗ್ರಹಿ ಸುತ್ತಿದ್ದಾಗ ಹೆಗ್ಡೆಯ ವರು 5 ರೂ. ನೀಡಿದ್ದರು. ಅದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ. ಗಾಂಧೀಜಿ ಯವರು ಹೆಗ್ಡೆಯವರನ್ನು ಗುರುತಿಸಿ ಗುಲಾಬಿ ಕೊಟ್ಟು ಪ್ರಶಂಸಿಸಿದ್ದರು. ನಿಜಲಿಂಗಪ್ಪ ಸಿಎಂ ಆದಾಗ ಹೆಗ್ಡೆಯವರನ್ನು ಸಮ್ಮಾನಿಸಿ ಭದ್ರಾವತಿ ಯಲ್ಲಿ 5 ಎಕ್ರೆ ಭೂಮಿ ಕೊಡಲು ಬಂದಾಗ ವಿನಯವಾಗಿ ತಿರಸ್ಕರಿಸಿದ್ದರು. ಮೊರಾ ರ್ಜಿ ದೇಸಾಯಿ ಯವರು ಗ್ರಾಮೋದ್ಧಾರಕ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಈಗ ವಯೋಸಹಜ ವಾಗಿ ದಣಿದಿದ್ದರೂ ಹೋರಾಟದ ನೆನಪುಗಳು ಮಾಸಿಲ್ಲ. ಅದೇ ಯುವ ಜನರಿಗೆ ಪ್ರೇರಣೆ.
ಸಿದ್ಧಕಟ್ಟೆಯಲ್ಲಿ ಸಹಕಾರಿ ಸಂಘದಲ್ಲಿ ನೌಕರರಾಗಿದ್ದರು. ಪ್ರತೀ ವರ್ಷ 75 ವಿದ್ಯಾರ್ಥಿನಿಯ ರಿಗೆ ತನ್ನ ಪತ್ನಿ ನೆನಪಿನಲ್ಲಿ ಪುಸ್ತಕ ಮತ್ತು ಲೇಖನ ಪರಿಕರಗಳನ್ನು ನೀಡು ತ್ತಾರೆ. ದೀನ-ದಲಿತರಿಗೆ ನೆರವು ನೀಡುವ ಹಿರಿಯ ಗಾಂಧೀವಾದಿ ಇವರು. -ಭೋಜರಾಜ ಹೆಗ್ಡೆ ಬೆಳ್ತಂಗಡಿ
ಐತಿಹಾಸಿಕ ಘಟನೆಗೆ ಸಾಕ್ಷಿಯಾದೆ :
ಪ್ರಥಮ ಸ್ವಾತಂತ್ರ್ಯ ಉತ್ಸವ ದಲ್ಲಿ ರಾತ್ರಿ ಇಡೀ ಜಾಗ ರಣೆಯಲ್ಲಿದ್ದು, ಬೆಳಗ್ಗೆ ರಾಷ್ಟ್ರ ಧ್ವಜಾ ರೋಹಣ ಮಾಡಿದ್ದೇ ದೊಡ್ಡ ಅದೃಷ್ಟದ ಸಂಗತಿ. ಅಂಚೆ ಇಲಾಖೆಯಲ್ಲಿ ಬಾಯ್ ಮೆಸೆಂಜರ್ (ಟೆಲಿ ಗ್ರಾಮ್‌ಗಳನ್ನು ತಲುಪಿಸುವ ಕೆಲಸ) ಆಗಿ ಸೇರಿದ್ದೆ. ಆ.14ರ ರಾತ್ರಿ ಇಡೀ ಕೊಳದ ಪೇಟೆಯ ಅಂಚೆ ಕಚೇರಿಯನ್ನು ಸಿಂಗರಿಸಿದೆವು. ಬೆಳಗ್ಗೆ 7ಕ್ಕೆ ರಾಷ್ಟ್ರಧ್ವಜಾರೋಹಣ ವನ್ನು ನೆರವೇರಿಸಿದೆವು. ಐತಿಹಾಸಿಕ ಘಟನೆಯಾದ ಕಾರಣ ಆಗ ಕಚೇರಿಯವರು ಚಿತ್ರವನ್ನು ತೆಗೆಸಿಕೊಳ್ಳಲಾಗಿತ್ತು. ಗುರುಕೃಪಾ ಸ್ಟುಡಿಯೋದ ಶಿರಾಲಿಯವರು ಚಿತ್ರ ತೆಗೆಯಲು ಬಂದಿದ್ದರು. ಆ ಚಿತ್ರವನ್ನು ದಾಖಲೆ ಯಾಗಿ ಇನ್ನೂ ನನ್ನಲ್ಲಿದೆ. ಅದೊಂದು ಅತ್ಯಂತ ಅಪ ರೂಪದ ಕ್ಷಣ. ಉಡುಪಿಯಲ್ಲಿ ಶಾಲೆ ಮಕ್ಕಳು ಮೆರವಣಿಗೆ ನಡೆಸಿ ಅಜ್ಜರಕಾಡಿನಲ್ಲಿ ಸ್ವಾತಂತ್ರ್ಯ ಉತ್ಸವ ವನ್ನು ಆಚರಿಸಿದರು. ನೂರಾರು ಮಂದಿ ಸೇರಿದ್ದರು. ಊರಲ್ಲೆಲ್ಲ ಹಬ್ಬದ ವಾತಾವರಣ ನೆಲೆಸಿತ್ತು. ಎಲ್ಲೆಲ್ಲೂ ದೇಶಭಕ್ರಿಯ ವಾತಾ ವರಣ ಕಾಣುತ್ತಿತ್ತು. ಇದಕ್ಕೆಲ್ಲಾ ಸಾಕ್ಷಿಯಾದದ್ದೇ ನನ್ನ ಜೀವಮಾನದ ಅತ್ಯಮೂಲ್ಯ ಗಳಿಗೆಯಷ್ಟೇ ಅಲ್ಲ; ಅದೃಷ್ಟದ ಕ್ಷಣಗಳೂ ಹೌದು. –ಇಮ್ಯಾನ್ಯುಯಲ್ ಸುಚಿತ ಕುಂದರ್ ಉಡುಪಿ