ಮುಳಗುಂದ: ಸಮೀಪದ ನೀಲಗುಂದ ಗ್ರಾಮದಲ್ಲಿ ವಸತಿ ಯೋಜನೆ ಸೇರಿದಂತೆ ಹಲವು ಸೌಲಭ್ಯಗಳು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಧಕ್ಕೆ ನಿಂತು ಸಾರ್ವಜನಿಕರು ತೊಂದರೆ ಅನುಭವಿಸುವಂತಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೇರಿಯಲ್ಲಿ ತುಂಗಭದ್ರಾ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆ ಮಾಡಲು ಆಗ್ರಹಿಸಿದರೂ ಸ್ಥಳೀಯ ಗ್ರಾಪಂ ಸಿಬ್ಬಂದಿ, ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದು, ಕೂಡಲೇ ಜಿಲ್ಲಾಡಳಿದ ಅಧಿಕಾರಿಗಳಿಗೆ ಸೂಚನೆ ನೀಡಿ ಸೌಲಭ್ಯ ಒದಗಿಸಬೇಕು ಎಂದು ಗ್ರಾಮಸ್ಥರಾದ ಚಂದ್ರಶೇಖರ ಜಕ್ಕಮ್ಮನವರ, ಸಂಜೀವ ಗುಡಸಲಮನಿ, ಶ್ರೀಂಕಾತ ಹಾದಿಮನಿ, ಶಿವಪ್ಪ ಜಕ್ಕಮ್ಮನವರ, ಅಣ್ಣಪ್ಪ ಕಾಳೆ, ಮುದಕಪ್ಪ ಕಾಳೆ, ಚಂದ್ರ ಗುಡಸಲಮನಿ ಸೇರಿದಂತೆ ಇತರರು ಆಗ್ರಹಿಸಿದರು.
Advertisement
ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಸುಮಾರು 15 ಮನೆಗಳು ಅರ್ಧಕ್ಕೆ ನಿಂತಿವೆ. ಇವು ಮಳೆ ಗಾಳಿಗೆ ಬೀಳುವ ಹಂತದಲ್ಲಿದೆ. ಒಂದು ವರ್ಷವಾದರೂ ಸಹಾಯಧನ ನೀಡದೆ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಸ್ಥಳೀಯ ಅಂಬೇಡ್ಕರ್ ನಗರದಲ್ಲಿ 8 ಜನ ಫಲಾನುಭವಿಗಳಿಗೆ ಎನ್‌ಆರ್‌ಇಜಿ ಯೋಜನೆಯಡಿ ಕುರಿ, ದನದ ದೊಡ್ಡಿ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದರೂ ಯೋಜನೆ ಸದುಪಯೋಗವಾಗಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಾಣಗೊಂಡರೂ ಕೆಲವರ ಸಹಾಯಧನ ದೊರಕಿಲ್ಲ. ಹೊಸದಾಗಿ ವಸತಿ ಯೋಜನೆಯಡಿ 15 ಫಲಾನುಭವಿಗಳಿಗೆ ಮನೆ ಮಂಜೂರಾಗಿದ್ದು, ಈವರೆಗೂ ಆದೇಶ ಪ್ರತಿ ನೀಡಿಲ್ಲ.