Advertisement

ತಾರತಮ್ಯ ನೀತಿಯಿಂದ ರೈತರಿಗೆ ಅನ್ಯಾಯ

11:48 AM Oct 06, 2019 | Team Udayavani |

ಜಮಖಂಡಿ: ರಾಜ್ಯದಲ್ಲಿ ಭೀಕರ ನೆರೆಹಾವಳಿಯಿಂದ 38 ಸಾವಿರ ಕೋಟಿಯಷ್ಟು ಹಾನಿಯಾಗಿದೆ ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದರೇ, ಕೇಂದ್ರ ಸರಕಾರ ಕೇವಲ 200 ಕೋಟಿ ನೆರೆ ಪರಿಹಾರ ನೀಡಿದೆ. ತಾರತಮ್ಯ ನಿರ್ಣಯದಿಂದ ರಾಜ್ಯದ ರೈತರ ಬಹಳಷ್ಟು ಅನ್ಯಾಯವಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕುರಬೂರ ಶಾಂತಕುಮಾರ ಹೇಳಿದರು.

Advertisement

ನಗರದ ರಮಾನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ರಾಜ್ಯಕ್ಕೆ ಕನಿಷ್ಠ 20 ಸಾವಿರ ಕೋಟಿ ಬಿಡುಗಡೆಯಾಗಬೇಕಾಗಿತ್ತು. ನೆರೆ ಸಂತ್ರಸ್ತರ ಅಹವಾಲು ಹೇಳಲು ಆಗಮಿಸಿದ ರೈತರನ್ನು ಬಂಧಿಸಿರುವುದು ಖಂಡನೀಯ. ಪೊಲೀಸ್‌ ರಾಜ್ಯದ ಆಡಳಿತವಾಗುತ್ತಿದ್ದು, ಪ್ರಜಾಪ್ರಭುತ್ವದ ಧಮನಕಾರಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆಸಂತ್ರಸ್ತರಿಗೆ ನೀಡುವ ಪರಿಹಾರ ಮಾನದಂಡ ಅವೈಜ್ಞಾನಿಕವಾಗಿದೆ ಈಗಿರುವ ಮಾನದಂಡವನ್ನು ತಿದ್ದುಪಡಿ ಮಾಡುವ ಮೂಲಕ ಬೆಳೆ, ಮನೆಗಳ ನಷ್ಟದ ಪರಿಹಾರ ವೈಜ್ಞಾನಿಕವಾಗಿ ನಡೆಸಿ ಸಮರ್ಪಕ ರೀತಿಯಲ್ಲಿ ವಿತರಿಸಬೇಕು. ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಹೋರಾಡಬೇಕಾಗಿದ್ದ ಸಂಸದರುಗಳು ರಣಹೇಡಿಗಳ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ. ಸಂಸದರು ಎಚ್ಚೆತ್ತುಕೊಳ್ಳದಿದ್ದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರಧಾನಿ ಫಸಲ ಬಿಮಾ ಬೆಳೆವಿಮೆ ತಿದ್ದುಪಡಿ ಮಾಡಿ ಎಲ್ಲ ಬೆಳೆಗಳಿಗೂ, ಎಲ್ಲ ಪ್ರದೇಶಗಳಿಗೂ ಅನ್ವಯ ಆಗುವ ರೀತಿಯಲ್ಲಿ ಬೆಳೆ ವಿಮೆ ಜಾರಿಗೆ ತರಬೇಕು. ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದೆ. ಸರ್ಕಾರಕ್ಕೆ ಪರಿಹಾರ ಕೇಳುವ ಪದ್ದತಿ ನಿಲ್ಲುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಕ್ತಹಳ್ಳಿ ದೇವರಾಜ, ತಾಲೂಕು ಅಧ್ಯಕ್ಷ ಸಿದ್ದಪ್ಪ ಖನಜಣ್ಣವರ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next