Advertisement

Unemployment rate ದೇಶದಲ್ಲಿ ನಿರುದ್ಯೋಗ ಪ್ರಮಾಣ ಇಳಿಕೆ

09:59 PM Oct 09, 2023 | Team Udayavani |

ನವದೆಹಲಿ: ದೇಶದ ನಗರ ಪ್ರದೇಶಗಳಲ್ಲಿ 15 ವರ್ಷ ಮೇಲ್ಪಟ್ಟ ವ್ಯಕ್ತಿಗಳ ನಿರುದ್ಯೋಗ ಪ್ರಮಾಣ 2023ರ ಏಪ್ರಿಲ್‌-ಜೂನ್‌ ತ್ತೈಮಾಸಿಕದಲ್ಲಿ ಶೇ.6.6ಕ್ಕೆ ಇಳಿಕೆಯಾಗಿದೆ.

Advertisement

ಇದೇ ತ್ತೈಮಾಸಿಕದಲ್ಲಿ 2022ರಲ್ಲಿ ನಿರುದ್ಯೋಗ ಪ್ರಮಾಣವು ಶೇ.7.6ರಷ್ಟಿತ್ತು ಎಂಬುದು ರಾಷ್ಟ್ರೀಯ ಸ್ಯಾಂಪಲ್‌ ಸರ್ವೆ ಕಚೇರಿಯ(ಎನ್‌ಎಸ್‌ಎಸ್‌ಒ) ದತ್ತಾಂಶದಿಂದ ತಿಳಿದುಬಂದಿದೆ.

ಕೊರೊನಾ ಪರಿಣಾಮದಿಂದಾಗಿ 2022ರ ಏಪ್ರಿಲ್‌-ಜೂನ್‌ ತ್ತೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ.7.6ಕ್ಕೆ ಏರಿಕೆ ಆಗಲು ಕಾರಣವಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಾಹಿತಿ ಪ್ರಕಾರ, 2023ರ ಜನವರಿ-ಮಾರ್ಚ್‌ ತ್ತೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ.6.8ರಷ್ಟಿತ್ತು. ಅದೇ ರೀತಿ 2022ರ ಜುಲೈ-ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌-ಡಿಸೆಂಬರ್‌ ತ್ತೈಮಾಸಿಕಗಳಲ್ಲಿ ನಿರುದ್ಯೋಗ ಪ್ರಮಾಣವು ತಲಾ ಶೇ.7.2ರಷ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next