Advertisement

ನಿರುದ್ಯೋಗ ನಿರ್ಧರಿಸಲಿದೆ ರಾಜಕೀಯ

09:34 AM Nov 23, 2019 | Team Udayavani |

ನವದೆಹಲಿ: ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದ್ದು, ಯುವಜನರ ಆರ್ಥಿಕ ಅಭದ್ರತೆಯು ದೇಶದ ರಾಜಕೀಯ ಬದಲಾವಣೆಗೆ ಕಾರಣವಾಗಲಿದೆ ಎಂದು ಆರ್ಥಿಕ ಗುಪ್ತಚರ ದಳದ ಅಧ್ಯಯನವೊಂದು ಕಳವಳ ವ್ಯಕ್ತಪಡಿಸಿದೆ.

Advertisement

ನಿರುದ್ಯೋಗ ಹಾಗೂ ಅರೆಕಾಲಿಕ ಉದ್ಯೋಗಗಳು ಮುಂದಿನ ದಿನಗಳಲ್ಲಿ ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ನಿಧಾನಗತಿಯ ಆರ್ಥಿಕ ಅಭಿವೃದ್ಧಿಯು, ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ.

ಕೇಂದ್ರ ಸರ್ಕಾರದ ಅಂಕಿ ಅಂಶವನ್ನು ಉಲ್ಲೇಖೀಸಿರುವ ಈ ಅಧ್ಯಯನವು, ಕಳೆದ ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣ ಕಳೆದ ಮೂರು ವರ್ಷಕ್ಕಿಂತ ಹೆಚ್ಚು ಏರಿಕೆಯಾಗಿದೆ. 2019ರ ಸೆಪ್ಟೆಂಬರ್‌ನಲ್ಲಿ ಶೇ.7.2ರಷ್ಟಿದ್ದ ನಿರುದ್ಯೋಗ ಪ್ರಮಾಣವು ಅಕ್ಟೋಬರ್‌ಗೆ ಶೇ.8.5ಕ್ಕೆ ಏರಿಕೆ ಕಂಡಿದೆ ಎಂದು ತಿಳಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸದೃಢ ನಾಯಕತ್ವ, ಸಾಮಾಜಿಕ ಹಾಗೂ ಭದ್ರತಾ ವಿಷಯಗಳು ಪ್ರಧಾನವಾಗಿದ್ದವು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಯಶಸ್ವಿಯಾಗಿ ಎರಡನೇ ಬಾರಿ ಅಧಿಕಾರ ಹಿಡಿದಿತ್ತು. ಆದರೆ, ಮುಂದಿನ ಭಾರತದ ರಾಜಕೀಯದಲ್ಲಿ ನಿರುದ್ಯೋಗ ವಿಷಯವೇ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next