Advertisement
ಈ ಜಾಲದಲ್ಲಿ ಹಲವಾರು ನಿರುದ್ಯೋಗಿ ಇಂಜಿನಿಯರ್‌ಗಳು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೆಲಸ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
Related Articles
Advertisement
ಎಟಿಎಂ ಸ್ಕಿಮ್ಮಿಂಗ್ ನಡೆಸಿರುವ ಖದೀಮರು ಮೊದಲಾಗಿ ಸೆಕ್ಯುರಿಟಿ ಗಾರ್ಡ್ ಗಳು ಇಲ್ಲದ ಎಟಿಎಂ ಗಳನ್ನೇ ಆಯ್ದುಕೊಂಡು ಬ್ಯಾಂಕಿಂಗ್ ಅವಧಿಗೆ ಮುನ್ನ ಅಲ್ಲಿನ ಎಟಿಎಂ ಮಶೀನ್‌ನಲ್ಲಿ ಸ್ಕಿಮ್ಮಿಂಗ್ ಉಪಕರಣ ಇತ್ಯಾದಿಗಳನ್ನು ಸೆಟ್ ಮಾಡುತ್ತಿದ್ದರು. ರಾತ್ರಿಯ ಬಳಿಕ ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಅವಧಿಯಲ್ಲಿ ಯಾರೆಲ್ಲ ಎಟಿಎಂ ಗೆ ಬಂದು ಹಣ ಡ್ರಾ ಮಾಡಿರುವರೋ ಅವರ ಕಾರ್ಡ್ ಮಾಹಿತಿ, ಪಾಸ್ ವಾರ್ಡ್ ಎಲ್ಲವನ್ನೂ ಸ್ಕಿಮ್ಮಿಂಗ್ ಮೂಲಕ ಕದಿಯಲಾಗುತ್ತಿತ್ತು.
ಬಂಧಿತ ಮೂವರು ರೋಮನ್ನರು ಕೋಲ್ಕತದ ನಿರುದ್ಯೋಗಿ ಇಂಜಿನಿಯರ್‌ಗಳಿಗೆ ಭಾರೀ ಹಣದಾಸೆ ತೋರಿಸಿ ಸ್ಕಿಮ್ಮಿಂಗ್, ಕ್ಲೋನಿಂಗ್ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಈ ಕೆಲಸಗಳು ಈ ವರ್ಷ ಎಪ್ರಿಲ್‌ನಲ್ಲಿ ನಡೆದಿದ್ದವು. ಜುಲೈಯಲ್ಲಿ ರೋಮನ್ ಖದೀಮರು ದಿಲ್ಲಿಯ ಎಟಿಎಂ ಗಳಲ್ಲಿ ಕ್ಲೋನ್ ಮಾಡಲ್ಪಟ್ಟ ಎಟಿಎಂ ಕಾರ್ಡುಗಳನ್ನು ಬಳಸಿಕೊಂಡು 20 ಲಕ್ಷ ರೂ.ಗಳನ್ನು ಲೂಟಿ ಮಾಡಿದ್ದರು.
ಕೋಲ್ಕತದ ವಿವಿಧ ಬ್ಯಾಂಕುಗಳ ಸುಮಾರು 72 ಗ್ರಾಹಕರು ಒಂದೇ ದಿನ ತಮ್ಮ ಖಾತೆಯಿಂದ ಹಣ ಲಪಟಾವಣೆಗೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಮೊದಲಾಗಿ ದಿಲ್ಲಿಯಲ್ಲಿ ಮೂವರು ರೋಮನ್ನರು ಬಂಧಿಸಿದರು. ಅನಂತರ ಅವರಿಂದ ಈ ಜಾಲದ ಮಾಹಿತಿಗಳನ್ನು ಕಕ್ಕಿಸಿದ ಬಳಿಕ ಇಂದು ಮೂವರು ಇಂಜಿನಿಯರ್‌ಗಳನ್ನು ಪೊಲೀಸರು ಸೆರೆಹಿಡಿಯಲಾಯಿತು.