Advertisement

Kulageri Cross: ದಾಖಲೆ ಇಲ್ಲದ 17,28,000 ರೂ. ಹಣ ವಶಕ್ಕೆ

08:53 PM Apr 02, 2024 | Team Udayavani |

ಕುಳಗೇರಿ ಕ್ರಾಸ್: ಜಿ.ಬಾಗಲಕೋಟೆ ಲೋಕಸಭಾ ಚುನಾವಣೆ ಹಿನ್ನೆಲೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಎರಡು ಚೆಕ್‌ಪೋಸ್ಟ್ ನಲ್ಲಿ ದಾಖಲೆ ಇಲ್ಲದ ಒಟ್ಟು 17,28,000 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾದಾಮಿ ಪಿಎಸ್‌ಐ ವಿಠಲ್ ನಾಯಕ್ ತಿಳಿಸಿದ್ದಾರೆ.

Advertisement

ಈ ಕುರಿತು ಮಾಹಿತಿ ನೀಡಿರುವ ಅವರು ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸಿದ ವೇಳೆ ಸರಿಯಾದ ದಾಖಲೆ ಇಲ್ಲದ 17,28,000 ರೂ. ಹಣ ಪತ್ತೆಯಾಗಿದೆ.  ಸರಿಯಾದ ದಾಖಲೆ ನೀಡದ ಕಾರಣ ಹಣವನ್ನು ಜಪ್ತಿ ಮಾಡಿ ಚುನಾವಣಾ ಸೀಜರ್ ಕಮಿಟಿಯವರಿಗೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಫ್.ಎಸ್.ಟಿ. ಅನೀಲಕುಮಾರ ಸಾತಲಗಾಂವ, ಎಸ್.ಎಸ್.ಟಿ. ಐ ಬಿ ಬಸರಿಕಟ್ಟಿ, ಎ ಕೆ ಉಗಲವಾಟ, ಎಎಸ್‌ಐ ಎಚ್ ಎ ಹವಾಲ್ದಾರ, ಆರ್ ಎಸ್ ಬಿರಾದಾರ, ಜಿ ಎಸ್ ಹೊಸಮನಿ, ಮಹಾಂತೇಶ ಹರದಳ್ಳಿ, ಬಿ ಎ ಮುಲ್ಲಾ, ರಮೇಶ ಉಳ್ಳಾಗಡ್ಡಿ ಸೇರಿದಂತೆ ಚುನಾವಣಾ ಹಾಗೂ ಕಂದಾಯ, ಪೊಲೀಸ್ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next