Advertisement
ಕರಾವಳಿಯ ಬಹುಬೇಡಿಕೆಯ ಬೆಳೆಯಾಗಿರುವ ಕಲ್ಪವೃಕ್ಷವನ್ನು ಬಂಡವಾಳವನ್ನಾಗಿಸಿ ಅದರ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಲು ಜಿಲ್ಲಾ ಭಾರತೀಯ ಕಿಸಾನ್ ಸಂಘ ಮುಂದಾಗಿದೆ. ಈ ಮೂಲಕ ಹಲವರಿಗೆ ಉದ್ಯೋಗಾವಕಾಶವೂ ಲಭಿಸಲಿದೆ. ತೆಂಗಿನೆಣ್ಣೆ, ಕಲ್ಪರಸದ ಸಕ್ಕರೆ, ಬೆಲ್ಲ, ಚಾಕೊಲೆಟ್, ಐಸ್‌ಕ್ರೀಂ, ಜೇನುತುಪ್ಪ, ವಿನೆಗರ್ ಸಹಿತ ಹಲವಾರು ಬಗೆಯ ಇತರ ಉತ್ಪನ್ನಗಳೂ ಈ ಮಳಿಗೆಗಳಲ್ಲಿ ಸ್ಥಾನ ಪಡೆಯಲಿವೆ.
ತೆಂಗಿನ ಹೊಂಬಾಳೆ (ಕೊಂಬು)ಯಿಂದ ಶೋಧಿಸಿದ “ಕಲ್ಪರಸ’ ಎಂಬ ಆರೋಗ್ಯ ವರ್ಧಕ ಪಾನೀಯವನ್ನು ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಂಬಾರ ಉತ್ಪಾದಕರ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದು ಎಳನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕ ಎಂದು ಅಧ್ಯಯನದಿಂದ ದೃಢಪಟ್ಟಿದೆ. ಸಂಸ್ಥೆಯು ಭಾರತೀಯ ಕಿಸಾನ್ ಸಂಘ ಹಾಗೂ ಕಾಸರಗೋಡಿನ ಸಿಪಿಸಿಆರ್‌ಐ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ರೂಪಿಸಿದೆ. ರೈತರಿಗೆ
ಅನುಕೂಲ
ಕೆಎಂಎಫ್ ಹಾಲನ್ನು ಸಂಗ್ರಹಿಸುವ ರೀತಿಯಲ್ಲೇ ರೈತರಿಂದ ಕಲ್ಪರಸ ಸಂಗ್ರಹಿಸಲಾಗುವುದು. ಭಾಕಿಸಂ ಈಗಾಗಲೇ 54 ತೆಂಗು ಸೊಸೈಟಿ ಹಾಗೂ 3 ತೆಂಗು ಫೆಡರೇಶನ್ ರಚಿಸಿದ್ದು, 4,820 ರೈತ ಸದಸ್ಯರಿ¨ªಾರೆ. ಅವರಿಗೆ ಹೆಚ್ಚಿನ ಆದಾಯ ತಂದುಕೊಡುವ ಸಲುವಾಗಿ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಲಾಗಿದೆ. ಆಯಾ ಭಾಗದ ಸೊಸೈಟಿಯಲ್ಲಿ ಸಂಗ್ರಹವಾಗುವ ಕಲ್ಪರಸವನ್ನು ಘಟಕಕ್ಕೆ ಕೊಂಡೊಯ್ದು, ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.
Related Articles
ಕುಂದಾಪುರದ ಜಪ್ತಿಯಲ್ಲಿ ಕಲ್ಪರಸ ತಯಾರಿ ಘಟಕ ಸ್ಥಾಪನೆಗೆ ಅಬಕಾರಿ ಇಲಾಖೆಯ ತಾತ್ಕಾಲಿಕ ಪರವಾನಿಗೆ ದೊರಕಿದೆ. ಭದ್ರಾವತಿಯಲ್ಲಿ ಈಗಾಗಲೇ ಮಲೆನಾಡ್ ನಟ್ಸ್ ಕಂಪೆನಿ ಕಲ್ಪರಸ ತಯಾರಿಸುತ್ತಿದ್ದು ಬೆಂಗಳೂರು, ಶಿವಮೊಗ್ಗ ಮೊದಲಾದ ನಗರಗಳಲ್ಲಿ ಮಾರಾಟ ಮಾಡುತ್ತಿದೆ.
8 ಮರಗಳಿಂದ 2.40
ಲಕ್ಷ ರೂ. ಆದಾಯ
8 ತೆಂಗಿನ ಮರಗಳಿಂದ ಕಲ್ಪರಸ ತೆಗೆಯುವ ರೈತರು ವಾರ್ಷಿಕ 2.40 ಲಕ್ಷ ರೂ.ಗಳಿಗೂ ಅಧಿಕ ಆದಾಯ ಗಳಿಸಬಹುದು. ಕಲ್ಪರಸ ತೆಗೆದ ಬಳಿಕವೂ ಆ ಮರಗಳು ಶೇ. 50ರಷ್ಟು ಕಾಯಿಗಳನ್ನು ಬಿಡುತ್ತವೆ. ಕಲ್ಪರಸದಲ್ಲಿ ವಿಟಮಿನ್ ಎ, ಬಿ, ಸಿ ಇದ್ದು, ಗ್ಲೆàಸಮಿಕ್ ಇಂಡೆಕ್ಸ್ ಕೂಡ ಶೇ. 35ಕ್ಕಿಂತ ಕಡಿಮೆಯಿದೆ. ಕಬ್ಬಿಣದ ಅಂಶ ಸಹಿತ ಕ್ಯಾಲ್ಸಿಯಂ ಕೂಡ ಅಧಿಕವಾಗಿದೆ. 200 ಎಂಎಲ್‌ಗೆ 30ರಿಂದ 35 ರೂ.ಗಳಲ್ಲಿ ಮಾರಾಟ ಮಾಡುವ ಯೋಜನೆ ಹೊಂದಲಾಗಿದೆ. ಕಿಡ್ನಿ, ಲಿವರ್, ಶ್ವಾಸಕೋಶದ ಕಾಯಿಲೆ, ಮಧುಮೇಹ ಕಾಯಿಲೆ ಹೊಂದಿರುವವರು ಕೂಡ ಸೇವಿಸಬಹುದಾಗಿದೆ.
Advertisement
ಕಲ್ಪರಸವನ್ನು ಆರೋಗ್ಯ ವರ್ಧಕ ಪಾನೀಯವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಮರದಿಂದ ಸಂಗ್ರಹಿಸಿದ ರಸವನ್ನು ಪ್ಯಾಶ್ಚಿರೀಕರಣ ವಿಧಾನ ಮೂಲಕ ಸಂಸ್ಕರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಎರಡು ಗಂಟೆಗಳ ಕಾಲ ಫ್ರೀಜರ್‌ನಿಂದ ಹೊರಗಡೆ ಇಟ್ಟರೂ ಕಲ್ಪರಸ ಹುಳಿ ಬರುವುದಿಲ್ಲ.– ಸತ್ಯನಾರಾಯಣ ಉಡುಪ ಜಪ್ತಿ
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ