ಮುಳಬಾಗಿಲು: ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಸೀತಾಮಾತೆ ಬೆಟ್ಟದ ತಪ್ಪಲಿನಲ್ಲಿ ಅಂತರಗಂಗೆಯಿ ದ್ದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೌಕರ್ಯಗಳ ಸಿಗದೆ ಪುಣ್ಯ ಕ್ಷೇತ್ರವು ಅಭಿವೃದ್ಧಿ ಕಾಣದೇ, ಜನ ಮಾನಸದಿಂದ ದೂರ ಉಳಿದಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಮುಳಬಾಗಿಲು ತಾಲೂಕಿನಲ್ಲಿ ವಿಜಯನಗರ ಅರಸರ ಕಾಲದಿಂದಲೂ ಹೆಸರುವಾಸಿಯಾಗಿದ್ದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ, ಕುರುಡುಮಲೆ ವಿನಾಯಕ ದೇವಾಲಯ ಸೇರಿದಂತೆ ನೂರಾರು ಪುರಾಣ ಪ್ರಸಿದ್ಧ ಕ್ಷೇತ್ರಗಳ ಸಾಲಿಗೆ ಆವಣಿ ಕ್ಷೇತ್ರವೂ ಸೇರಿದೆ. ಇಲ್ಲಿರುವ ರಾಷ್ಟ್ರೀಯ ಸ್ಮಾರಕಗಳ ಸಾಲಿಗೆ ಸೇರಿದ ಶ್ರೀರಾಮಲಿಂಗೇಶ್ವರ ದೇವಾಲಯದ ಅಂಚಿನ ಲ್ಲಿಯೇ ಬೆಟ್ಟವಿದ್ದು ರಾಮ, ಲಕ್ಷ್ಮಣ, ಸೀತಾಮಾತೆ ವಾಸವಾಗಿದ್ದ ಸ್ಥಳ. ಅಶ್ವಮೇಧಯಾಗದ ಕುದುರೆ ಯನ್ನು ಕಟ್ಟಿಹಾಕಿದ ಲವಕುಶರ ಜನ್ಮಸ್ಥಳ ಹಾಗೂ ವಾಸದ ಮನೆ, ಸೀತಾಮಾತೆಯು ಜಿಗುಪ್ಸೆಗೊಂಡು ಭೂಗರ್ಭ ಸೇರಿದ ಪ್ರದೇಶ, ಬೆಟ್ಟದ ತಪ್ಪಲಿನಲ್ಲಿ ಶ್ರೀರಾಮಲಕ್ಷ್ಮಣರು ವಾಸವಾಗಿದ್ದ ವೇಳೆ ಅಲ್ಲಿ ಸ್ಥಾಪಿಸಲಾಗಿದ್ದ ಪಂಚಲಿಂಗಗಳು, ವಾಲ್ಮೀಕಿ ಮಹರ್ಷಿ ರಾಮಾಯಣ ಬರೆದ ಸ್ಥಳ ಇಲ್ಲಿನನ ಐತಿಹ್ಯಗಳಾಗಿದೆ.
ಅಂತರಗಂಗೆಯಲ್ಲಿ ವರ್ಷವಿಡೀ ನೀರು: ಆವಣಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ದ ಸೀತಾಮಾತೆ ಬೆಟ್ಟದ ತಪ್ಪಲಿನ ದಕ್ಷಿಣ ಭಾಗಕ್ಕಿರುವ ಶಿವಲಿಂಗಗಳ ಕೆಲವೇ ಅಡಿಗಳ ದೂರಲ್ಲಿ ಶ್ರೀಗಂಗಾಧರೇಶ್ವರ ದೇಗುಲವಿದ್ದು, ದೇಗುಲ ಪಕ್ಕದಲ್ಲಿಯೇ ಶ್ರೀನರ ಸಿಂಹಸ್ವಾಮಿಯ ದೇಗುಲವಿದೆ. ಪ್ರತಿವರ್ಷ ಯುಗಾ ದಿಯ ಹಬ್ಬದಂದು ನರಸಿಂಹಸ್ವಾಮಿ ದೇಗುಲದಲ್ಲಿ ನಡೆಯುವ ವಿಶಿಷ್ಟವಾದ ಪೂಜಾ ಕಾರ್ಯಕ್ರಮಗಳು ನೋಡುಗರ ಮೈನವಿರೇಳುವಂತಿರುತ್ತದೆ. ಅದರ ಅಂಚಿನಲ್ಲಿಯೇ ಅತ್ಯಂತ ಮಹತ್ವವಾದ 10×10 ಅಡಿ ಅಗಲದ ವಿಸ್ತೀರ್ಣದಲ್ಲಿ ಅಂತರಗಂಗೆ ಇದೆ. ಕೋಲಾರದ ಅಂತರಗಂಗೆಯಂತೆಯೇ ಇಲ್ಲಿಯೂ ಸಹ ವರ್ಷವಿಡೀ ಬಸವಣ್ಣನ ಹೊಕ್ಕಳಿನಲ್ಲಿ ನೀರು ಬರುತ್ತಿರುತ್ತದೆ. ಈ ನೀರು ಕುಡಿಯಲು ಅತ್ಯುತ್ತಮ ವಾಗಿದ್ದು, ಇದರ ಸುತ್ತಮುತ್ತಲೂ ವಾಸವಾಗಿರುವ 25-30 ದಲಿತ ಕುಟುಂಬಗಳಿಗೆ ಅಂತರಗಂಗೆಯ ನೀರೇ ಜೀವನಾಧಾರ ಎನ್ನಲಾಗಿದೆ.
ಅಭಿವೃದ್ಧಿಗೆ ಮುಂದಾಗದ ಇಲಾಖೆಗಳು: ಪ್ರತಿ ವರ್ಷ ಶಿವರಾತ್ರಿ ಮರು ದಿನ ನಡೆಯುವ ಆವಣಿ ಶ್ರೀಕಾಮಾಕ್ಷಿದೇವಿ ಸಮೇತ ಪ್ರಸನ್ನರಾಮಲಿಂಗೇಶ್ವರ ಬ್ರಹ್ಮರಥೋತ್ಸವ ಲಕ್ಷಾಂತರ ಜನರು ಭೇಟಿ ನೀಡು ತ್ತಾರೆ. ಸರ್ಕಾರಕ್ಕೆ ಸಾಕಷ್ಟು ಆದಾಯ ಜಮಾ ಆಗುತ್ತಿದ್ದರೂ, ಗಿಡ ಗಂಟೆಗಳ ನಡುವೆ ಅಂತರಗಂಗೆ ಮಾತ್ರ ಕುಂಟೆಯಂತಾಗಿದೆ. ಅಲ್ಲಿಗೆ ಹೋಗಲು ಮಟ್ಟಿಲುಗಳೇ ಇಲ್ಲದಾಗಿದ್ದು, ಅಂತರಗಂಗೆಯನ್ನು ಯಾವೊಂದು ಇ ಲಾಖೆಗಳು ಅಭಿವೃದ್ಧಿ ಮಾಡಲು ಮುಂದಾಗಿಲ್ಲ. ತಾ ಲೂಕಿನ ಅತ್ಯಂತ ಹೆಮ್ಮೆಯ ಸ್ಥಳವಾದ ಅಂತರ ಗಂಗೆ ಯು ಅಭಿವೃದ್ಧಿಯಿಂದ ದೂರವಾಗಿಯೇ ಉಳಿದಿದೆ.
ಅಂತರಗಂಗೆ ಪುನರ್ ನಿರ್ಮಾಣಕ್ಕೆ ಒತ್ತಾಯ: ಈ ಅಂತರಗಂಗೆ ಪುಣ್ಯ ಕ್ಷೇತ್ರವು ಜನಪ್ರತಿನಿಧಿ ಗಳ ನಿರ್ಲಕ್ಷ್ಯದಿಂದ ಮೂಲಭೂತ ಸೌಕರ್ಯ ಗಳ ಕೊರತೆಯಿಂದ ಅಭಿವೃದ್ಧಿಯಾಗದೇ ಜನ ಮಾನಸದಿಂದ ದೂರ ಉಳಿದಿದೆ. ಅಂತರಗಂಗೆ ಯನ್ನು ಪುನರ್ ನಿರ್ಮಾಣ ಮಾಡಬೇಕೆಂದು ಮುಖಂಡರಾದ ಆವಣಿ ಕಾಶಿ, ಪ್ರಾಶ್ಚ್ಯ ವಸ್ತು ಇಲಾಖೆ ಮತ್ತು ಮುಜರಾಯಿ ಅಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ.
ಆವಣಿ ಕ್ಷೇತ್ರದಲ್ಲಿರುವ ಅತ್ಯಂತ ಮಹತ್ವವಾದ ಅಂತರಗಂಗೆಯ ಅಭಿವೃದ್ಧಿಯ ಕುರಿತಂತೆ, ಬೆಟ್ಟದ ಪ್ರದೇಶವು ಪ್ರಾಶ್ಚ್ಯ ವಸ್ತು ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇಲಾಖೆಗೆ ಪತ್ರ ಬರೆಯಲಾಗುವುದು.
–ವೈ.ರವಿ, ತಹಶೀಲ್ದಾರ್
– ಎಂ.ನಾಗರಾಜಯ್ಯ