Advertisement

ಭೂಗತ ಪಾತಕಿ ರವಿ ಪೂಜಾರಿ ಮತ್ತೆ ಬಂಧನ; ಶೀಘ್ರ ಭಾರತಕ್ಕೆ?

10:24 AM Feb 24, 2020 | Sriram |

ಮಂಗಳೂರು: ಭೂಗತ ಪಾತಕಿ ಕರಾವಳಿ ಮೂಲದ ರವಿ ಪೂಜಾರಿಯನ್ನು ಆಫ್ರಿಕನ್‌ ದೇಶವೊಂದರಲ್ಲಿ ಮತ್ತೆ ಬಂಧಿಸು ವಲ್ಲಿ ದೇಶದ ರಾ (ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌)ದ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಆತನನ್ನು ಭಾರತಕ್ಕೆ ಕರೆತರಲು ಪ್ರಯತ್ನಗಳು ಸಾಗುತ್ತಿವೆ.

Advertisement

ಕಳೆದ ವರ್ಷ ಸೆನೆಗಲ್‌ನಲ್ಲಿ ಬಂಧನಕ್ಕೊಳಗಾಗಿದ್ದ ರವಿ ಪೂಜಾರಿ ಕೆಲವು ತಿಂಗಳ ಬಳಿಕ ಜಾಮೀನು ಮೇಲೆ ಬಿಡುಗಡೆಗೊಂಡು ಭೂಗತನಾಗಿದ್ದ. ಆದರೆ ರಾ ಪೊಲೀಸರು ಸೆನೆಗಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ನೆರವಿನೊಂದಿಗೆ ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ನಕಲಿ ಪಾಸ್‌ಪೋರ್ಟ್‌ ಸಹಿತ ಆತನ ಕುರಿತಾದ ಮಹತ್ವದ ಮಾಹಿತಿ ಭಾರತೀಯ ಪೊಲೀಸರಿಗೆ ಲಭಿಸಿತ್ತು.

ಈ ಮಾಹಿತಿಯನ್ನು ಆಧರಿಸಿ ಪೊಲೀಸರು ಕೆಲವು ತಿಂಗಳುಗಳಿಂದ ರವಿ ಪೂಜಾರಿ ಬಂಧನಕ್ಕೆ ಪ್ರಯತ್ನಿಸುತ್ತಿದ್ದರು. ಕೊನೆಗೂ ಆಫ್ರಿಕನ್‌ ದೇಶವೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪೊಲೀಸರು ಮತ್ತು “ರಾ’ದ ಉನ್ನತ ಅಧಿಕಾರಿಗಳು ಅಲ್ಲಿಗೆ ತೆರಳಿದ್ದು, ಒಂದೆರಡು ದಿನಗಳಲ್ಲಿ ರವಿ ಪೂಜಾರಿಯನ್ನು ದಿಲ್ಲಿ ಅಥವಾ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

20 ವರ್ಷಗಳ ಹಿಂದೆ ಮುಂಬಯಿಯಿಂದ ಭೂಗತನಾಗಿದ್ದ ರವಿ ಪೂಜಾರಿ ಮಲೇಶ್ಯಾ ಸಹಿತ ಹಲವು ದೇಶಗಳಲ್ಲಿ ತಲೆಮರೆಸಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next