Advertisement

ಭೂಗತ ಪಾತಕಿ ರವಿ ಪೂಜಾರಿಗೆ ಅರೋಗ್ಯ ಸಮಸ್ಯೆ : ಆಸ್ಪತ್ರೆಗೆ ದಾಖಲು

05:53 PM Dec 29, 2020 | sudhir |

ಬೆಂಗಳೂರು: ಪಾತಕಲೋಕದ ಪಾತಕಿ ರವಿಪೂಜಾರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾನೆ.

Advertisement

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ದಶಕಗಳ ಕಾಲ ತಲೆಮರೆಸಿಕೊಂಡಿದ್ದ ರವಿಪೂಜಾರಿಯನ್ನು ಕಳೆದ ಫೆಬ್ರವರಿಯಲ್ಲಿ ನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿಗಟ್ಟಿದ್ದರು. ಇತ್ತೀಚೆಗೆ ರವಿಪೂಜಾರಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜೈಲಾಸ್ಪತ್ರೆಗೆ ದಾಖಲಾಗಿದ್ದರು.

ತಪಾಸಣೆ ನಡೆಸಿದ ವೈದ್ಯರು ರವಿಪೂಜಾರಿಗೆ ಹಾರ್ನಿಯಾ ಸಮಸ್ಯೆಯಿದೆ. ಹೆಚ್ಚಿನ ಚಿಕಿತ್ಸೆವಿದೆ ಎಂದು ಜೈಲಾಧಿಕಾರಿಗಳಿಗೆ ವೈದ್ಯರು ವರದಿ ನೀಡಿದ್ದರು. ವೈದ್ಯರ ಸೂಚನೆ ಮೇರೆಗೆ ಇಂದು ಮಧ್ಯಾಹ್ನ ಪೊಲೀಸ್‌ ಬಂದೋಬಸ್ತಿನೊಂದಿಗೆ ವಿಕ್ಟೋರಿಯಾ ಆಸ್ಪತ್ರೆ ದಾಖಲಾಗಿದ್ದಾನೆ.

ಇದನ್ನೂ ಓದಿ:2021ರ ಡಿಸೆಂಬರ್ ನೊಳಗೆ ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ಗುರಿ: ದುಬೈ

Advertisement

Udayavani is now on Telegram. Click here to join our channel and stay updated with the latest news.

Next