Advertisement
ಭೂಮಿಯ ಒಳಭಾಗದಲ್ಲಿ ನಿರ್ಮಾಣ ಗೊಂಡಿ ರುವ ಏಕೈಕ ಐಷಾರಾಮಿ ರೆಸಾರ್ಟ್ ಎನ್ನುವ ಹೆಗ್ಗಳಿಕೆ ಇದರದ್ದಾಗಿದೆ. 300 ಅಡಿ ಯಷ್ಟು ಆಳದ ಕ್ವಾರಿ ಪ್ರದೇಶವನ್ನೇ ಬಳಸಿ ಕೊಂಡು ಕಟ್ಟಡದ ವಿನ್ಯಾಸ ಮಾಡ ಲಾಗಿದೆ. ಬುರ್ಜ್ ಅಲ್ ಅರಬ್ ಕಟ್ಟಡದ ವಿನ್ಯಾಸಕ ಮಾರ್ಟಿನ್ ಜಾಕ್‌ಮನ್ ವಿನ್ಯಾಸ ಮಾಡಿದ್ದಾರೆ.ಒಟ್ಟು 2 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ.
ಶಾಂಘೈನಿಂದ ಹೆಚ್ಚುಕಡಿಮೆ 32 ಕಿಲೋ ಮೀಟರ್ ದೂರದ ಸಾಂಗ್‌ಜಿಯಾಂಗ್ ಜಿಲ್ಲಿಯಲ್ಲಿರುವ ಈ ರೆಸಾರ್ಟ್ 18 ಮಹಡಿಗಳಿಂದ ಕೂಡಿದೆ. ಭೂ ಮೇಲ್ಪದರದಿಂದ ಕೆಳಕ್ಕೆ 16 ಮಹಡಿಗಳಿದ್ದು, ಇವುಗಳಲ್ಲಿ 2 ಮಹಡಿಗಳು ಅಕ್ವೇರಿಯಂನಿಂದ ಕೂಡಿದೆ. 300ಕ್ಕೂ ಹೆಚ್ಚು ಐಷಾರಾಮಿ ಕೊಠಡಿಗಳಿಂದ ಕೂಡಿದೆ. ಹೌಸ್‌ಫುಲ್: ಪ್ರವಾಸಿಗರ ಸೇವೆಗೆ ಮುಕ್ತವಾಗಿ ಸಿದ ಕೆಲವು ದಿನಗಳಲ್ಲೇ ನವೆಂಬರ್ ತಿಂಗಳಿನ ಎಲ್ಲಾ ದಿನಗಳಲ್ಲೂ ಕಾಯ್ದಿರಿಸಲಾಗಿದೆ. ಡಿಸೆಂಬರ್‌ನಲ್ಲಿ ಲಭ್ಯವಿದೆ. ಒಂದು ಹಾಸಿಗೆಯಿಂದ ಕೂಡಿದ ಕೊಠಡಿಯ ಒಂದು ದಿನದ ಬಾಡಿಗೆ 39,000 ರೂ. ಆಗಿದೆ.