Advertisement
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ ವಿಚಾರವಾಗಿ ಸಮ್ಮೇಳನವೊಂದನ್ನು ಆಯೋಜಿಸಲಾಗಿದೆ. ಅದರಲ್ಲಿ ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ. ಇದೇ ವೇಳೆ ದೇಶದ ವಿವಿಧ ನಗರಗಳಲ್ಲಿ ಮಾದಕವಸ್ತುಗಳ ನಾಶ ನಡೆಯಲಿದ್ದು, ಅದೆಲ್ಲವನ್ನೂ ವರ್ಚುವಲ್ ಮೂಲಕವೇ ಶಾ ವೀಕ್ಷಿಸಲಿದ್ದಾರೆ.ನಾಶಪಡಿಸಲಿರುವ ಡ್ರಗ್ಸ್ ಪೈಕಿ 6,590 ಕೆಜಿ ಮಾದಕವಸ್ತುವನ್ನು ಹೈದರಾಬಾದ್ ಎನ್‌ಸಿಬಿ ವಶಪಡಿಸಿಕೊಂಡಿದ್ದರೆ, 822 ಕೆಜಿಯನ್ನು ಇಂದೋರ್ ಎನ್‌ಸಿಬಿ ಘಟಕ, 356 ಕೆಜಿಯನ್ನು ಜಮ್ಮು ಘಟಕ ಮುಟ್ಟುಗೋಲು ಹಾಕಿದೆ. ಜತೆಗೆ ಇನ್ನೂ ಹಲವು ರಾಜ್ಯ ಘಟಕಗಳು ವಶಪಡಿಸಿಕೊಂಡಿರುವ ಮಾದಕವಸ್ತುವನ್ನೂ ನಾಶಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.