Advertisement

ಅಂಡರ್‌-19 ವಿಶ್ವಕಪ್‌: ನ್ಯೂಜಿಲ್ಯಾಂಡಿಗೆ ಸೋಲು; ಭಾರತ ಅಜೇಯ

01:37 AM Jan 25, 2020 | Team Udayavani |

ಬ್ಲೋಮ್‌ಫಾಂಟೈನ್‌: ಮಳೆ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು 44 ರನ್ನುಗಳಿಂದ ಬಗ್ಗುಬಡಿದ ಭಾರತ, ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಕೂಟದ ಲೀಗ್‌ ಹಂತವನ್ನು ಅಜೇಯವಾಗಿ ಮುಗಿಸಿದೆ. ಕ್ವಾರ್ಟರ್‌ ಫೈನಲ್‌ ಸ್ಥಾನಕ್ಕೆ ಅಗ್ರಸ್ಥಾನದ ಗೌರವ ಪಡೆದಿದೆ.

Advertisement

ಶುಕ್ರವಾರದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 23 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 115 ರನ್‌ ಗಳಿಸಿದರೆ, ನ್ಯೂಜಿಲ್ಯಾಂಡ್‌ ಗೆಲುವಿಗೆ 192 ರನ್ನುಗಳ ಕಠಿನ ಗುರಿ ನಿಗದಿಯಾಯಿತು. ಆರಂಭದಲ್ಲಿ ಸಿಡಿದರೂ ಅಂತಿಮವಾಗಿ 21 ಓವರ್‌ಗಳಲ್ಲಿ 147ಕ್ಕೆ ಆಲೌಟ್‌ ಆಯಿತು. ರವಿ ಬಿಶ್ನೋಯಿ (30ಕ್ಕೆ 4), ಅಥರ್ವ ಅಂಕೋಲೆಕರ್‌ (28ಕ್ಕೆ 3) ಬೌಲಿಂಗ್‌ನಲ್ಲಿ ಮಿಂಚಿದರು.

ಆದರೆ ಪೊಚೆಫ್ಸೂóಮ್‌ನಲ್ಲಿ ನಡೆಯಬೇಕಿದ್ದ ದಿನದ ಉಳಿದೆರಡು ಪಂದ್ಯಗಳು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡವು. ಅಫ್ಘಾನಿಸ್ಥಾನ-ಕೆನಡಾ
(ಡಿ ವಿಭಾಗ), ಪಾಕಿಸ್ಥಾನ-ಬಾಂಗ್ಲಾದೇಶ (ಸಿ ವಿಭಾಗ) ಅಂಕ ಹಂಚಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದವು.

23 ಓವರ್‌ಗಳ ಪಂದ್ಯ
ಭಾರೀ ಮಳೆಯಿಂದಾಗಿ ಈ ಪಂದ್ಯವನ್ನು ಮೊದಲು 27 ಓವರ್‌ಗಳಿಗೆ ಇಳಿಸಲಾಯಿತು. ಬಳಿಕ 23 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಆಗ ಭಾರತದ ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಮತ್ತು ದಿವ್ಯಾಂಶ್‌ ಸಕ್ಸೇನಾ ಅಜೇಯರಾಗಿ ಉಳಿದಿದ್ದರು. ಭಾರತ ವಿಕೆಟ್‌ ನಷ್ಟವಿಲ್ಲದೆ 115 ರನ್‌ ಪೇರಿಸಿತ್ತು.

ಭಾರತ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಇದ್ದುದರಿಂದ ನ್ಯೂಜಿಲ್ಯಾಂಡಿನ ಗುರಿಯಲ್ಲಿ ಭಾರೀ ಹೆಚ್ಚಳ ಕಂಡುಬಂತು. ಅದು “ಮಳೆ ನಿಯಮ’ದಂತೆ 23 ಓವರ್‌ಗಳಲ್ಲಿ 192 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು.

Advertisement

ಭಾರತಕ್ಕೆ ಜೈಸ್ವಾಲ್‌-ಸಕ್ಸೇನಾ ಅಮೋಘ ಆರಂಭ ಒದಗಿಸಿದರು. ಕಿವೀಸ್‌ನ 6 ಮಂದಿ ದಾಳಿಗಿಳಿದರೂ ಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಜೈಸ್ವಾಲ್‌ 77 ಎಸೆತಗಳಿಂದ 57 ರನ್‌ ಬಾರಿಸಿದರೆ (4 ಬೌಂಡರಿ, 2 ಸಿಕ್ಸರ್‌), ಸಕ್ಸೇನಾ 62 ಎಸೆತ ಎದುರಿಸಿ 52 ರನ್‌ ಹೊಡೆದರು (6 ಬೌಂಡರಿ).

ಸಂಕ್ಷಿಪ್ತ ಸ್ಕೋರ್‌: ಭಾರತ-23 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 115 (ಜೈಸ್ವಾಲ್‌ ಔಟಾಗದೆ 57, ಸಕ್ಸೇನಾ ಔಟಾಗದೆ 52). ನ್ಯೂಜಿಲ್ಯಾಂಡ್‌-21 ಓವರ್‌ಗಳಲ್ಲಿ 147 (ಮಾರೂÂ 42, ಲೆಲ್‌ಮಾÂನ್‌ 31, ಬಿಶ್ನೋಯಿ 30ಕ್ಕೆ 4, ಅಂಕೋಲೆಕರ್‌ 28ಕ್ಕೆ 3). ಪಂದ್ಯಶ್ರೇಷ್ಠ: ರವಿ ಬಿಶ್ನೋಯಿ.

Advertisement

Udayavani is now on Telegram. Click here to join our channel and stay updated with the latest news.

Next