Advertisement

ಅಂಡರ್‌-19 ವಿಶ್ವಕಪ್‌: ಭಾರತ-ಪಾಕಿಸ್ಥಾನ ಸೆಮಿ ಸೆಣಸಾಟ

09:41 AM Feb 01, 2020 | Team Udayavani |

ಬೆನೋನಿ: ಭಾರತ ಮತ್ತು ಪಾಕಿಸ್ಥಾನ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಪರಸ್ಪರ ಎದುರಾಗಲಿವೆ. ಈ ಪಂದ್ಯ ಫೆ. 4ರಂದು ಪೊಚೆಫ್ಸೂóಮ್‌ನಲ್ಲಿ ನಡೆಯಲಿದೆ.

Advertisement

ಶುಕ್ರವಾರ ನಡೆದ ಅಂತಿಮ ಕ್ವಾರ್ಟರ್‌ ಫೈನಲ್‌ನಲ್ಲಿ ಪಾಕಿಸ್ಥಾನ 6 ವಿಕೆಟ್‌ಗಳಿಂದ ಅಫ್ಘಾನಿಸ್ಥಾನವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನ್‌ 49.1 ಓವರ್‌ಗಳಲ್ಲಿ 189ಕ್ಕೆ ಆಲೌಟ್‌ ಆಯಿತು. ಪಾಕಿಸ್ಥಾನ 41.1 ಓವರ್‌ಗಳಲ್ಲಿ 4 ವಿಕೆಟಿಗೆ 190 ರನ್‌ ಬಾರಿಸಿತು.

ಪಾಕ್‌ ಪರ ಮೊದಲ ಪಂದ್ಯವಾಡಿದ ಆರಂಭಕಾರ ಮೊಹಮ್ಮದ್‌ ಹುರೈರ 64 ರನ್‌ ಬಾರಿಸಿದರು. ಬೌಲಿಂಗ್‌ನಲ್ಲಿ ಮೊಹಮ್ಮದ್‌ ಆಮಿರ್‌ ಖಾನ್‌ 3 ವಿಕೆಟ್‌ ಕಿತ್ತು ಮಿಂಚಿದರು. ಅಫ್ಘಾನ್‌ ಸರದಿಯಲ್ಲಿ 40 ರನ್‌ ಮಾಡಿದ ನಾಯಕ ಫ‌ರಾನ್‌ ಝಖೀಲ್‌ ಅವರದೇ ಹೆಚ್ಚಿನ ಗಳಿಕೆ.

ಇನ್ನೊಂದು ಸೆಮಿಫೈನಲ್‌ ಗುರುವಾರ ನ್ಯೂಜಿಲ್ಯಾಂಡ್‌ ಮತ್ತು ಬಾಂಗ್ಲಾದೇಶ ನಡುವೆ ಸಾಗಲಿದೆ. ಇದರೊಂದಿಗೆ ಈ ಕೂಟದ ಸೆಮಿಫೈನಲ್‌ನಲ್ಲಿ ಏಶ್ಯದ 3 ತಂಡಗಳು ಕಾಣಿಸಿಕೊಂಡಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next