Advertisement

ಅಂಡರ್-19 ವಿಶ್ವಪಕ್ : ಭಾರತ ವಿರುದ್ಧ ಲಂಕಾ ಜಯಕ್ಕೆ 298 ರನ್ ಗುರಿ

09:52 AM Jan 20, 2020 | Hari Prasad |

ಬ್ಲೋಮ್ ಫಾಂಟೇನ್: ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಗೊಂಡಿರುವ ಅಂಡರ್-19 ವಿಶ್ವಕಪ್ ಕ್ರೀಡಾಕೂಟದಲ್ಲಿ ಇಂದು ತನ್ನ ಪ್ರಥಮ ಪಂದ್ಯವನ್ನಾಡುತ್ತಿರುವ ಭಾರತೀಯ ತಂಡವು ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿ 04 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿದೆ. ಈ ಮೂಲಕ ಶ್ರೀಲಂಕಾ ಜಯಕ್ಕೆ 287 ರನ್ ಅಗತ್ಯವಿದೆ.

Advertisement

ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ (59) ಮತ್ತು ದಿವ್ಯಾಂಶು ಸಕ್ಷೇನಾ (23) ಉತ್ತಮ ಆರಂಭ ಒದಗಿಸಿದರು. ಬಳಿಕ ವನ್ ಡೌನ್ ಬ್ಯಾಟ್ಸ್ ಮನ್ ತಿಲಕ್ ವರ್ಮಾ (46) ಹಾಗೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಪ್ರಿಯಂ ಗರ್ಗ್ (56), ಧ್ರುವ ಜ್ಯೂರೆಲ್ (ಅಜೇಯ 52) ಹಾಗೂ ಸಿದ್ದೇಶ್ ವೀರ್ (27 ಎಸೆತೆಗಳಲ್ಲಿ ಅಜೇಯ 44) ಅವರ ಸ್ಪೋಟಕ ಆಟದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 04 ವಿಕೆಟ್ ಗಳನ್ನು ಕಳೆದುಕೊಂಡು 297 ರನ್ ಪೇರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next