Advertisement

ಅಂಡರ್‌-19 ಏಕದಿನ ಕ್ರಿಕೆಟ್‌ : ದ.ಆಫ್ರಿಕಾಕ್ಕೆ ಆಘಾತವಿಕ್ಕಿದ ಭಾರತ

11:52 PM Dec 27, 2019 | sudhir |

ಈಸ್ಟ್‌ ಲಂಡನ್‌ (ದಕ್ಷಿಣ ಆಫ್ರಿಕಾ): ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಭಾರತದ ಕಿರಿಯರ ತಂಡ ಭರ್ಜರಿ ತಯಾರಿ ನಡೆಸಿದೆ. ಇಲ್ಲಿನ “ಬಫ‌ಲೊ ಪಾರ್ಕ್‌’ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿದೆ. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 48.3 ಓವರ್‌ಗಳಲ್ಲಿ 187 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟಾಯಿತು. ಗುರಿ ಬೆನ್ನತ್ತಿದ ಭಾರತ 42.3 ಓವರ್‌ಗಳಲ್ಲಿ ಕೇವಲ ಒಂದೇ ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಅಮೋಘ ಆರಂಭ
ಭಾರತದ ಆರಂಭಕಾರರಾದ ದಿವ್ಯಾಂಶ್‌ ಸಕ್ಸೇನಾ (ಅಜೇಯ 86) ಮತ್ತು ತಿಲಕ್‌ ವರ್ಮ (59) 30.5 ಓವರ್‌ಗಳ ಜತೆಯಾಟದಲ್ಲಿ 121 ರನ್‌ ಪೇರಿಸಿ ಗೆಲುವಿನ ಹಾದಿ ಯನ್ನು ಸುಗಮಗೊಳಿಸಿದರು. ಕುಮಾರ ಕುಶಾಗ್ರ 43 ರನ್‌ ಮಾಡಿ ಅಜೇಯರಾಗಿ ಉಳಿದರು.

ಭಾರತ ಸಾಂಕ ದಾಳಿಯ ಮೂಲಕ ಹರಿಣಗಳ ಮೇಲೆರಗಿತು. ರವಿ ಬಿಶ್ನೋಯಿ 3 ವಿಕೆಟ್‌ ಉರುಳಿಸಿದರೆ, ಉಡುಪಿ ಮೂಲದ ಶುಭಾಂಗ್‌ ಹೆಗ್ಡೆ, ಕಾರ್ತಿಕ್‌ ತ್ಯಾಗಿ ಮತ್ತು ಅಥರ್ವ ಅಂಕೋಲೆಕರ್‌ ತಲಾ 2 ವಿಕೆಟ್‌ ಕಿತ್ತರು. ಆತಿಥೇಯರ ಪರ ಲ್ಯೂಕ್‌ ಬ್ಯೂಫೋರ್ಟ್‌ 64 ರನ್‌ ಹೊಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ದ. ಆಫ್ರಿಕಾ- 48.3 ಓವರ್‌ಗಳಲ್ಲಿ 187 (ಬ್ಯೂಫೋರ್ಟ್‌ 64, ಲೀಸ್‌ 27, ಬಿಶ್ನೋಯಿ 36ಕ್ಕೆ 3, ತ್ಯಾಗಿ 28ಕ್ಕೆ 2, ಶುಭಾಂಗ್‌ ಹೆಗ್ಡೆ 32ಕ್ಕೆ 2, ಅಂಕೋಲೆಕರ್‌ 35ಕ್ಕೆ 2). ಭಾರತ-42.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 190 (ಸಕ್ಸೆನಾ ಅಜೇಯ 86, ತಿಲಕ್‌ 59, ಕುಶಾಗ್ರ ಅಜೇಯ 43).

Advertisement
Advertisement

Udayavani is now on Telegram. Click here to join our channel and stay updated with the latest news.

Next