Advertisement

ಅಂಡರ್‌-19 ಕ್ರಿಕೆಟ್‌ ಭಾರತಕ್ಕೆ ಇನ್ನಿಂಗ್ಸ್‌ ಜಯ

12:30 AM Mar 01, 2019 | Team Udayavani |

ತಿರುವನಂತಪುರ: ಇಲ್ಲಿ ನಡೆದ ದ್ವಿತೀಯ ಅಂಡರ್‌-19 ಚತುರ್ದಿನ ಪಂದ್ಯದಲ್ಲಿ ಭಾರತ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಇನ್ನಿಂಗ್ಸ್‌ ಹಾಗೂ 158 ರನ್ನುಗಳಿಂದ ಮಣಿಸಿದೆ. 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.

Advertisement

ದಕ್ಷಿಣ ಆಫ್ರಿಕಾದ 152 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಭಾರತ 395 ರನ್‌ ಪೇರಿಸಿತ್ತು. ಆರಂಭಕಾರ ಯಶಸ್ವಿ ಜೈಸ್ವಾಲ್‌ 173, ಕೆಳ ಸರದಿಯ ಆಟಗಾರ ವೈಭವ್‌ ಕಂಡಾಲ್‌ 120 ರನ್‌ ಬಾರಿಸಿ ಹರಿಣಗಳ ಮೇಲೆ ಸವಾರಿ ಮಾಡಿದರು.

243 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ದಕ್ಷಿಣ ಆಫ್ರಿಕಾ ದ್ವಿತೀಯ ಸರದಿಯಲ್ಲಿ ತೀವ್ರ ಕುಸಿತ ಆನುಭವಿಸಿ ಬರೀ 85 ರನ್ನುಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ರೆಕ್ಸ್‌ ಸಿಂಗ್‌ 4, ಅಂಶುಲ್‌ ಕಾಂಬೋಜ್‌ 3, ಮನಿಷಿ 2 ವಿಕೆಟ್‌ ಕಿತ್ತು ಪ್ರವಾಸಿಗರಿಗೆ ಬಲೆ ಬೀಸಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-152 ಮತ್ತು 85. ಭಾರತ-395.

Advertisement

Udayavani is now on Telegram. Click here to join our channel and stay updated with the latest news.

Next