ಸಕಲೇಶಪುರ: ಪುರಸಭೆ ಚುನಾವಣೆ ಮುಗಿದು ಸುಮಾರು ಒಂದು ವರ್ಷವಾಗುತ್ತ ಬಂದಿದ್ದರೂ ನ್ಯಾಯಾಲ ಯದ ವಿಚಾರಣೆಯಲ್ಲಿರುವ ಮೀಸ ಲಾತಿ ಗೊಂದಲದ ಪ್ರಕರಣದ ಬಗೆಹರಿ ದಿಲ್ಲ. ಇದೀಗ ರಾಜ್ಯದಲ್ಲಿ ನೂತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗಲಾದರೂ ಪುರಸಭೆಯ ಮೀಸಲಾತಿ ಗೊಂದಲ ಬಗೆಹರಿಯುತ್ತದೆಯೋ ಎಂದು ಕಾದು ನೋಡಬೇಕಾಗಿದೆ.
2018ರ ಆಗಸ್ಟ್ ಅಂತ್ಯದಲ್ಲಿ ಪುರಸಭೆಗೆ ಚುನಾವಣೆ ನಡೆಯಿತು. ಚುನಾವಣೆ ಮುಗಿದು ಸರಿ ಸುಮಾರು ಒಂದು ವರ್ಷವಾಗುತ್ತ ಬಂದಿದ್ದು ನ್ಯಾಯಾಲಯದ ಅಂಗಳ ದಲ್ಲಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕರಣವನ್ನು ಕಾಂಗ್ರೆಸ್- ಮೈತ್ರಿ ಸರ್ಕಾರ ಬಗೆಹರಿಸುವಲ್ಲಿ ವಿಫಲವಾಗಿತ್ತು. ಇದರಿಂದ ಪಟ್ಟಣಗಳ ಅಭಿವೃದ್ಧಿಗೆ ಮಾರಕವಾಗಿದೆ.
ನ್ಯಾಯಾಲಯದ ಮೊರೆ: ಕಳೆದ 2013-2018 ನೇ ಸಾಲಿನಲ್ಲಿ ಮೊದಲ 2.5 ವರ್ಷ ಸಾಮಾನ್ಯ ವರ್ಗಕ್ಕೆ ಮೀಸ ಲಾಗಿದ್ದು ಉಳಿದ ಎರಡನೇ ಅವಧಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಪುರಸಭೆಯ ಅವಧಿ ಮುಗಿದು 2018ರ ಸೆಪ್ಪೆಂಬರ್‌ನಲ್ಲಿ ಚುನಾವಣೆ ನಡೆದು ಫಲಿತಾಂಶ ಹೊರಹೊಮ್ಮಿದ್ದು ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಎ) ಮಹಿಳೆ ಹಾಗೂ ಉಪಾಧ್ಯಕ್ಷ ಎಸ್.ಟಿ ಪುರುಷ ಸ್ಥಾನಕ್ಕೆ ಮೀಸಲಾತಿ ಬಂದಿತ್ತು. ಆದರೆ ಇದರ ವಿರುದ್ಧ ಕೆಲವರು ನ್ಯಾಯಾಲ ಯಕ್ಕೆ ಹೋಗಿದ್ದರಿಂದ ಇನ್ನು ನ್ಯಾಯಾಲ ಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಅಂತಿಮ ತೀರ್ಪು ಹೊರ ಬಾರದ ಹಿನ್ನೆಲೆಯಲ್ಲಿ ಪುರಸಭೆ ಅಧಿ ಕಾರಿಗಳು ಹಾಗೂ ಸಿಬ್ಬಂದಿಗಳ ಹಿಡಿತ ದಲ್ಲಿದ್ದು ಇದರಿಂದ ಪಟ್ಟಣದ ಅಭಿವೃದ್ಧಿಗೆ ಪ್ರಮುಖ ತೀರ್ಮಾನ ಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಪಟ್ಟಣದಲ್ಲಿ ಗಂಭೀರ ಸಮಸ್ಯೆ: ಪಟ್ಟಣದ ಮುಖ್ಯ ರಸ್ತೆ ಅಗಲಿಕರಣ, ಕಸ ವಿಲೇವಾರಿ ಸಮಸ್ಯೆ, ಶುದ್ಧ ಕುಡಿವ ನೀರಿನ ಸಮಸ್ಯೆ ಸೇರಿದಂತೆ ಇನ್ನು ಹಲವಾರು ಗಂಭೀರ ಸಮಸ್ಯೆಗಳಿವೆ.
ಒಟ್ಟು 23 ಸದಸ್ಯ ಬಲದ ಸಕಲೇಶ ಪುರ ಪುರಸಭೆಯಲ್ಲಿ 14 ಜೆಡಿಎಸ್, ಕಾಂಗ್ರೆಸ್ 4, ಬಿಜೆಪಿ 2, ಪಕ್ಷೇತರ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 19ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿಯೊಬ್ಬರು ಜೆಡಿಎಸ್‌ಗೆ ಬೆಂಬಲ ನೀಡಿ ರುವುದರಿಂದ ಜೆಡಿಎಸ್ 15 ಸ್ಥಾನಗಳನ್ನು ಗಳಿಸಿದ್ದು ಸರಳ ಬಹುಮತ ಹೊಂದಿದೆ.
ಮೈತ್ರಿ ಸರ್ಕಾರ ಮೀಸಲಾತಿ ಪ್ರಕರಣ ಬಗೆಹರಿಸಲು ಆಸಕ್ತಿ ತೋರದ ಕಾರಣ ಪುರಸಭೆ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ.
● ಸುಧೀರ್ ಎಸ್.ಎಲ್