Advertisement

ಕಂಟ್ರೋಲ್‌ ತಪ್ಪಿದ ಕೋವಿಡ್: ಫೀಲ್ಡಿಗಿಳಿದ ಖಾಕಿ

08:08 PM May 21, 2021 | Team Udayavani |

ವಾಡಿ: ಕಂಟ್ರೋಲ್‌ ತಪ್ಪಿದ ಕೋವಿಡ್ ಸೋಂಕು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಘೋಷಿಸಿದ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್‌ ಯಶಸ್ವಿಗೊಳಿಸಲು ಗುರುವಾರ ಪಟ್ಟಣದಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು, ಸಾಮೂಹಿಕವಾಗಿ ಲಾಠಿ ಪ್ರದರ್ಶಿಸುವ ಮೂಲಕ ಸಿಮೆಂಟ್‌ ನಗರಿಯನ್ನು ಪೂರ್ತಿ ಸ್ತಬ್ಧ ಮಾಡುವಲ್ಲಿ ಸಫಲರಾದರು.

Advertisement

ಬೆಳ್ಳಂಬೆಳಗ್ಗೆ ಸೈರನ್‌ ಸದ್ದಿನೊಂದಿಗೆ ಪಿಎಸ್‌ಐ ವಿಜಯಕುಮಾರ ಭಾವಗಿ ನೇತೃತ್ವದಲ್ಲಿ ಕೋವಿಡ್‌ ಕರ್ತವ್ಯಕ್ಕೆ ಹಾಜರಾದ ಪೊಲೀಸರು, ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ಚೌಕ್‌, ಬಳಿರಾಮ ಚೌಕ್‌, ಶ್ರೀನಿವಾಸಗುಡಿ, ಬಸವೇಶ್ವರ ಚೌಕ್‌ ಸೇರಿದಂತೆ ವಿವಿಧೆಡೆ ಭದ್ರತೆಗಾಗಿ ನಿಯೋಜನೆಗೊಂಡರು.

ಹಾಲು, ಆಸ್ಪತ್ರೆ, ಮೆಡಿಕಲ್‌ ಸೇವೆ ಹೊರತುಪಡಿಸಿ ತರಕಾರಿ, ಕಿರಾಣಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಅಂಗಡಿ ಮುಗ್ಗಟ್ಟುಗಳಿಗೆ ಸಂಪೂ ರ್ಣ ಬೀಗ ಬಿದ್ದಿತ್ತು. ಕೆಲ ಖಾಸಗಿ ಕ್ಲಿನಿಕ್‌ ಮತ್ತು ಔಷಧ ಅಂಗಡಿಗಳು ಮುಚ್ಚಿದ್ದವು.ರೈಲು ಮೂಲಕ ಪಟ್ಟಣಕ್ಕೆ ಆಗಮಿಸಿ ವಿವಿಧ ಗ್ರಾಮಗಳಿಗೆ ಹೋಗಬೇಕಿದ್ದ ಪ್ರಯಾಣಿಕರು, ವಾಹನ ಸೌಲಭ್ಯವಿಲ್ಲದೇ ಪರದಾಡಿದರು.

ಸಿದ್ಧ ಕಾರಣಗಳನ್ನು ಒಪ್ಪಿಸಿ ಪೊಲೀಸ ರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವಾಹನ ಚಾಲಕರು ಮತ್ತು ಬೈಕ್‌ ಸವಾರರು ಲಾಠಿ ರುಚಿ ಉಂಡರು. 21 ಬೈಕ್‌, ಒಂದು ಕಾರು, ಎರಡು ಕ್ರೂಸರ್‌ಗಳನ್ನು ಪೊಲೀಸರು ಜಪ್ತಿಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next