Advertisement

ಸದಲಗಾದಲ್ಲಿ ಅಸ್ವಚ್ಛತೆ ಕಾಟ

12:56 PM Feb 07, 2020 | Suhan S |

ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆ ಮೇಲೆ ಸ್ವಚ್ಛತೆ ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರಿಗೆ ನಿತ್ಯ ಬೇಸರ ತರಿಸುತ್ತಿದೆ. ತಾಲೂಕಾ ಕೇಂದ್ರವಾಗಲು ತುದಿಗಾಲಲ್ಲಿ ನಿಂತ್ತಿರುವ

Advertisement

ಸದಲಗಾ ಪಟ್ಟಣವು ಪುರಸಭೆ ಹೊಂದಿದೆ. ಸ್ವಚ್ಛತೆಯಲ್ಲಿ ಗ್ರಾಮೀಣ ಪ್ರದೇಶ ಎಷ್ಟೊಂದು ಮುಂದೆ ಇದ್ದು, ಆದರೆ ಸದಲಗಾ ಪಟ್ಟಣವು ಅಸ್ವತ್ಛತೆಯಿಂದ ಗಬ್ಬೆದ್ದು ನಾರುತ್ತಿದೆ. ಪಟ್ಟಣದ ಚರಂಡಿಗಳು ಕಸದಿಂದ ತುಂಬಿಕೊಂಡಿವೆ. ಹಂದಿಗಳು ಚರಂಡಿಯಲ್ಲಿ ವಾಸ ಮಾಡಿ ಗಬ್ಬೆದ್ದು ವಾಸನೆ ಬರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪುರಸಭೆ ವ್ಯಾಪ್ತಿಗೆ ಬರುವ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಕೆಳ ಹಂತದ ಸುಮಾರು ಹತ್ತಾರು ವಾಣಿಜ್ಯ ಮಳಿಗೆಯನ್ನು ಬಾಡಿಗೆ ಕೊಡಲಾಗಿದೆ. ಅಲ್ಲಿ ಹೋಟೆಲ್‌, ಪಾನ್‌ ಶಾಪ್‌, ಬೇಕರಿ, ಮೊಬೈಲ್‌ ಅಂಗಡಿ, ಹಣ್ಣಿನ ಅಂಗಡಿ ಹೀಗೆ ಹತ್ತಾರು ವ್ಯಾಪಾರಸ್ಥರು ವಹಿವಾಟು ಮಾಡುತ್ತಾರೆ. ಆದರೆ ಬಸ್‌ ನಿಲ್ದಾಣದ ಹತ್ತಿರ ಸುಳಿದಾಡುವ ಪುಂಡಪೋಕರಿಗಳು ಮದ್ಯ ಸೇವಿಸಿ ಅಲ್ಲಿಯೇ ಬಾಟಲಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ಅಲ್ಲಿಯೇ ತಿಂಡಿ ತಿನಿಸುಗಳ ಪ್ಲಾಸ್ಟಿಕ್‌ ಬಿಸಾಡಿದ್ದಾರೆ. ಇದರಿಂದ ಪರಸರಕ್ಕೆ ಹಾನಿಯಾಗುತ್ತಿದೆ ಎಂದು ಪ್ರಜ್ಞಾವಂತರು ಆರೋಪಿಸಿದ್ದಾರೆ.

ದುರ್ವಾಸನೆಯಿಂದ ಕಂಗೆಟ್ಟ ಜನ: ಕೆಳ ಹಂತದ ವಾಣಿಜ್ಯ ಮಳಿಗೆಗಳು ಬಾಡಿಗೆ ರೂಪದಲ್ಲಿ ಇದ್ದರೆ ಮೇಲಾºಗದ ಮಳಿಗೆಗಳು ಖಾಲಿ ಇವೆ. ಅಲ್ಲಿಯ ದುರ್ವಾಸನೆಯಿಂದ ಕಂಗೆಟ್ಟಿರುವ ಜನ ಯಾರು ಬಾಡಿಗೆ ಪಡೆಯಲು ಮುಂದೆ ಬರುತ್ತಿಲ್ಲ, ಹಗಲು ಹೊತ್ತಿನಲ್ಲಿಯೇ ಕಿಡಿಗೇಡಿಗಳು ಮಳಿಗೆ ಮೇಲೆ ಮೂತ್ರ ಮಾಡುವದರಿಂದ ರಸ್ತೆ ಮೇಲೆ ಹಾದು ಹೋಗುವ ಸಾರ್ವಜನಿಕರಿಗೆ ದುರ್ವಾಸನೆ ಬರುತ್ತಿದೆ.

ಶೌಚಾಲಯವೇ ಇಲ್ಲ: ಸದಲಗಾ ಪಟ್ಟಣದ ಹೃದಯ ಭಾಗವಾದ ಬಸ್‌ ನಿಲ್ದಾಣ ಹಾಗೂ ಬಾಜಿ ಮಾರ್ಕೆಟ್‌ ಬಳಿ ಸಾರ್ವಜನಿಕ ಶೌಚಾಲಯ ಇಲ್ಲವಾಗಿದೆ. ಇದರಿಂದ ಸಾರ್ವಜನಿಕರು ಬಯಲಲ್ಲಿ ಮೂತ್ರ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಪಟ್ಟಣದ ಬಸ್‌ ನಿಲ್ದಾಣದ ಬಳಿ ಶೌಚಾಲಯ ಇಲ್ಲದೇ ಇರುವುದರಿಂದ ಸಾರ್ವಜನಿಕರು ಪುರಸಭೆ ವಾಣಿಜ್ಯ ಮಳಿಗೆ ಮೇಲ್ಭಾಗದ ಬಯಲಿನಲ್ಲಿ ಮೂತ್ರ ಮಾಡಿ ಗಲಿಜು ಮಾಡಲಾಗುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ವಾಣಿಜ್ಯ ಮಳಿಗೆ ಮೇಲ್ಭಾಗವನ್ನು ಸ್ವಚ್ಛಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಪಟ್ಟಣದ ಬಸ್‌ ನಿಲ್ದಾಣದ ಮುಂಭಾಗದ ಪುರಸಭೆಗೆ ಒಳಪಡುವ ವ್ಯಾಪಾರಿ ಮಳಿಗೆ ಮೇಲ್ಭಾಗದಲ್ಲಿ ಸಾರ್ವಜನಿಕರು ಗಲಿಜು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಸ್ವಚ್ಛಗೊಳಿಸಿ ಪಟ್ಟಣದ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು.  –ಪ್ರವೀಣ ಗರದಾಳೆ, ಪರಿಸರ ಅಭಿಯಂತರ ಸದಲಗಾ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next