Advertisement

Unclaimed Deposits: 78,213 ಕೋಟಿ ಬ್ಯಾಂಕ್‌ ಠೇವಣಿಗೆ ಮಾಲೀಕರಿಲ್ಲ!

10:52 AM May 31, 2024 | |

ಮುಂಬೈ: ಬ್ಯಾಂಕುಗಳಲ್ಲಿನ ವಾರಸುದಾರರಿಲ್ಲದ ಠೇವಣಿಯ ಮೊತ್ತವು ಕಳೆದ ವರ್ಷದಿಂದ ಈ ವರ್ಷಕ್ಕೆ ಶೇ.26ರಷ್ಟು ಹೆಚ್ಚಳವಾಗಿದ್ದು, ಮಾರ್ಚ್‌ ಅಂತ್ಯದ ವೇಳೆಗೆ ಈ ಮೊತ್ತ 78,213 ಕೋಟಿ ರೂ.ಗಳಾಗಿವೆ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:Uttar Karnataka cuisines: ಕಣ್ಮರೆಯಾಗುತ್ತಿರುವ ಉತ್ತರಕರ್ನಾಟಕ ಅಡುಗೆಗಳು

2023ರ ಮಾರ್ಚ್‌ ಅಂತ್ಯದಲ್ಲಿ ಡೆಪಾಸಿಟರ್‌ ಎಜುಕೇಷನ್‌ ಆ್ಯಂಡ್‌ ಅವೇರ್‌ನೆಸ್‌(ಡಿಇಎ) ಫಂಡ್‌ನ‌ಲ್ಲಿದ್ದ ಒಟ್ಟು ಮೊತ್ತ 62,225 ಕೋಟಿ ರೂ. ಗಳಾಗಿದ್ದವು. ಸಹಕಾರಿ ಬ್ಯಾಂಕುಗಳು ಸೇರಿದಂತೆ ದೇಶದ ಎಲ್ಲ ಬ್ಯಾಂಕುಗಳು ಕೂಡ ತಮ್ಮ ಖಾತೆಗಳಲ್ಲಿ 10 ಅಥವಾ
ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ವಿತ್‌ ಡ್ರಾ ಆಗದೇ ಬಾಕಿ ಉಳಿದ ಠೇವಣಿಗಳನ್ನು ಆರ್‌ಬಿಐನ ಡಿಇಒ ನಿಧಿಗೆ ವರ್ಗಾಯಿಸುತ್ತವೆ.

2025ರ ಜಿಡಿಪಿ ಪ್ರಗತಿ ಅಂದಾಜು ಶೇ.7:
ಇದೇ ವೇಳೆ, ಏಪ್ರಿಲ್‌ನಿಂದ ಆರಂಭವಾಗಿರುವ 2024-25ರ ಆರ್ಥಿಕ ವರ್ಷದ ಜಿಡಿಪಿ ಪ್ರಗತಿ ದರ ಶೇ.7ರಷ್ಟಿರಲಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಅಂದಾಜಿಸಿದೆ. 2023-24ರಲ್ಲಿ ದೇಶವು ಶೇ.7.6ರ ದರದ ಆರ್ಥಿಕ ಪ್ರಗತಿ ಸಾಧಿಸಿತ್ತು. ಅದಕ್ಕಿಂತ ಹಿಂದಿನ ವರ್ಷ ಇದು ಶೇ.7.0 ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next