Advertisement

ಅನಧಿಕೃತ ದೇವಸ್ಥಾನ-ಮಸೀದಿ ತೆರವು ಕಾರ್ಯ

12:28 PM Jan 11, 2020 | Suhan S |

ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಶುಕ್ರವಾರ   ನಗರಸಭೆ, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಅವಳಿ ನಗರದಲ್ಲಿದ್ದ ಅನಧಿಕೃತ ದೇವಸ್ಥಾನ ಹಾಗೂ ಮಸೀದಿಗಳನ್ನು ತೆರವುಗೊಳಿಸಲಾಯಿತು.

Advertisement

ಸರ್ವೋಚ್ಚ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶದ ಮೇರೆಗೆ ಸಾರ್ವಜನಿಕ ರಸ್ತೆ, ಉದ್ಯಾನವನ ಹಾಗೂ ಅನ ಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕೆಂಬ ಆದೇಶದ ಮೇರೆಗೆ ಹಲವಾರು ಸಿಬ್ಬಂದಿ ನೇತೃತ್ವದಲ್ಲಿ ರಬಕವಿ-ಬನಹಟ್ಟಿ-ರಾಮಪುರ-ಹೊಸೂರ ನಗರಗಳ ಒಟ್ಟು 8 ದೇವಸ್ಥಾನ ಹಾಗೂ 1 ಮಸೀದಿ ತೆರವುಗೊಳಿಸುವ ಯೋಜನೆ ಕೈಗೊಳ್ಳಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿನ ಬನಹಟ್ಟಿ ಪೊಲೀಸ್‌ ಠಾಣೆ ಎದುರಿನ ಚಂದ್ರವ್ವದೇವಿ ದೇವಸ್ಥಾನ, ಲಕ್ಷ್ಮೀ ನಗರದ ಬನ್ನೆವ್ವಾ ಹಾಗೂ ಮಾರುತಿ ದೇವಸ್ಥಾನ, ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಮಸೀದಿ, ರಬಕವಿಯ ಕೊಕ್ಕಳಕಿ ಬಾವಿ ಹತ್ತಿರದ ಗಣಪತಿ ದೇವಸ್ಥಾನ, ಭಜಂತ್ರಿ ಗಲ್ಲಿಯ ಲಕ್ಷ್ಮೀ ದೇವಸ್ಥಾನ, ಹಜಾರೆ ಮನೆ ಹತ್ತಿರದ ಲಕ್ಷ್ಮೀ ದೇವಸ್ಥಾನ, ರಾಮಪುರದ ಡಾ| ಬಡಚಿಕರ ಮನೆ ಹತ್ತಿರದ ನಾಗಪ್ಪನ ಗುಡಿ ಹಾಗೂ ಸಮಾಜ ಮಂದಿರ ಹತ್ತಿರದ ಹನಮಂತ ದೇವಸ್ಥಾನ ಹೀಗೆ ಎಲ್ಲ ದೇವಸ್ಥಾನಗಳ ತೆರವುಗೊಳಿಸಲಾಯಿತು.

ಈ ವೇಳೆ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಠಾಣಾ ಧಿಕಾರಿ ರವಿ ಧರ್ಮಟ್ಟಿ, ಕಂದಾಯ ಅಧಿಕಾರಿ ರಮೇಶ ಮಳ್ಳಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶರಣಪ್ಪನವರ, ಅಭಿಯಂತರ ವೈಷ್ಣವಿ ಹಿಪ್ಪರಗಿ, ಬಿ.ಕೆ. ಮಠದ, ಎಂ.ಎಂ. ಮುಗಳಖೋಡ, ಬಿ.ಪಿ. ಚೌದರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next