Advertisement
ಅನಧಿಕೃತ ಸಂಚಾರಿ ವೆಲ್ಡಿಂಗ್ ಉದ್ಯಮ ಕಾರ್ಯಾಚರಣೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬದಿಯಡ್ಕ ವಲಯ ಫೇಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ಯುನಿಟ್ ಅಸೋಸಿಯೇಷನ್ ವಲಯಾಧ್ಯಕ್ಷ ರಾಮಕೃಷ್ಣ ರೈ,ಖಜಾಂಜಿ ವಿಲ್ಫೆÅಡ್ ಡಿಸೋಜಾ,ಜತೆಕಾರ್ಯದರ್ಶಿ ನವೀನ್ ಕುಮಾರ್,ಸದಸ್ಯರಾದ ವಸಂತ ಕುಮಾರ್,ವಿಜಯ ಕುಮಾರ್,ಗಿರೀಶ್ ರೈ,ಅಶೋಕ್ ಕುಮಾರ್ ನೇತೃತ್ವದಲ್ಲಿ ಎಣ್ಮಕಜೆ ಗ್ರಾ.ಪಂ.ಕಾರ್ಯದರ್ಶಿ ಅವರಿಗೆ ಮನವಿ ನೀಡಿ ಆಗ್ರಹಿಸಿದರು.ಮನವಿ ಸ್ವೀಕರಿಸಿದ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸರಕಾk ದಿಂದ ಅಂಗೀಕಾರ ಪಡೆಯದೆ,ಯಾವುದೇ ಮಾನದಂಡ ಗಳನ್ನು ಪಾಲಿಸದೆ ಗ್ರಾ.ಪಂ.ಪರವಾಣಿಗೆ,ದಾಖಲೆ ಇಲ್ಲದೆ ಅನಧಿಕೃತ ವೆಲ್ಡಿಂಗ್ ಘಟಕಗಳು ತಲೆಯೆ ತ್ತಿದ್ದು ಇದರಿಂದ ಅಧಿಕೃತ ಉದ್ದಿಮೆದಾರರಿಗೆ ಕೆಲಸವಿಲ್ಲದಿರುವ ಪರಿಸ್ಥಿತಿ ಉಂಟಾಗಿದೆ.ಕಾರ್ಮಿಕರಿಗೆ ವೇತನ ಪಾವತಿ,ಕಟ್ಟಡ ಬಾಡಿಗೆ,ವಿದ್ಯುತ್ ಬಿಲ್ ಮೊದಾಲದವುಗಳನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಉದ್ದಿಮೆದಾರರು ತಿಳಿಸಿದ್ದಾರೆ.